
.
ಅಭಿಷೇಕ್ ಕೆರ್ಕೆಟ್ಟಾ ಜಿಮ್ನಲ್ಲಿ ಧೋನಿ ಜೊತೆಗೆ ಸಂವಾದ ನಡೆಸುತ್ತಿರುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ವೈರಲ್ ಆಗುತ್ತಿದೆ. ಧೋನಿ ಅಭಿಮಾನಿಗಳು ಹಾಗು ಕ್ರಿಕೆಟ್ ಪ್ರಿಯರು ಧೋನಿಯ ಸರಳತೆಗೆ ವ್ಹಾವ್ ಎನ್ನುತ್ತಿದ್ದಾರೆ.
ತಮ್ಮ ಅಭಿಮಾನಿಗಳ ಜೊತೆ ಧೋನಿ ಎಷ್ಟು ಸರಳತೆಯಿಂದ ವರ್ತಿಸುತ್ತಾರೆ ಎಂಬ ಮೆಚ್ಚುಗೆಯ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಲ್ಲದೇ ಅನೇಕರು ಈ ರೀತಿ ಧೋನಿಯಿಂದ ಆಟೋಗ್ರಾಫ್ ಪಡೆದುಕೊಳ್ಳುವ ಭಾಗ್ಯ ನಮಗೆ ಯಾವಾಗ ಸಿಗುತ್ತೋ ಅಂತಾ ಕೇಳಿಕೊಳ್ತಿದ್ದಾರೆ.

