HomeCrimeಗೆಳತಿಯನ್ನು‌ ಸುತ್ತಾಟಕ್ಕೆ ಕರೆದುಕೊಂಡು ಹೋಗಲು ಕಾರ್‌ ಕದ್ದ ವಿದ್ಯಾರ್ಥಿ ಅರೆಸ್ಟ್....!

ಗೆಳತಿಯನ್ನು‌ ಸುತ್ತಾಟಕ್ಕೆ ಕರೆದುಕೊಂಡು ಹೋಗಲು ಕಾರ್‌ ಕದ್ದ ವಿದ್ಯಾರ್ಥಿ ಅರೆಸ್ಟ್….!

ತನ್ನ ಗೆಳತಿಯನ್ನು ಹೊಸ ಕಾರಿನಲ್ಲಿ ಡ್ರೈವ್ ಕರೆದುಕೊಂಡು ಹೋಗುವ ಸಲುವಾಗಿ ವಿದ್ಯಾರ್ಥಿಯೊಬ್ಬ ಶೋ ರೂಮ್‌ನಿಂದ ಕಾರ್‌ ಕದ್ದಿದ್ದು, ಈತನಿಗೆ ಇಬ್ಬರು ಸ್ನೇಹಿತರು ಸಹ ನೆರವಾಗಿದ್ದರು. ಇದೀಗ ಮೂವರನ್ನೂ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ವಿಶ್ವವಿದ್ಯಾನಿಲಯದ ಈ ಮೂವರು ವಿದ್ಯಾರ್ಥಿಗಳನ್ನು ಶುಕ್ರವಾರ ಬಂಧಿಸಲಾಗಿದ್ದು, ಕಾರು ಕಳವು ಘಟನೆ ಸೆಪ್ಟೆಂಬರ್ 26 ರಂದು ನಡೆದಿತ್ತು, ಆದರೆ ಪ್ರಕರಣದ ವಿವರ ಇತ್ತೀಚೆಗೆ ಬಹಿರಂಗವಾಗಿದೆ.

ವರದಿಯ ಪ್ರಕಾರ, ಆರೋಪಿ ಮತ್ತವನ ಸ್ನೇಹಿತರೂ ಸೇರಿದಂತೆ ಮೂವರು ಕಾಲೇಜು ವಿದ್ಯಾರ್ಥಿಗಳು ಗ್ರೇಟರ್ ನೋಯ್ಡಾದ ಕಾರ್ ಬಜಾರ್‌ನಲ್ಲಿ ಹೊಚ್ಚಹೊಸ ಹ್ಯುಂಡೈ ವೆನ್ಯೂ ಕಾರಿನ ಟೆಸ್ಟ್ ಡ್ರೈವ್ ಕೇಳಿದ್ದು, ಕಾರ್ ಡೀಲರ್ ವಾಹನವನ್ನು ಹೊರತೆಗೆದು‌ ಆರೋಪಿ ವಿದ್ಯಾರ್ಥಿ ಮತ್ತವನ ಜೊತೆ ಬಂದಿದ್ದ ಇಬ್ಬರೊಂದಿಗೆ ಕುಳಿತಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೊಲೀಸರ ಪ್ರಕಾರ, ಸ್ವಲ್ಪ ದೂರ ಹೋದ ನಂತರ ಡೀಲರ್‌ ನನ್ನು ಕಾರಿನಿಂದ ತಳ್ಳಿ ಮೂವರೂ ಪರಾರಿಯಾಗಿದ್ದಾರೆ. 100ಕ್ಕೂ ಹೆಚ್ಚು ಸಿಸಿಟಿವಿಗಳ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಲಾಗಿದ್ದು, ಕೊನೆಗೂ ಮೂವರು ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular