HomeInternational3.97 ಇಂಚು ಉದ್ದದ ನಾಲಿಗೆ ಹೊಂದಿರುವ ವ್ಯಕ್ತಿ ಗಿನ್ನಿಸ್‌ ದಾಖಲೆಗೆ...!

3.97 ಇಂಚು ಉದ್ದದ ನಾಲಿಗೆ ಹೊಂದಿರುವ ವ್ಯಕ್ತಿ ಗಿನ್ನಿಸ್‌ ದಾಖಲೆಗೆ…!

ವಾಷಿಂಗ್ಟನ್: ಅಮೆರಿಕದ 24 ವರ್ಷದ ಯುವಕ ನಿಕ್ ಸ್ಟೋ ಬರ್ಲ್‌ ಅತಿ ದೊಡ್ಡ ನಾಲಿಗೆ ಹೊಂದುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಪುಟ ಸೇರಿದ್ದಾನೆ.

ಕ್ಯಾಲಿಫೋರ್ನಿಯಾದ ನಿಕ್ ಸ್ಟೋ ಬರ್ಲ್‌ ನಾಲಿಗೆ ತುದಿಯಿಂದ ಬುಡದವರೆಗೆ ಒಟ್ಟು 10.1 ಸೆಂ.ಮೀ ಅಂದರೆ 3.97 ಇಂಚು ಉದ್ದವಿದೆ. ಈ ಮೂಲಕ ಜಗತ್ತಿನ ಅತ್ಯಂತ ಉದ್ದದ ನಾಲಿಗೆ ಹೊಂದಿರುವ ವ್ಯಕ್ತಿ ಎಂಬ ದಾಖಲೆಗೆ ಸೇರಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಾಸ್ಯ ಕಲಾವಿದನಾಗಿರುವ ನಿಕ್ ತನ್ನ ನಾಲಿಗೆ ಮಾಡಿರುವ ದಾಖಲೆಯ ಬಗ್ಗೆ ಹೆಮ್ಮೆಪಟ್ಟಿದ್ದಾರೆ. ತಾನು ನಾಲಿಗೆಯಿಂದ ಮೂಗನ್ನಷ್ಟೇ ಅಲ್ಲ ತನ್ನ ಮುಂಗೈಯನ್ನೂ ನೆಕ್ಕಬಲ್ಲೆ ಎಂದು ಬಣ್ಣಿಸಿಕೊಂಡಿರುವ ನಿಕ್, ಪ್ರತಿದಿನ ಬೆಳಿಗ್ಗೆ ನಾಲಿಗೆಯನ್ನು ಉಜ್ಜಿಕೊಳ್ಳಲು ಹೆಚ್ಚು ಸಮಯ ಬೇಕಾಗುತ್ತದೆ ಎಂದಿದ್ದಾರೆ.

2002ರಿಂದಲೂ ಈ ದಾಖಲೆ ಬ್ರಿಟ್ ಸ್ಟೀ ಫನ್ ಟೇಲರ್ ಅವರ ಹೆಸರಿನಲ್ಲಿತ್ತು. ಅವರ ನಾಲಿಗೆ 9.8 ಸೆಂ.ಮೀ. ಉದ್ದ ಇದೆ.

For Latest News Updates, Join Our Whatsapp Community🚩
RELATED ARTICLES

Most Popular