HomeIndiaರೊಚ್ಚಿಗೆದ್ದು ಘರ್ಜಿಸಿದ ಹುಲಿ; ತತ್ತರಿಸಿದ ಪ್ರವಾಸಿಗರು......!

ರೊಚ್ಚಿಗೆದ್ದು ಘರ್ಜಿಸಿದ ಹುಲಿ; ತತ್ತರಿಸಿದ ಪ್ರವಾಸಿಗರು……!

ಉತ್ತರಾಖಂಡ: ಸಿಟ್ಟಿಗೆದ್ದ ಹುಲಿಯೊಂದು ಸಫಾರಿ ಜೀಪಿನ ಮೇಲೆ ಸವಾರಿ ಮಾಡುತ್ತಿದ್ದ ಪ್ರವಾಸಿಗರನ್ನು ದೂಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ದೃಶ್ಯವನ್ನು ಸಫಾರಿ ವಾಹನದಲ್ಲಿ ಬಂದಿದ್ದ ಪ್ರವಾಸಿಗರೊಬ್ಬರು ಕ್ಯಾಮರಾದಲ್ಲಿ ಸೆರೆಹಿಡಿದು ಭಯಾನಕ ಘಟನೆಯನ್ನು ಅನುಭವಿಸಿದ್ದಾರೆ.

ಇಂಡಿಯಾ ಟುಡೇ ಗ್ರೂಪ್ ಪ್ರಕಾರ ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಬಳಿಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಶಾಂತ ನಂದಾ ಅವರು ಟ್ವಿಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. “ಪಟ್ಟೆಯ ಸನ್ಯಾಸಿಯು ಕಿರಿಕಿರಿಗೊಳ್ಳುತ್ತಾನೆ” ಎಂದು ಅವರು ಶೀರ್ಷಿಕೆ ನೀಡಿದ್ದಾರೆ. ವಾಹನದಲ್ಲಿದ್ದ ಜನರು ಪೊದೆಗಳ ಹಿಂದೆ ಅಡಗಿಕೊಂಡಿರುವ ಹುಲಿ  ನೋಡಲು ನಿಂತಿರುತ್ತಾರೆ, ಫೋಟೋ ಕ್ಲಿಕ್ಕಿಸುತ್ತಿರುತ್ತಾರೆ. ಈ ಸಂದರ್ಭದಲ್ಲಿ ರೊಚ್ಚಿಗೆದ್ದು ಹುಲಿ ಘರ್ಜಿಸುತ್ತಾ ಬರುತ್ತದೆ.

ಸಫಾರಿ ವಾಹನದ ಚಾಲಕ ಚಾಣಾಕ್ಷ ನಡೆ ನಡೆಸಿ ಆತುರಾತುರವಾಗಿ ವಾಹನವನ್ನು ಹಿಮ್ಮುಖವಾಗಿ ಚಲಿಸಲು ಯತ್ನಿಸಿದರೂ ಹುಲಿ ಘರ್ಜನೆಯಿಂದ ಜನರು ಕೂಗಿಕೊಳ್ಳುವುದನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular