HomeLatest NewsWatch: ಹಾರ್ಡಿ ಸಂಧುರ ಹಾಡಿಗೆ ಒಲಿಂಪಿಕ್ ಚಿನ್ನದ ಪದಕ ವಿಜೇತ ಚೋಪ್ರಾ ಮಸ್ತ್‌ ಡಾನ್ಸ್

Watch: ಹಾರ್ಡಿ ಸಂಧುರ ಹಾಡಿಗೆ ಒಲಿಂಪಿಕ್ ಚಿನ್ನದ ಪದಕ ವಿಜೇತ ಚೋಪ್ರಾ ಮಸ್ತ್‌ ಡಾನ್ಸ್

ಮುಂಬೈನ ಜುಹುವಿನಲ್ಲಿ ಆಯೋಜಿಸಲಾಗಿದ್ದ ಇಂಡಿಯನ್ ಸ್ಪೋರ್ಟ್ಸ್ ಹಾನರ್ಸ್ ಕಾರ್ಯಕ್ರಮದಲ್ಲಿ ಟೋಕಿಯೋ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಕಾಣಿಸಿಕೊಂಡಿದ್ದಾರೆ. ಈ ವಿಶೇಷ ಸಮಾರಂಭದಲ್ಲಿ ನೀರಜ್‌ ಜನಪ್ರಿಯ ಯೂಟ್ಯೂಬರ್‌ಗಳು ಹಾಗೂ ಮಾಧ್ಯಮ ಇನ್‌ಫ್ಲುಯೆನ್ಸರ್‌ಗಳೊಂದಿಗೆ ಹೆಜ್ಜೆ ಹಾಕುತ್ತಿರುವ ವಿಡಿಯೋ ವೈರಲ್ ಆಗಿದೆ.

ಹಾರ್ಡಿ ಸಂಧುರ ದೊಡ್ಡ ಹಿಟ್ ’ಬಿಜ್ಲೀ ಬಿಜ್ಲೀ’ ಹಾಡಿಗೆ ಚೋಪ್ರಾ ಸ್ಟೆಪ್ ಹಾಕುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಜೊತೆಯಲ್ಲಿ ಯಶ್‌ರಾಜ್ ಮುಖಾಟೆ ಹಾಗೂ ರೂಹೀ ದೋಸಾನಿ ಸಹ ಹೆಜ್ಜೆ ಹಾಕುತ್ತಿದ್ದಾರೆ. ಹಾಡಿಗೆ ಸ್ಟೆಪ್ ಹಾಕುವ ಸಿರಿಯಲ್ಲಿ ಚೋಪ್ರಾ ತಮ್ಮ ಕೋಟ್ ತೆಗೆದು ಬಿಂದಾಸ್ ಆಗಿ ಕುಣಿದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಪೋಸ್ಟ್‌ಗೆ 46 ಸಾವಿರಕ್ಕೂ ಅಧಿಕ ಲೈಕ್‌ಗಳು ಸಿಕ್ಕಿವೆ. ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಕ್ರಶ್ ಆಗಿರುವ ನೀರಜ್ ಚೋಪ್ರಾರನ್ನು ಈ ಅವತಾರದಲ್ಲಿ ಕಂಡ ನೆಟ್ಟಿಗರು ಕಾಮೆಂಟ್ ವಿಭಾಗದಲ್ಲಿ ಭಯಂಕರ ಕಾಮೆಂಟ್‌ಗಳ್ನು ಹಾಕಿದ್ದಾರೆ.

ಟೋಕಿಯೋ 2020 ಕೂಟದಲ್ಲಿ ದೇಶಕ್ಕೆ ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್‌ ವಿಭಾಗದಲ್ಲಿ, ಜಾವೆಲಿನ್ ಥ್ರೋನಲ್ಲಿ, ಮೊಟ್ಟ ಮೊದಲ ವೈಯಕ್ತಿಕ ಚಿನ್ನದ ಪದಕ ಗೆದ್ದುಕೊಟ್ಟ ನೀರಜ್ ಚೋಪ್ರಾ ಇತ್ತೀಚೆಗೆ ಆಯೋಜಿಸಿದ್ದ ಲುಸಾನ್ನೆ ಡೈಮಂಡ್‌ ಲೀಗ್‌ನಲ್ಲಿ 89.08 ಮೀ ಥ್ರೋ ಮೂಲಕ ಮೊದಲ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

https://youtu.be/ko5JinV31-8

For Latest News Updates, Join Our Whatsapp Community🚩
RELATED ARTICLES

Most Popular