HomeIndiaಈ ಕಾರಣಕ್ಕೆ ಮುಂಬೈಯನ್ನು ಅತಿಯಾಗಿ ಪ್ರೀತಿಸುತ್ತಾರಂತೆ ಇಂಗ್ಲೆಂಡ್​ ಕ್ರಿಕೆಟಿಗ ಮೈಕಲ್​ ವಾಘನ್​...!

ಈ ಕಾರಣಕ್ಕೆ ಮುಂಬೈಯನ್ನು ಅತಿಯಾಗಿ ಪ್ರೀತಿಸುತ್ತಾರಂತೆ ಇಂಗ್ಲೆಂಡ್​ ಕ್ರಿಕೆಟಿಗ ಮೈಕಲ್​ ವಾಘನ್​…!

ಇಂಗ್ಲೆಂಡ್​ ಕ್ರಿಕೆಟ್​ ತಂಡದ ಮಾಜಿ ನಾಯಕ ಮೈಕೆಲ್​ ವಾಘನ್​ ಐಸಿಸಿ ವಿಶ್ವಕಪ್​ 2023 ಸಂಬಂಧ ಭಾರತ್ಕೆ ಭೇಟಿ ನೀಡಿರುವ ಸಂದರ್ಭದಲ್ಲಿ ಭಾರತದ ಆರ್ಥಿಕ ರಾಜಧಾನಿ ಮುಂಬೈ ಬಗ್ಗೆ ತಮಗಿರುವ ಒಲವಿನ ಬಗ್ಗೆ ಮಾತನಾಡಿದ್ದಾರೆ. ನೆದರ್​ಲ್ಯಾಂಡ್​ ವಿರುದ್ಧ ಇಂಗ್ಲೆಂಡ್​ ಪಂದ್ಯಕ್ಕಾಗಿ ಮೈಕೆಲ್​ ವಾನ್​ ಪುಣೆಗೆ ಪ್ರಯಾಣ ಬೆಳೆಸಿದ್ದಾರೆ .

ತಮ್ಮ ಇತ್ತೀಚಿನ ಟ್ವಿಟರ್​ ಅಥವಾ ಈಗಿನ ಎಕ್ಸ್​ ಖಾತೆಯಲ್ಲಿ ಮೈಕೆಲ್​ ಮುಂಬೈ ಮೇಲೆ ತಮಗಿರುವ ವಿಶೇಷ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ. ಈ ನಗರದಲ್ಲಿ ಅವರು ಕ್ರಿಕೆಟ್​​ ಬಗ್ಗೆ ಇರುವ ಅತಿಯಾದ ಉತ್ಸಾಹವನ್ನು ಮೆಚ್ಚಿಕೊಂಡಿದ್ದಾರೆ. ಮುಂಬೈನಲ್ಲಿ ನಡೆದ ಗಲ್ಲಿ ಕ್ರಿಕೆಟ್​ ಪಂದ್ಯದ ಸಂದರ್ಭದಲ್ಲಿ ಇಲ್ಲಿನ ಜನರಿಗೆ ಇರುವ ಕ್ರಿಕೆಟ್​ ಕ್ರೇಜ್​ ಬಗ್ಗೆ ಹಾಗೂ ಇಲ್ಲಿನ ಸ್ಥಳೀಯ ಕ್ರಿಕೆಟ್​ ಪ್ರತಿಭೆಗಳ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಾನ್​ ತಮ್ಮ ಅಭಿಮಾನಿಗಳಿಗೆ ದೀಪಾವಳಿಯ ಶುಭಾಶಯ ಕೋರಿದ್ದಾರೆ. ನಾನು ಮುಂಬೈಯನ್ನು ಏಕೆ ತುಂಬಾ ಪ್ರೀತಿಸುತ್ತೇನೆ ಎಂದರೆ ಇಲ್ಲಿನ ಜನರ ಜೀವನ ಹಾಗೂ ಇವರಿಗೆ ಕ್ರಿಕೆಟ್​ ಮೇಲಿರುವ ಉತ್ಸಾಹವಾಗಿದೆ.ಇಲ್ಲಿನ ಜನರು ಕ್ರಿಕೆಟ್​ ಬಗ್ಗೆ ತುಂಬಾ ಸಂತೋಷ ಹಾಗೂ ತೃಪ್ತಿಯನ್ನು ಹೊಂದಿದ್ದಾರೆ. ಭಾರತದ ಪ್ರತಿಯೊಬ್ಬರಿಗೂ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular