HomeBeautyಕೈಗಳಲ್ಲಿನ ಬೆಳ್ಳುಳ್ಳಿ ವಾಸನೆ ಹೋಗಲಾಡಿಸಲು ಹೀಗೆ ವಾಶ್ ಮಾಡಿ

ಕೈಗಳಲ್ಲಿನ ಬೆಳ್ಳುಳ್ಳಿ ವಾಸನೆ ಹೋಗಲಾಡಿಸಲು ಹೀಗೆ ವಾಶ್ ಮಾಡಿ

ಅಡುಗೆ ಮಾಡುವಾಗ ಬಳಸುವ ಕೆಲವು ಆಹಾರ ಪದಾರ್ಥಗಳನ್ನು ಕ್ಲೀನ್ ಮಾಡಿದಾಗ ಕೈ ವಾಸನೆ ಬರುತ್ತಿರುತ್ತದೆ. ಅದರಲ್ಲಿ ಬೆಳ್ಳುಳ್ಳಿ ಕೂಡ ಒಂದು. ಇದು ನಿಮಗೆ ಕಿರಿಕಿರಿಯನ್ನುಂಟು ಮಾಡಬಹುದು. ಹಾಗಾಗಿ ಕೈಗಳಲ್ಲಿನ ಬೆಳ್ಳುಳ್ಳಿ ವಾಸನೆಯನ್ನು ತೆಗೆಯಲು ಈ ಟಿಪ್ಸ್ ಫಾಲೋ ಮಾಡಿ.

*ಬೆಚ್ಚಗಿನ ನೀರಿನಲ್ಲಿ ನಿಂಬೆ ರಸ ಮತ್ತು ನಿಂಬೆ ಸಿಪ್ಪೆಗಳನ್ನು ಮಿಕ್ಸ್ ಮಾಡಿ ಅದರಲ್ಲಿ ಕೈಗಳನ್ನು ಮುಳುಗಿಸಿ ನಿಂಬೆ ಸಿಪ್ಪೆಯಿಂದ ಉಜ್ಜಿ. ಇದರಿಂದ ಬೆಳ್ಳುಳ್ಳಿ ವಾಸನೆ ಹೋಗುತ್ತದೆ.

*ಕಾಫಿಯಿಂದ ಕೂಡ ಬೆಳ್ಳುಳ್ಳಿ ವಾಸನೆಯನ್ನು ನಿವಾರಿಸಬಹುದು. ನೀರಿನಲ್ಲಿ ಕಾಫಿ ಪುಡಿ ಸೇರಿಸಿ ಅದರಿಂದ ಕೈ ತೊಳೆಯಿರಿ. ಹಾಗೇ ಕಾಫಿ ಪುಡಿಗೆ ಜೇನುತುಪ್ಪ ಮಿಕ್ಸ್ ಮಾಡಿ ಕೈಗೆ ಹಚ್ಚಿಕೊಳ್ಳಿ. ಇದರಿಂದ ಕೈಗಳು ಮೃದುವಾಗುತ್ತವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ಬೆಳ್ಳುಳ್ಳಿ ವಾಸನೆಯನ್ನು ನಿವಾರಿಸಲು ಕಿತ್ತಳೆ ಸಿಪ್ಪೆಯನ್ನು ಕೂಡ ಬಳಸಬಹುದು. ಕಿತ್ತಳೆ ಸಿಪ್ಪೆಯನ್ನು 10 ನಿಮಿಷಗಳ ಕಾಲ ನೀರಿನಲ್ಲಿ ಕುದಿಸಿ. ಆ ನೀರಿನಿಂದ ಕೈತೊಳೆದು ಸಿಪ್ಪೆಯಿಂದ ಕೈಗಳನ್ನು ಉಜ್ಜಿಕೊಳ್ಳಿ.

For Latest News Updates, Join Our Whatsapp Community🚩
RELATED ARTICLES

Most Popular