HomeInternationalಗುಲಾಬಿ ಬಣ್ಣದ ಆನೆ ನೋಡಿರುವಿರಾ ? ಇಲ್ಲಿದೆ ವೈರಲ್​ ವಿಡಿಯೋ

ಗುಲಾಬಿ ಬಣ್ಣದ ಆನೆ ನೋಡಿರುವಿರಾ ? ಇಲ್ಲಿದೆ ವೈರಲ್​ ವಿಡಿಯೋ

ವನ್ಯಜೀವಿ ವೀಡಿಯೋಗಳನ್ನು ನೋಡಲು ಯಾವಾಗಲೂ ಖುಷಿಯಾಗುತ್ತದೆ. ಅವುಗಳ ಬೇಟೆಯ ಶೈಲಿಯಿಂದ ಹಿಡಿದು ಅವರು ದೈನಂದಿನ ದಿನಚರಿಗಳವರೆಗೆ, ಹಲವಾರು ವಿಡಿಯೋಗಳು ವೈರಲ್​ ಆಗುತ್ತಿವೆ. ಅವುಗಳಲ್ಲಿ ಕೆಲವು ವೀಕ್ಷಕರನ್ನು ಆಕರ್ಷಿಸುವ ಅಪರೂಪದ ದೃಶ್ಯಗಳನ್ನು ಹೊಂದಿರುತ್ತವೆ.

ಅಂಥವುಗಳಲ್ಲಿ ಒಂದು ಈ ವಿಡಿಯೋ. ಮಾಲಾಮಾಲಾ ಗೇಮ್ ರಿಸರ್ವ್‌ನ ಅಧಿಕೃತ ಚಾನೆಲ್‌ನಿಂದ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರಲ್ಲಿ ನೀವು ಆನೆ ಮರಿಯೊಂದನ್ನು ನೋಡಬಹುದು. ಈ ಆನೆ ಮರಿಯ ವಿಶೇಷವೇನೆಂದರೆ, ಅದು ಸಾಧಾರಣದಂತೆ ಇಲ್ಲ, ಬದಲಿಗೆ ಗುಲಾಬಿ ಬಣ್ಣದ ಆನೆಮರಿಯಅಗಿದೆ.

ಈ ಪುಟಾಣಿ ಆನೆ, ತನ್ನ ಕುಟುಂಬದೊಂದಿಗೆ ಈಜುತ್ತಿರುವುದನ್ನು ನೋಡಬಹುದು. ಅದರ ಮೇಲೆ ಕೆಸರು ಮತ್ತು ಧೂಳು ಕುಳಿತಿರುವ ಕಾರಣ ಹೀಗೆ ಕಾಣುತ್ತಿರಬಹುದು ಎಂದು ಹಲವರು ವಾದಿಸಿದ್ದಾರೆ. ಆದರೆ ಆನೆ ಸ್ನಾನ ಮಾಡಿದ ನಂತರವೂ ಅದರ ಬಣ್ಣ ಗುಲಾಬಿಯಾಗಿಯೇ ಇರುವುದನ್ನು ನೋಡಬಹುದಾಗಿದೆ. ಇದು ನೆಟ್ಟಿಗರನ್ನು ಅಚ್ಚರಿಯಲ್ಲಿ ತೇಲಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular