HomeInternationalಫ್ಲಿಪ್ ಬೌನ್ಸ್-ಪಾಸ್ ರಿಲೇ ಆಟದಲ್ಲಿ ಹೊಸ ದಾಖಲೆ: ಬೆರಗಾಗಿಸುವ ವಿಡಿಯೋ ವೈರಲ್

ಫ್ಲಿಪ್ ಬೌನ್ಸ್-ಪಾಸ್ ರಿಲೇ ಆಟದಲ್ಲಿ ಹೊಸ ದಾಖಲೆ: ಬೆರಗಾಗಿಸುವ ವಿಡಿಯೋ ವೈರಲ್

ಪ್ರಪಂಚದಾದ್ಯಂತದ ಜನರು ಇದುವರೆಗೆ ಕೆಲವು ಅಸಾಮಾನ್ಯ ವಿಶ್ವ ದಾಖಲೆಗಳನ್ನು ಸ್ಥಾಪಿಸಿದ್ದಾರೆ. ದಾಖಲೆಗಳು ಯಾವುದೂ ಹೊಸತು ಸಿಗದಿದ್ದರೆ, ಹಳೆಯ ದಾಖಲೆಗಳನ್ನೇ ಮತ್ತೊಮ್ಮೆ ಪರಿಶೀಲಿಸಿ ಆ ದಾಖಲೆ ಮುರಿಯಬಹುದೇ ಎಂದು ಯೋಚನೆಯಲ್ಲಿ ತೊಡಗುತ್ತಾರೆ.

ಅಂಥದ್ದೇ ಒಂದು ವಿಶ್ವ ದಾಖಲೆಯನ್ನು ಬರೆದಿದೆ ಹಂಗೇರಿಯ ಫೇಸ್ ಟೀಮ್ ಅಕ್ರೋಬ್ಯಾಟಿಕ್ ಸ್ಪೋರ್ಟ್ಸ್ ಥಿಯೇಟರ್. ಬರಾನಿ ಫ್ಲಿಪ್ ಬೌನ್ಸ್-ಪಾಸ್ ರಿಲೇ ಆಟದಲ್ಲಿ ಹೊಸ ದಾಖಲೆಯನ್ನು ಈ ತಂಡ ಬರೆದಿದೆ. ಈ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2020ರ ಆಗಸ್ಟ್ 10ರಂದು ಒಟ್ಟು ಮೂವತ್ತೈದು ಜನರು ಈ ದಾಖಲೆಯನ್ನು ಸ್ಥಾಪಿಸಿದ್ದು ಅದೀಗ ವೈರಲ್​ ಆಗಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ದಾಖಲೆಯ ಬಗ್ಗೆ ಶೇರ್​ ಮಾಡಿಕೊಂಡಿದೆ. ಬಾಸ್ಕೆಟ್‌ಬಾಲ್ ನೆಟ್​ ಸಮೀಪ ಜಿಮ್ ಮ್ಯಾಟ್ ಅಳವಡಿಸಲಾಗಿದೆ. ಈ ಮ್ಯಾಟ್​ಗೆ ರೀಚ್​ ಆಗುವ ಮೊದಲು ಆಟಗಾರರು ಹೇಗೆಲ್ಲಾ ಸರ್ಕಸ್​ ಮಾಡುತ್ತಾರೆ ಎಂಬ ಬಗ್ಗೆ ವಿಶೇಷವಾಗಿ ಈ ವಿಡಿಯೋದಲ್ಲಿ ತೋರಿಸಲಾಗಿದೆ. ಇದನ್ನು ನೋಡಿ ನೆಟ್ಟಿಗರು ಹುಬ್ಬೇರಿಸುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular