HomeIndiaವಯಸ್ಸಾದ ಜೋಡಿಯ ಮುದ್ದಾದ ಪ್ರೀತಿಗೆ ಫಿದಾ ಆಗ್ಹೋದ ಫೋಟೋಗ್ರಾಫರ್;‌ ವಿಡಿಯೋ ವೈರಲ್

ವಯಸ್ಸಾದ ಜೋಡಿಯ ಮುದ್ದಾದ ಪ್ರೀತಿಗೆ ಫಿದಾ ಆಗ್ಹೋದ ಫೋಟೋಗ್ರಾಫರ್;‌ ವಿಡಿಯೋ ವೈರಲ್

ಪ್ರೀತಿ ಎಂದರೇನು, ಈ ಪ್ರಶ್ನೆಗೆ ಉತ್ತರವನ್ನು ನೀವು ತಿಳಿದುಕೊಳ್ಳಬೇಕಾದರೆ, ನೀವು ಹಿರಿಯರೊಂದಿಗೆ ಮಾತನಾಡಬೇಕು. ಯಾವುದೇ ವಯಸ್ಸಾದ ದಂಪತಿಗಳನ್ನು ನೋಡಿ, ಪ್ರೀತಿ ಹೇಗಿರುತ್ತದೆ ಅನ್ನೊ ಪ್ರಶ್ನೆಗೆ ಅದ್ಭುತ ಉತ್ತರ ಸಿಗುತ್ತೆ. ಅಂತಹ ಪ್ರೀತಿಗೆ ಸಾಕ್ಷಿಯಾಗಿದೆ ತಮ್ಮದೇ ಪ್ರೇಮಲೋಕದಲ್ಲಿ ಮುಳುಗೋಗಿರುವ ಈ ಜೋಡಿ.

ಇವರೇ ನೋಡಿ ಅಸಲಿ ಲವ್‌  ಬರ್ಡ್ಸ್, ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೆಶನ್ ಎಬ್ಬಿಸಿರುವ ಈ ಜೋಡಿ ನೋಡಿ ನೆಟ್ಟಿಗರು ಫುಲ್ ಫಿದಾ ಆಗೋಗಿದ್ದಾರೆ.

ಈ ವಯಸ್ಸಾದ ಹಿರಿಯ ಜೋಡಿ, ಸೂರ್ಯನ ಕಿರಣದ ಬೆಳಕಲ್ಲಿ ಬಿಸಿಲು ಕಾಯಿಸುತ್ತ, ಚಹಾ ಕುಡಿಯುತ್ತ ಕೂತಿದ್ದರು. ಆಗ ಅಲ್ಲೇ ಓಡಾಡುತ್ತಿದ್ದ ಫೋಟೋಗ್ರಾಫರ್ ಈ ಜೋಡಿಯನ್ನ ನೋಡಿದ್ದಾರೆ. ಅವರು ತಮ್ಮ ಕ್ಯಾಮರಾದಲ್ಲಿ ಈ ಜೋಡಿಯ ಫೋಟೋವನ್ನ ಕ್ಲಿಕ್ ಮಾಡಲು ಮುಂದಾಗಿದ್ದಾರೆ. ಆ ಸಮಯದಲ್ಲಿ ಆ ಜೋಡಿಯ ಮುಖದಲ್ಲಿ ಮೂಡಿದ ಖುಷಿ, ನಾಚಿಕೆ, ಮಂದಹಾಸ ನೋಡಿ ಖುದ್ದು ಫೋಟೋಗ್ರಾಫರ್ ಫಿದಾ ಆಗೋಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸುತೇಜ್ ಪನ್ನು ಮನೆಯ ಹೊರಗೆ, ಪತ್ನಿಯ ಜೊತೆಗೆ ಕೂತಿರುತ್ತಾರೆ. ಇವರನ್ನ ನೋಡಿ ಫೋಟೋಗ್ರಾಫರ್ ಪಂಜಾಬಿ ಭಾಷೆಯಲ್ಲಿ ಮಾತಾಡಿ, ಅವರ ಫೋಟೋ ಕ್ಲಿಕ್ಕಿಸುವುದಾಗಿ ಅನುಮತಿ ಕೇಳುತ್ತಾನೆ. ಅದಕ್ಕೆ ಆ ಜೋಡಿ ನಗ್ತಾ-ನಗ್ತಾ ಒಪ್ಪಿಕೊಳ್ಳುತ್ತೆ. ಅಷ್ಟೆ ಅಲ್ಲ ಅವರು ಮುಗ್ಧವಾಗಿ ಫೋಟೋಗೆ ಪೋಸ್ ಕೂಡ ಕೊಡ್ತಾರೆ. ಅವರ ಮುದ್ದು-ಮುದ್ದಾಗಿರುವ ವರ್ತನೆ ನೋಡಿ ಫೋಟೋಗ್ರಾಫರ್ ಮನಸೋತಿದ್ದಾರೆ.

ಇದೇ ಖುಷಿಯಲ್ಲಿ ಫೋಟೋ ಗ್ರಾಫರ್‌ ಅವರಿಬ್ಬರ ಫೋಟೋ ಅಲ್ಲೇ ಪ್ರಿಂಟ್ ಹಾಕಿಕೊಡುತ್ತಾರೆ. ಆ ಒಂದು ಘಳಿಗೆಯನ್ನ ಛಾಯಾಗ್ರಾಹಕ ತಮ್ಮ ಟ್ವಿಟ್ಟರ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಶೀರ್ಷಿಕೆಯಲ್ಲಿ ಈ ವೀಡಿಯೋ ಎಷ್ಟು ಮುದ್ದಾಗಿದೆ ಅಂದ್ರೆ, ಯಾರೊಬ್ಬರ ದಿನ ಕೂಡಾ ಅದ್ಭುತ ದಿನವನ್ನಾಗಿ ಮಾಡುತ್ತೆ ಎಂದು ಬರೆದುಕೊಂಡಿದ್ದಾರೆ. ನೆಟ್ಟಿಗರು ಕೂಡಾ ಈ ವಯಸ್ಸಾದ ಜೋಡಿಯ ಮುಗ್ಧತೆಯನ್ನ ನೋಡಿ, ಇವರ ನಿಷ್ಕಲ್ಮಶದ ಜೋಡಿ ನೋಡಿ ಮನಸೋತಿದ್ದಾರೆ.

https://youtu.be/q1y6TNUI1M8

For Latest News Updates, Join Our Whatsapp Community🚩
RELATED ARTICLES

Most Popular