HomeInternationalಹಿಮಸಾರಂಗಗಳ ಫೈಟ್​: ಗೆದ್ದವರ್ಯಾರು ಎಂಬುದಕ್ಕೆ ಇಲ್ಲಿದೆ ವಿಡಿಯೋ ಸಾಕ್ಷಿ

ಹಿಮಸಾರಂಗಗಳ ಫೈಟ್​: ಗೆದ್ದವರ್ಯಾರು ಎಂಬುದಕ್ಕೆ ಇಲ್ಲಿದೆ ವಿಡಿಯೋ ಸಾಕ್ಷಿ

ಹಿಮದಲ್ಲಿ ಆರೋಗ್ಯಕರ ಹುಲ್ಲನ್ನು ಹುಡುಕುತ್ತಿರುವ ಹಿಮಸಾರಂಗದ ಸಣ್ಣ ವಿಡಿಯೋ ವೈರಲ್ ಆಗಿದ್ದು, ಇದು ಬೆಚ್ಚಿ ಬೀಳಿಸುವುದು ಗ್ಯಾರೆಂಟಿ. ಹಿಮ ಸಾರಂಗ ನೋಡಲು ಸುಂದರವಾಗಿದ್ದರೂ ಬೆಚ್ಚಿ ಬೀಳಿಸುವುದು ಏಕೆ ಅಂತೀರಾ? ಹಾಗಿದ್ದರೆ ಈ ವಿಡಿಯೋ ನೋಡಬೇಕು.

ಈ ವಿಡಿಯೋ ನೋಡಿದಾಗ ಮೊದಲಿಗೆ ಏನು ಎಂದು ಅರ್ಥ ಆಗುವುದಿಲ್ಲ. ಎರಡೆರಡು ಜೊತೆ ಕೋಡುಗಳು ಇರುವಂತೆ ಕಾಣುತ್ತದೆ. ಆದರೆ ಅಸಲಿಗೆ ಆಗಿರುವುದೇ ಬೇರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದು ಇನ್ನೊಂದು ಹಿಮ ಸಾರಂಗದ ಜೊತೆ ಜಗಳವಾಗಿ ಬಂದಿದೆ. ಸತ್ತುಹೋಗಿರುವ ಹಿಮಸಾರಂಗದ ಕೋಡು ಈ ಹಿಮಸಾರಂಗದ ಕೋಡಿಗೆ ಅಂಟಿಕೊಂಡಿದೆ. ಇದನ್ನು ನೋಡಿದರೆ ಇವೆರಡು ಅದೆಷ್ಟು ಭೀಕರವಾಗಿ ಜಗಳವಾಡಿರಬಹುದು ಎಂಬುದನ್ನು ಕಲ್ಪನೆ ಮಾಡಿಕೊಳ್ಳಬಹುದು.

“ಜಿಂಕೆಗಳು ಜಗಳವಾಡುತ್ತವೆ ಮತ್ತು ಯಾರು ಗೆದ್ದಿದ್ದಾರೆ ಎಂಬುದು ಸ್ಪಷ್ಟವಾಗಿದೆ……” ಎಂದು ಇದಕ್ಕೆ ಶೀರ್ಷಿಕೆ ಕೊಟ್ಟಿದ್ದಾರೆ. ಈ ವಿಡಿಯೋ ಇದಾಗಲೇ 10 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.

https://twitter.com/tgwl5747/status/1629850638900252678?ref_src=twsrc%5Etfw%7Ctwcamp%5Etweetembed%7Ctwterm%5E1629850638900252678%7Ctwgr%5E97e6d41644bb316fba2371447a9007fe41880241%7Ctwcon%5Es1_&ref_url=https%3A%2F%2Fwww.news18.com%2Fbuzz%2Fwatch-reindeer-roams-around-with-his-opponents-head-stuck-in-antlers-7173679.html

For Latest News Updates, Join Our Whatsapp Community🚩
RELATED ARTICLES

Most Popular