ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕಾರ ಮಾಡಿದರು.ಜೂನ್ 9 ರಂದು ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ನಡೆದ ಈ ಪ್ರಮುಖ ರಾಜಕೀಯ ಘಟನೆಗೆ ವಿವಿಧ ಕ್ಷೇತ್ರಗಳ ಹಲವಾರು ಗಮನಾರ್ಹ ಹೆಸರುಗಳು ಸಾಕ್ಷಿಯಾದವು.
ಈ ವೇಳೆ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ನಿಗೂಢ ಪ್ರಾಣಿಯೊಂದು ಓಡಾಡಿದ್ದು, ವಿಡಿಯೋ ವೈರಲ್ ಆಗಿದೆ.
ಅದು ಚಿರತೆಯೇ? ಬೆಕ್ಕೇ? ಅಥವಾ ನಾಯಿ? ರಾಷ್ಟ್ರಪತಿ ಭವನದ ಯಾವ ಪ್ರಾಣಿ ಆಕಸ್ಮಿಕವಾಗಿ ಅಡ್ಡಾಡುತ್ತಿದೆ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ. ವಿಡಿಯೋ ಕೂಡ ವೈರಲ್ ಆಗಿದೆ. ಹಾಗೂ ಇದು ಎಡಿಟಿಂಗ್ ಮಾಡಿದ ವಿಡಿಯೋ ಕೂಡ ಇರಬಹುದು ಎಂಬ ಚರ್ಚೆ ಶುರುವಾಗಿದೆ.
Is that a wild animal in the background, strolling in the Rashtrapati Bhawan? pic.twitter.com/OPIHm40RhV
— We, the People of India (@India_Policy) June 10, 2024

