ಕೋಲಾರ : ಹಾಸ್ಟೆಲ್ ನಲ್ಲಿ ದೆವ್ವ ಇದೆ ಎಂದು ತಮಾಷೆ ಮಾಡಿದ್ದಕ್ಕೆ ವಾರ್ಡನ್ ವಿದ್ಯಾರ್ಥಿಗೆ ಅಮಾನುಷವಾಗಿ ಥಳಿಸಿದ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಬಾಳಸಂದ್ರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ.
ವಿದ್ಯಾರ್ಥಿ ಎಸ್.ಅಂಜನ್ ಮೇಲೆ ವಾರ್ಡನ್ ಮಹೇಶ್ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
6 ನೇ ತರಗತಿ ವಿದ್ಯಾರ್ಥಿ ಎಸ್.ಅಂಜನ್ ಮೇಲೆ ವಾರ್ಡನ್ ಮಹೇಶ್ ಕೋಲು ಹಾಗೂ ಬೆಲ್ಟ್ ನಿಂದ ಹಲ್ಲೆ ನಡೆಸಿದ್ದಾರೆ. ಅಂಜನ್ ತನ್ನ ವಿದ್ಯಾರ್ಥಿಗಳ ಜೊತೆ ಮಾತನಾಡುವಾಗ ಹಾಸ್ಟೆಲ್ ನಲ್ಲಿ ದೆವ್ವ ಇದೆ ಎಂದು ತಮಾಷೆ ಮಾಡಿದ್ದನು. ಈ ವಿಚಾರ ವಿದ್ಯಾರ್ಥಿಗಳು ವಾರ್ಡನ್ ಮಹೇಶ್ ಗೆ ತಿಳಿಸಿದ್ದರು. ಇದರಿಂದ ಸಿಟ್ಟಾದ ಮಹೇಶ್ ಕೋಲು ಹಾಗೂ ಬೆಲ್ಟ್ ನಿಂದ ವಿದ್ಯಾರ್ಥಿ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
You Might Also Like
TAGGED:ಹಾಸ್ಟೆಲ್