ವೈರಲ್ ವಿಡಿಯೋವೊಂದರಲ್ಲಿ ಲಕ್ಷ ಲಕ್ಷ ರೂಪಾಯಿ ಬೆಲೆಬಾಳುವ ಐಷಾರಾಮಿ ಕಾರ್ ಮಳೆ ನೀರಲ್ಲಿ ಸಿಲುಕಿ ಮುಂದಕ್ಕೆ ಹೋಗದೇ ನಿಂತಿದ್ರೆ ಎಲೆಕ್ಟ್ರಿಕ್ ಸ್ಕೂಟರ್ ತುಂಬಾ ಸುಲಭವಾಗಿ ಮಳೆ ನೀರಲ್ಲಿ ಮುಂದೆ ಹೋಗಿದೆ. ಈ ವಿಡಿಯೋ ನೆಟ್ಟಿಗರಲ್ಲಿ ನಗು ತರಿಸಿದ್ದು ಇಂತಹ ಸಂದರ್ಭದಲ್ಲಿ ಐಷಾರಾಮಿ ಕಾರ್ ಗಿಂತ ಸ್ಕೂಟರ್ ಬೆಸ್ಟ್ ಎನ್ನುವಂತಾಗಿದೆ.
32 ಲಕ್ಷ ರೂ. ಮೌಲ್ಯದ ಐಷಾರಾಮಿ ಕಾರು ಮರ್ಸಿಡಿಸ್-ಬೆನ್ಜ್ ಬಿ-ಕ್ಲಾಸ್ ಜಲಾವೃತವಾದ ರಸ್ತೆಯಲ್ಲಿ ಸಿಲುಕಿಕೊಂಡಿದೆ. ಆದರೆ ಎಲೆಕ್ಟ್ರಿಕ್ ಸ್ಕೂಟರ್ Ola S1 Pro ಅದೇ ಮಾರ್ಗದಲ್ಲಿ ಸುಲಭವಾಗಿ ದಾರಿಮಾಡಿಕೊಂಡು ಮುಂದೆ ಬಂದಿದೆ. ಈ ವಿಡಿಯೋ ಎಲ್ಲಿಯದ್ದು ಎಂಬುದು ಗೊತ್ತಾಗಿಲ್ಲ, ಆದರೆ ಅಂತರ್ಜಾಲದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.
ಎಚ್ ಎಸ್ ಶೇಖಾವತ್ ಎಂಬುವವರು ಟ್ವಿಟರ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದು, “ಇದು ಓಲಾದಲ್ಲಿ ಸಾಧ್ಯ. ಮರ್ಸಿಡಿಸ್ ನಿಂತಾಗ ಓಲಾ ಓಡುತ್ತದೆ” ಎಂದು ಪೋಸ್ಟ್ ಮಾಡಿದ್ದಾರೆ.
ಬಿಳಿ ಬಣ್ಣದ ಮರ್ಸಿಡಿಸ್ ಬೆಂಜ್ ಜಲಾವೃತಗೊಂಡ ರಸ್ತೆಯಿಂದ ಹೊರಬರಲು ಹೆಣಗಾಡುತ್ತಾ ರಸ್ತೆಯ ಬದಿಯಲ್ಲಿ ನಿಂತಿದ್ರೆ, ಓಲಾ ಎಸ್ 1 ಪ್ರೊ ಕಣ್ಣು ಮಿಟುಕಿಸುವಷ್ಟರಲ್ಲಿ ಇಡೀ ರಸ್ತೆ ದಾಟಿ ಸಾಗಿದೆ.
It's happens only in Ola..When Mercedes 🚗 stops but Ola 🛵 keep going @bhash @OlaElectric pic.twitter.com/N9oGFqYLzw
— H S Shekhawat (@HSShekh35915346) June 20, 2023

