HomeIndiaಇಸ್ರೇಲ್-ಇರಾನ್ ಯುದ್ಧದ ಎಫೆಕ್ಟ್:ಸಿಲಿಂಡರ್ ಅಭಾವಕ್ಕೆ ಬೆದರಿ ಸೌದೆ ಒಲೆ ಮೊರೆ ಹೋದ ಹೋಟೆಲ್ ಮಾಲೀಕರು

ಇಸ್ರೇಲ್-ಇರಾನ್ ಯುದ್ಧದ ಎಫೆಕ್ಟ್:ಸಿಲಿಂಡರ್ ಅಭಾವಕ್ಕೆ ಬೆದರಿ ಸೌದೆ ಒಲೆ ಮೊರೆ ಹೋದ ಹೋಟೆಲ್ ಮಾಲೀಕರು

ಎಲ್ಲೋ ನಡೆದ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಜ್ವಾಲೆ ಈಗ ಕರ್ನಾಟಕದ ಅಡುಗೆ ಮನೆಗಳಿಗೆ ತಟ್ಟಿದೆ ಹೌದು, ಕೊಲ್ಲಿ ರಾಷ್ಟ್ರಗಳಲ್ಲಿ ತಲೆದೋರಿರುವ ಯುದ್ಧದಿಂದಾಗಿ ಎಲ್‌ಪಿಜಿ (LPG) ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದು ರಾಜ್ಯದ ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಪರಿಣಾಮ? ಹೈಟೆಕ್ ಸ್ಟೌವ್‌ಗಳು ಮೂಲೆ ಸೇರಿವೆ ಹಳೆಯ ಸೌದೆ ಒಲೆಗಳು ಮತ್ತೆ ಕಣ್ತೆರೆದಿವೆ

ಎಲ್‌ಪಿಜಿ ಸಂಕಷ್ಟ?

ಇರಾನ್-ಇಸ್ರೇಲ್ ಸಂಘರ್ಷದಿಂದ ಪೆಟ್ರೋಲಿಯಂ ಉತ್ಪನ್ನಗಳ ಆಮದು ಕುಸಿದಿದೆ. ಮಾರುಕಟ್ಟೆಯಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಲಭ್ಯತೆ ಬಹುತೇಕ ಶೂನ್ಯಕ್ಕೇರಿದೆ. ಈ ಸಂಕಷ್ಟದಿಂದ ಪಾರಾಗಲು ಹೋಟೆಲ್ ಮಾಲೀಕರು ಕಂಡುಕೊಂಡ ದಾರಿ ಸಾಂಪ್ರದಾಯಿಕ ಸೌದೆ ಒಲೆ. ಹೋಟೆಲ್ ಅಂಗಳದಲ್ಲಿ ಸೌದೆ ರಾಶಿ.ಸಿಲಿಂಡರ್ ಸಿಗದೇ ಹೋಟೆಲ್ ಮುಚ್ಚುವ ಭೀತಿಯಲ್ಲಿದ್ದ ಮಾಲೀಕರು ಈಗ ಟ್ರಕ್ ಗಟ್ಟಲೆ ಸೌದೆ ತರಿಸುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಬ್ಬೊಬ್ಬ ಮಾಲೀಕರು ಬರೋಬ್ಬರಿ 10 ರಿಂದ 15 ಕ್ವಿಂಟಾಲ್ ಸೌದೆಯನ್ನು ಸ್ಟಾಕ್ ಮಾಡಿಕೊಂಡಿದ್ದಾರೆ.ಹೋಟೆಲ್‌ನ ಹಿತ್ತಲಲ್ಲಿ ಅಥವಾ ಕಿಚನ್‌ನ ಒಂದು ಮೂಲೆಯಲ್ಲಿ ಬೃಹತ್ ಒಲೆಗಳನ್ನು ನಿರ್ಮಿಸಿ ಅಡುಗೆ ತಯಾರಿ ಭರದಿಂದ ಸಾಗಿದೆ.

ಮೆನುವಿನಿಂದ ದೋಸೆ, ಚೈನೀಸ್ ಫುಡ್ ಔಟ್

ಸೌದೆ ಒಲೆಯಲ್ಲಿ ಎಲ್ಲವನ್ನೂ ಬೇಯಿಸುವುದು ಸುಲಭವಲ್ಲ. ಹೀಗಾಗಿ ನಿಮ್ಮ ಫೇವರೇಟ್ ಮೆನುವಿನಲ್ಲಿ ಭಾರಿ ಕಡಿತವಾಗಿದೆ.ನೂಡಲ್ಸ್, ಫ್ರೈಡ್ ರೈಸ್ ಮತ್ತು ಸೂಪ್‌ಗಳಿಗೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ.ಅತಿ ಹೆಚ್ಚು ಉರಿ ಬೇಕಾಗುವ ದೋಸೆಗಳು ಮೆನುವಿನಿಂದ ಮಾಯವಾಗಿವೆ.ಇಡ್ಲಿ, ಪಲಾವ್, ರೈಸ್ ಸಾಂಬಾರ್‌ನಂತಹ ಸುಲಭವಾಗಿ ತಯಾರಿಸಬಹುದಾದ ಪದಾರ್ಥಗಳಿಗೆ ಮಾತ್ರ ಈಗ ಆದ್ಯತೆ.

https://www.instagram.com/reel/DVyDJ6vkQ6T/?utm_source=ig_web_copy_link&igsh=MzRlODBiNWFlZA==

ಆದರೆ, ಈ ಬದಲಾವಣೆ ಗ್ರಾಹಕರಿಗೆ ಒಂದು ರೀತಿಯಲ್ಲಿ ಖುಷಿ ನೀಡಿದೆ. ಸೌದೆ ಒಲೆಯಲ್ಲಿ ನಿಧಾನವಾಗಿ ಬೆಂದ ಮುದ್ದೆ, ಬಿರಿಯಾನಿ ಮತ್ತು ಸಾಂಬಾರ್ ರುಚಿಯೇ ಬೇರೆ ಹಳ್ಳಿ ಶೈಲಿಯ ಈ ನಾಟಿ ರುಚಿಗೆ ಗ್ರಾಹಕರು ಫಿದಾ ಆಗುತ್ತಿದ್ದಾರೆ.ಯುದ್ಧದಿಂದಾಗಿ ಉಂಟಾದ ಈ ಪರಿಸ್ಥಿತಿ ಹೋಟೆಲ್ ಮಾಲೀಕರಿಗೆ ಆರ್ಥಿಕ ಹೊರೆ ತಗ್ಗಿಸಿದರೂ, ಹೊಗೆ ಮತ್ತು ಸೌದೆ ಸಂಗ್ರಹದಂತಹ ಸವಾಲುಗಳನ್ನು ತಂದೊಡ್ಡಿದೆ. ಆದರೂ ಆಧುನಿಕತೆಯ ನಡುವೆ ಅಳಿದು ಹೋಗುತ್ತಿದ್ದ ಸೌದೆ ಒಲೆಯ ಪರಂಪರೆಗೆ ಈ ಯುದ್ಧದ ಬಿಸಿ ಮರುಜೀವ ನೀಡಿದೆ ಎಂಬುದು ಮಾತ್ರ ಸತ್ಯ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular