HomeCrimeನವಜಾತ ಹೆಣ್ಣು ಶಿಶುವನ್ನ ನೆಲಕ್ಕೆ ಎಸೆದು ಕೊಂದ ಪಾಪಿ ತಂದೆ: ಗಂಡನ ವಿರುದ್ಧ ದೂರು ದಾಖಲಿಸಿದ...

ನವಜಾತ ಹೆಣ್ಣು ಶಿಶುವನ್ನ ನೆಲಕ್ಕೆ ಎಸೆದು ಕೊಂದ ಪಾಪಿ ತಂದೆ: ಗಂಡನ ವಿರುದ್ಧ ದೂರು ದಾಖಲಿಸಿದ ಪತ್ನಿ

ಆ ಪಾಪಿ ತಂದೆಗೆ, ತನಗೆ ಗಂಡು ಮಗು ಇಲ್ಲ ಅನ್ನೋ ನೋವು ಇತ್ತು. ಒಂದಾದ ಮೇಲೆ ಒಂದು ಹೆಣ್ಣುಮಕ್ಕಳಾದ ಮೇಲೆ ಈ ಬಾರಿಯಾದರೂ ಗಂಡು ಮಗು ಆಗುತ್ತೆ ಅಂತ ಆಸೆ ಇಟ್ಟುಕೊಂಡಿದ್ದ. ಆದರೆ ಈ ಬಾರಿಯೂ ಆತ ಹೆಣ್ಣು ಮಗುವಿನ ತಂದೆಯಾಗಿದ್ದ. ಮತ್ತೆ ಹೆಣ್ಣು ಮಗು ಅನ್ನೊ ಸುದ್ದಿ ಕೇಳಿದ್ದೇ ತಡ ಅಸಮಾಧಾನಗೊಂಡಿದ್ದ ಆತ, ಆಸ್ಪತ್ರೆಗೆ ಬಂದು ತೊಟ್ಟಿಲಲ್ಲಿ ಮಲಗಿದ್ದ ಮಗುವನ್ನ ಎತ್ತಿ ನೆಲಕ್ಕೆ ಬೀಸಾಕಿ ಸಾಯಿಸಿದ್ದಾನೆ. ಈ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ ನಡೆದಿದೆ.

ಈ  ಕೃತ್ಯ ಎಸಗಿದ ವ್ಯಕ್ತಿಯನ್ನ ಮೊಹಮ್ಮದ್ ಫರ್ಹಾನ್ ಎಂದು ಗುರುತಿಸಲಾಗಿದೆ. ಹೆತ್ತ ಕರುಳ ದಾರುಣ ಸಾವು ಕಂಡ ಶಬ್ಬೊ ಬೇಗಂ ತನ್ನ ಪತಿಯ ವಿರುದ್ಧ ಸ್ಥಳೀಯ ಪೊಲೀಸ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದಾರೆ. ಪೊಲೀಸರು ಗಂಡ ಹೆಂಡತಿ ರಾಜಿ ಮಾಡಿಕೊಳ್ಳುವಂತೆ ಒತ್ತಡ ತರ್ತಿದ್ದಾರೆ ಎಂದು ಮಾಧ್ಯಮದ ಮುಂದೆ ಶಬೋ ಬೇಗಂ ಹೇಳಿದ್ದಾರೆ.

ಗರ್ಭಿಣಿಯಾಗಿದ್ದಾಗ ಪತಿ ತನಗೆ ಅನೇಕ ಬಾರಿ ಹೊಟ್ಟೆಗೆ ಹೊಡೆದಿದ್ದಾನೆ, ಚಿತ್ರಹಿಂಸೆ ಕೊಟ್ಟಿದ್ದಾನೆ. ಅಲ್ಲದೇ ಈಗಾಗಲೇ 2 ಹೆಣ್ಣುಮಕ್ಕಳಿದ್ದು, ಈ ಬಾರಿಯೂ ಹೆಣ್ಣು ಮಗುವಿಗೆ ಜನ್ಮ ನೀಡಿದರೆ ತಲಾಖ್ ನೀಡುವುದಾಗಿ ಬೆದರಿಸಿದ್ದಾನೆ ಎಂದು ಶಬ್ಬೊ ಬೇಗಂ ಆರೋಪಿಸಿದ್ದಾರೆ. ಘಟನೆ ಕುರಿತು ಮಾಧ್ಯಮದ ಮುಂದೆ ಸ್ಪಷ್ಟನೆ ನೀಡಿರುವ ಸರ್ಕಲ್‌ ಆಫೀಸರ್‌ ಸುನೀಲ್ ದತ್, ಈಗಾಗಲೇ ಸಂತ್ರಸ್ತೆ ಎಫ್‌ಐಆರ್‌ ನೀಡಿರುವ ದೂರನ್ನ ದಾಖಲಿಸಿ ಅಗತ್ಯ ಕ್ರಮವನ್ನು ಕೈಗೊಂಡಿರುವುದಾಗಿ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular