HomeIndiaಮೊದಲ ಬಾರಿ ವಿಮಾನ ಏರಿದ 83ರ ವೃದ್ಧೆ: ವೈರಲ್​ ವಿಡಿಯೋಗೆ ನೆಟ್ಟಿಗರು ಫಿದಾ

ಮೊದಲ ಬಾರಿ ವಿಮಾನ ಏರಿದ 83ರ ವೃದ್ಧೆ: ವೈರಲ್​ ವಿಡಿಯೋಗೆ ನೆಟ್ಟಿಗರು ಫಿದಾ

ವಿಮಾನದ ಮೊದಲ ಪ್ರಯಾಣ ಬಲು ರೋಚಕ. ಇದೀಗ 83 ನೇ ವಯಸ್ಸಿನಲ್ಲಿ ವೃದ್ಧೆಯೊಬ್ಬರು ಮೊಮ್ಮಗಳ ಮದುವೆಗೆ ಹಾಜರಾಗಲು ತಮ್ಮ ಮೊದಲ ವಿಮಾನವನ್ನು ಏರಿದ್ದು, ಅದರ ವಿಡಿಯೋ ವೈರಲ್​ ಆಗಿದೆ.

‘ಬಡಿ ಮಮ್ಮಿ’ ಹೆಸರಿನ ಪುಟದ ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಶೇರ್​ ಆಗಿದ್ದು, ಇದಾಗಲೇ 6.7 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ. ಈ ವಿಡಿಯೋದಲ್ಲಿ ವಯೋವೃದ್ಧೆ ವಿಮಾನ ನಿಲ್ದಾಣಕ್ಕೆ ತೆರಳುತ್ತಿರುವುದನ್ನು ನೋಡಬಹುದು. ವೃದ್ಧೆ ತನ್ನ ಕುಟುಂಬದೊಂದಿಗೆ ವಿಮಾನವನ್ನು ಹತ್ತುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೊದಲ ಪ್ರಯಾಣದ ಖುಷಿ ಆಕೆಯ ಮೊಗದಲ್ಲಿ ನೋಡಬಹುದು. ನನ್ನ ಮೊಮ್ಮಗಳ ಮದುವೆ ನೋಡಲು 83 ರಲ್ಲಿ ನನ್ನ ಮೊದಲ ವಿಮಾನವನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದು ವಿಡಿಯೋದ ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ಇದು ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ಎಲ್ಲರೂ ಹೀಗೆ ತಮ್ಮ ಹಿರಿಯರನ್ನು ಪ್ರೀತಿಸಬೇಕು ಎಂದು ಹೇಳಿದ್ದಾರೆ. ವೃದ್ಧೆಯನ್ನು ಮಗುವಿನಂತೆ ಕಾಳಜಿ ಮಾಡುವ ಕುಟುಂಬ ವರ್ಗವನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ಅದೇ ವೇಳೆ ಅಜ್ಜಿಯ ಮೊಗದಲ್ಲಿ ಕೂಡ ಪುಟ್ಟ ಮಗುವಿನಂತೆ ಖುಷಿ ಇರುವುದನ್ನು ಇನ್ನು ಕೆಲವರು ನೆಟ್ಟಿಗರು ಶ್ಲಾಘಿಸಿದ್ದಾರೆ.

https://youtu.be/9c1I-qIQxHI

For Latest News Updates, Join Our Whatsapp Community🚩
RELATED ARTICLES

Most Popular