HomeLatest Newsಆದಾಯ ತೆರಿಗೆದಾರರೇ ಗಮನಿಸಿ : ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ ಈ 7 ನಿಯಮಗಳು...

ಆದಾಯ ತೆರಿಗೆದಾರರೇ ಗಮನಿಸಿ : ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ ಈ 7 ನಿಯಮಗಳು |New Tax Rules

ಹೊಸ ಹಣಕಾಸು ವರ್ಷ 2026-27ರ ಆರಂಭದೊಂದಿಗೆ ತೆರಿಗೆ ಪಾವತಿದಾರರಿಗೆ ಮಹತ್ವದ ಬದಲಾವಣೆಗಳು ಕಾಯುತ್ತಿವೆ. 6 ದಶಕಗಳಷ್ಟು ಹಳೆಯದಾದ 1961ರ ಆದಾಯ ತೆರಿಗೆ ಕಾಯ್ದೆಯ ಬದಲಿಗೆ, ಏಪ್ರಿಲ್ 1, 2026 ರಿಂದ ‘ಹೊಸ ಆದಾಯ ತೆರಿಗೆ ಕಾಯ್ದೆ-2025’ ಅಧಿಕೃತವಾಗಿ ಜಾರಿಗೆ ಬರಲಿದೆ.

ಕೇಂದ್ರ ಸರ್ಕಾರವು ಮಂಡಿಸಿದ ಬಜೆಟ್ 2026 ರ ಅನ್ವಯ, ಹೊಸ ಹಣಕಾಸು ವರ್ಷದಿಂದ (2026-27) ಆದಾಯ ತೆರಿಗೆ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳು ಕಂಡುಬರಲಿವೆ. ಅವುಗಳ ವಿವರ ಇಲ್ಲಿದೆ:

1. ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಳೆಯ ಆದಾಯ ತೆರಿಗೆ ಕಾಯ್ದೆ 1961 ರ ಬದಲಿಗೆ ಹೊಸ ಆದಾಯ ತೆರಿಗೆ ಕಾಯ್ದೆ-2025 ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ತೆರಿಗೆ ನಿಯಮಗಳನ್ನು ಸರಳಗೊಳಿಸುವುದು ಇದರ ಉದ್ದೇಶವಾಗಿದೆ. ಆದರೆ, ಪ್ರಸ್ತುತ ಇರುವ ತೆರಿಗೆ ಸ್ಲ್ಯಾಬ್‌ಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

2. ITR ಸಲ್ಲಿಕೆ ಗಡುವಿನ ವಿಸ್ತರಣೆ

ನಾನ್-ಆಡಿಟ್ ತೆರಿಗೆ ಪಾವತಿದಾರರಿಗೆ (ITR-3 ಮತ್ತು ITR-4 ಸಲ್ಲಿಸುವವರಿಗೆ) ರಿಟರ್ನ್ಸ್ ಸಲ್ಲಿಸಲು ಇದ್ದ ಜುಲೈ 31 ರ ಗಡುವನ್ನು ಆಗಸ್ಟ್ 31 ಕ್ಕೆ ವಿಸ್ತರಿಸಲಾಗಿದೆ. ಆದರೆ, ITR-1 ಮತ್ತು ITR-2 ಸಲ್ಲಿಸುವವರಿಗೆ ಜುಲೈ 31 ರ ಗಡುವು ಮುಂದುವರಿಯಲಿದೆ.

3. ಪರಿಷ್ಕೃತ (Revised) ITR ದಿನಾಂಕ

ತಪ್ಪುಗಳನ್ನು ಸರಿಪಡಿಸಿ ರಿವೈಸ್ಡ್ ಐಟಿ ರಿಟರ್ನ್ ಸಲ್ಲಿಸಲು ಇದ್ದ ಗಡುವನ್ನು ಡಿಸೆಂಬರ್ 31 ರಿಂದ ಮಾರ್ಚ್ 31 ಕ್ಕೆ ವಿಸ್ತರಿಸಲಾಗಿದೆ. ಆದರೆ, ಡಿಸೆಂಬರ್ 31 ರ ನಂತರ ಸಲ್ಲಿಸುವವರು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

4. ಟಿಎಸ್‌ಎಸ್(TCS) ದರಗಳಲ್ಲಿ ಬದಲಾವಣೆ

ಮೂಲದಲ್ಲೇ ತೆರಿಗೆ ಸಂಗ್ರಹಿಸುವ (TCS) ದರಗಳನ್ನು ಸರಳಗೊಳಿಸಲಾಗಿದೆ:

  • ಮದ್ಯ ಮಾರಾಟ: ಶೇ. 1 ರಿಂದ ಶೇ. 2 ಕ್ಕೆ ಏರಿಕೆ.
  • ಬೀಡಿ ಎಲೆಗಳು: ಶೇ. 5 ರಿಂದ ಶೇ. 2 ಕ್ಕೆ ಇಳಿಕೆ.
  • ಸ್ಕ್ರ್ಯಾಪ್ ಮತ್ತು ಖನಿಜಗಳು : ಶೇ. 1 ರಿಂದ ಶೇ. 2 ಕ್ಕೆ ಏರಿಕೆ.
  • ವಿದೇಶಿ ಪ್ರವಾಸ ಮತ್ತು ಶಿಕ್ಷಣ: ಲಿಬರಲೈಸ್ಡ್ ರೆಮಿಟೆನ್ಸ್ ಸ್ಕೀಮ್ (LRS) ಅಡಿಯಲ್ಲಿ ವಿದೇಶಿ ಪ್ರವಾಸ ಪ್ಯಾಕೇಜ್‌ಗಳು ಮತ್ತು ವೈದ್ಯಕೀಯ/ಶಿಕ್ಷಣದ ಮೇಲಿನ ಟಿಎಸ್‌ಎಸ್ ಅನ್ನು ಶೇ. 2 ಕ್ಕೆ ಇಳಿಸಲಾಗಿದೆ.

5. ಸೆಕ್ಯೂರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (STT) ಏರಿಕೆ

ಷೇರು ಮಾರುಕಟ್ಟೆಯ ಫ್ಯೂಚರ್ಸ್ ಮತ್ತು ಆಪ್ಷನ್ಸ್ (F&O) ವ್ಯಾಪಾರಿಗಳಿಗೆ ಇದು ಶಾಕ್ ನೀಡಲಿದೆ:

  • ಫ್ಯೂಚರ್ಸ್ ಮೇಲಿನ STT ಶೇ. 0.02 ರಿಂದ ಶೇ. 0.05 ಕ್ಕೆ ಏರಿಕೆಯಾಗಿದೆ.
  • ಆಪ್ಷನ್ಸ್ ಪ್ರೀಮಿಯಂ ಮೇಲಿನ ತೆರಿಗೆಯನ್ನು ಶೇ. 0.15 ಕ್ಕೆ ಹೆಚ್ಚಿಸಲಾಗಿದೆ.

6. ಶೇರ್ ಬೈಬ್ಯಾಕ್ ತೆರಿಗೆ (Share Buyback Tax)

ಷೇರುಗಳ ಬೈಬ್ಯಾಕ್ ಮೂಲಕ ಬರುವ ಆದಾಯವನ್ನು ಇನ್ನು ಮುಂದೆ ‘ಕ್ಯಾಪಿಟಲ್ ಗೇನ್ಸ್’ (ಬಂಡವಾಳ ಲಾಭ) ಎಂದು ಪರಿಗಣಿಸಿ ತೆರಿಗೆ ವಿಧಿಸಲಾಗುತ್ತದೆ. ಕಾರ್ಪೊರೇಟ್ ಪ್ರಮೋಟರ್‌ಗಳಿಗೆ ಶೇ. 22 ಮತ್ತು ಇತರರಿಗೆ ಶೇ. 30 ರವರೆಗೆ ತೆರಿಗೆ ಅನ್ವಯವಾಗಬಹುದು.

7. ಡಿವಿಡೆಂಡ್ ಆದಾಯ(Dividend Income)

ಡಿವಿಡೆಂಡ್ ಅಥವಾ ಮ್ಯೂಚುವಲ್ ಫಂಡ್ ಯುನಿಟ್‌ಗಳ ಮಾರಾಟದ ಆದಾಯವನ್ನು ಗಳಿಸಲು ಪಡೆದ ಸಾಲದ ಬಡ್ಡಿಯನ್ನು ಇನ್ನು ಮುಂದೆ ಕಡಿತ (Deduction) ಮಾಡಲು ಅವಕಾಶವಿರುವುದಿಲ್ಲ. ಸಂಪೂರ್ಣ ಆದಾಯದ ಮೇಲೆ ಸ್ಲ್ಯಾಬ್ ದರಗಳ ಪ್ರಕಾರ ತೆರಿಗೆ ಪಾವತಿಸಬೇಕಾಗುತ್ತದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular