ವೇಗವಾಗಿ ಬಂದ ಬೈಕ್ ಸವಾರ ಕಾರ್ ಗೆ ಡಿಕ್ಕಿ; ಬೆಚ್ಚಿಬೀಳಿಸುತ್ತೆ ‘ವಿಡಿಯೋ’

ಕ್ಯಾಮೆರಾದಲ್ಲಿ ಸೆರೆಯಾದ ದುರಂತ ಘಟನೆಯೊಂದರಲ್ಲಿ, ಗುರುಗ್ರಾಮ್‌ನಲ್ಲಿ 23 ವರ್ಷದ ಬೈಕ್ ಚಾಲಕ ಕಾರಿಗೆ ಮಾರಣಾಂತಿಕವಾಗಿ ಡಿಕ್ಕಿ ಹೊಡೆದ ನಂತರ ಪ್ರಾಣ ಕಳೆದುಕೊಂಡಿದ್ದಾನೆ.

ಯುವಕ ಅತಿ ವೇಗದಲ್ಲಿ ಬೈಕ್‌ ಚಲಾಯಿಸಿಕೊಂಡು ಬರ್ತಿದ್ದು ಎದುರುಗಡೆ ಇಂದ ಬರ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಕೆಲವೇ ನಿಮಿಷಗಳಲ್ಲಿ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ವೀಡಿಯೊದಲ್ಲಿ ಬೈಕ್ ಚಾಲಕನನ್ನು ಕೆಲವರು ಹಿಂಬಾಲಿಸಿಕೊಂಡು ಬರುತ್ತಿದ್ದರು. ಅಪಘಾತದ ನಂತರ ಸ್ಥಳಕ್ಕೆ ಧಾವಿಸಿದ ಅವರು ಕೆಳಗೆ ಬಿದ್ದಿದ್ದ ಯುವಕನನ್ನು ಪರಿಶೀಲಿಸಿದ ನಂತರ ಘಟನಾ ಸ್ಥಳದಲ್ಲಿದ್ದ ಕಾರು ಚಾಲಕನನ್ನು ವಿಚಾರಣೆಗೆ ಒಳಪಡಿಸಿದರು.

ಐಎಎನ್‌ಎಸ್ ವರದಿಯ ಪ್ರಕಾರ ಅಕ್ಷತ್ ಗಾರ್ಗ್ ಎಂಬ 23 ವರ್ಷದ ಯುವಕ ಸಾವನ್ನಪ್ಪಿದ್ದಾನೆ. ಭೀಕರ ಅಪಘಾತ ಗುರುಗ್ರಾಮ್‌ನ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ನಡೆದಿದೆ. ಭಾನುವಾರ ಮುಂಜಾನೆ 5:45 ಸುಮಾರಿಗೆ ಸಂಭವಿಸಿದ ಅಪಘಾತವನ್ನು ಅವನ ಹಿಂದೆ ಸವಾರಿ ಮಾಡುತ್ತಿದ್ದ ಸ್ನೇಹಿತನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದ.

ಸಂಪೂರ್ಣ ಸುರಕ್ಷತಾ ಗೇರ್ ಧರಿಸಿದ್ದರೂ, ಅಪಘಾತದ ತೀವ್ರತೆಗೆ ಅಕ್ಷತ್ ಗಾರ್ಗ್ ಸ್ಥಳದಲ್ಲೇ ಸಾವನ್ನಪ್ಪಿದ್ದ. ರಸ್ತೆಯಲ್ಲಿ ತಪ್ಪು ದಾರಿಯಲ್ಲಿ ಸಾಗುತ್ತಿದ್ದ ಕಾರು ಮುಖಾಮುಖಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದ ಸಂದರ್ಭಗಳ ಬಗ್ಗೆ ಅಧಿಕಾರಿಗಳು ತನಿಖೆಯನ್ನು ಪ್ರಾರಂಭಿಸಿದ್ದಾರೆ .

ವಿಡಿಯೋ ನೋಡಿದ ಹಲವು ನೆಟ್ಟಿಗರು, ಫ್ಲೈಓವರ್‌ಗಳಲ್ಲಿಯೂ ತಪ್ಪಾಗಿ ಚಾಲನೆ ಮಾಡುವುದು ಸಾಮಾನ್ಯವಾಗಿದೆ. ಪೊಲೀಸರು ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು ಎಂದಿದ್ದಾರೆ.

https://twitter.com/TimesNow/status/1836751635428626593?ref_src=twsrc%5Etfw%7Ctwcamp%5Etweetembed%7Ctwterm%5E1836751635428626593%7Ctwgr%5Ebca8f8f8d02ddef226f9f6c983c7dcf2b3cdbe1

https://twitter.com/ians_india/status/1836757939568222547?ref_src=twsrc%5Etfw%7Ctwcamp%5Etweetembed%7Ctwterm%5E1836757939568222547%7Ctwgr%5Ebca8f8f8d02ddef226f9f6c983c7dcf2b3cdbe15%7C

https://twitter.com/vijaymaroo/status/1836763263352082510?ref_src=twsrc%5Etfw%7Ctwcamp%5Etweetembed%7Ctwterm%5E1836763263352082510%7Ctwgr%5Ebca8f8f8d02ddef226f9f6c983c7dcf2b3cdbe15%7Ctwcon%5Es1_

https://twitter.com/ankushmahajann/status/1836773633437397187?ref_src=twsrc%5Etfw%7Ctwcamp%5Etweetembed%7Ctwterm%5E1836773633437397187%7Ctwgr%5Ebca8f8f8d02ddef226f9f6c983c7dcf2b3cdbe15%7Ctwcon%5E

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read