HomeLatest News'ಸಿಗರೇಟ್‌'ಗೆ ಶಾಶ್ವತವಾಗಿ ಗುಡ್‌ಬೈ ಹೇಳಬೇಕಾ ? ಇಲ್ಲಿವೆ 6 ಸರಳ ಹಾಗೂ ಪರಿಣಾಮಕಾರಿ ಟಿಪ್ಸ್ !

‘ಸಿಗರೇಟ್‌’ಗೆ ಶಾಶ್ವತವಾಗಿ ಗುಡ್‌ಬೈ ಹೇಳಬೇಕಾ ? ಇಲ್ಲಿವೆ 6 ಸರಳ ಹಾಗೂ ಪರಿಣಾಮಕಾರಿ ಟಿಪ್ಸ್ !

ಸಿಗರೇಟ್ ಸೇದುವ ಅಭ್ಯಾಸವನ್ನು ಬಿಡುವುದು ತುಂಬಾ ಕಷ್ಟ ಎಂದುಕೊಂಡಿದ್ದೀರಾ? ಹಾಗಾದರೆ ನಿಮಗೊಂದು ಸಂತಸದ ಸುದ್ದಿ ಇದೆ. ದೃಢ ಸಂಕಲ್ಪ ಇದ್ದರೆ ಮನೆಯಲ್ಲೇ ಸುಲಭವಾಗಿ ಸಿಗುವ ಕೆಲವು ಸಣ್ಣ ಉಪಾಯಗಳ ಮೂಲಕ ಈ ಚಟಕ್ಕೆ ಶಾಶ್ವತವಾಗಿ ಗುಡ್‌ಬೈ ಹೇಳಬಹುದು. ಧೂಮಪಾನ ತೊರೆಯಲು ಸಹಾಯ ಮಾಡುವ ಆರು ಪರಿಣಾಮಕಾರಿ ಟಿಪ್ಸ್‌ಗಳು ಇಲ್ಲಿವೆ.

ಒಂದು ಸಿಗರೇಟ್‌ನಿಂದ ಕೆಲವೇ ಕ್ಷಣಗಳ ಕಾಲ ಮೆದುಳಿಗೆ ಡೋಪಮೈನ್‌ ಬಿಡುಗಡೆಯಾಗಿ ತಾತ್ಕಾಲಿಕ ಸಂತೋಷ ಸಿಗಬಹುದು. ಆದರೆ ಇದೇ ಅಭ್ಯಾಸ ಜೀವನಪೂರ್ತಿ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ವೈದ್ಯರು ಎಚ್ಚರಿಸುತ್ತಾರೆ. ಧೂಮಪಾನದಿಂದ ಕ್ಯಾನ್ಸರ್‌, ಶ್ವಾಸಕೋಶದ ಕಾಯಿಲೆಗಳು ಹಾಗೂ ಹೃದಯ ಸಂಬಂಧಿ ಗಂಭೀರ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಸಿಗರೇಟ್ ಪ್ಯಾಕೆಟ್‌ಗಳ ಮೇಲೆಯೇ ಎಚ್ಚರಿಕೆ ಚಿತ್ರಗಳಿದ್ದರೂ ಅನೇಕರು ಈ ವ್ಯಸನದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಒಮ್ಮೆ ಚಟವಾದರೆ ಬಿಡುವುದು ಕಷ್ಟವಾದರೂ ಅಸಾಧ್ಯವಲ್ಲ. ನಿಮ್ಮ ದಿನಚರಿಯಲ್ಲಿ ಕೆಲವು ಸಣ್ಣ ಬದಲಾವಣೆಗಳು ಮತ್ತು ದೃಢ ಸಂಕಲ್ಪ ಇದ್ದರೆ ಧೂಮಪಾನವನ್ನು ಸುಲಭವಾಗಿ ತೊರೆಯಬಹುದು.

ಧೂಮಪಾನಕ್ಕೆ ಗುಡ್‌ಬೈ ಹೇಳಲು 6 ಪರಿಣಾಮಕಾರಿ ಮಾರ್ಗಗಳು

1. ದೃಢ ಸಂಕಲ್ಪವೇ ಮೊದಲ ಹೆಜ್ಜೆ

ಧೂಮಪಾನ ಬಿಡುವ ಪ್ರಯಾಣ ನಿಮ್ಮ ಮನಸ್ಸಿನಿಂದಲೇ ಆರಂಭವಾಗುತ್ತದೆ. “ನನ್ನ ಆರೋಗ್ಯಕ್ಕಾಗಿ, ನನ್ನ ಕುಟುಂಬಕ್ಕಾಗಿ ನಾನು ಈ ಅಭ್ಯಾಸವನ್ನು ಬಿಡುತ್ತಿದ್ದೇನೆ” ಎಂಬ ದೃಢ ನಿರ್ಧಾರವನ್ನು ಮನಸ್ಸಿನಲ್ಲಿ ಗಟ್ಟಿಯಾಗಿ ಬೆಳೆಸಿಕೊಳ್ಳಿ. ಇದೇ ನಿಮ್ಮ ಯಶಸ್ಸಿನ ಬುನಾದಿಯಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2. ಟ್ರಿಗರ್‌ಗಳನ್ನು ಗುರುತಿಸಿ, ದೂರವಿರಿ

ಕೆಲವರಿಗೆ ಮದ್ಯಪಾನ ಮಾಡುವಾಗ, ಮತ್ತೆ ಕೆಲವರಿಗೆ ಸ್ನೇಹಿತರೊಂದಿಗೆ ಚಹಾ ಕುಡಿಯುವಾಗ ಸಿಗರೇಟ್ ಸೇದುವ ಅಭ್ಯಾಸ ಇರುತ್ತದೆ. ಇಂತಹ ಸಂದರ್ಭಗಳನ್ನು ಗುರುತಿಸಿ ಸಾಧ್ಯವಾದಷ್ಟು ದೂರವಿರಿ. ಒಮ್ಮೆಲೇ ಬಿಡುವುದು ಕಷ್ಟವೆನಿಸಿದರೆ ಪ್ರತಿದಿನ ಸೇದುವ ಸಿಗರೇಟ್‌ಗಳ ಸಂಖ್ಯೆಯನ್ನು ಹಂತ ಹಂತವಾಗಿ ಕಡಿಮೆ ಮಾಡುತ್ತಾ ಬನ್ನಿ.

3. ಬಾಯಿಯನ್ನು ಖಾಲಿ ಬಿಡಬೇಡಿ

ಸಿಗರೇಟ್ ಸೇದುವ ಆಸೆ ಬಂದಾಗ ಬಾಯಿಯನ್ನು ಖಾಲಿಯಾಗಿ ಇರಿಸಬೇಡಿ. ಬದಲಿಗೆ ಇವುಗಳನ್ನು ಪ್ರಯತ್ನಿಸಿ.

  • ಏಲಕ್ಕಿ ಅಥವಾ ಸೋಂಪು ಕಾಳುಗಳನ್ನು ಅಗಿಯಿರಿ.
  • ಸಕ್ಕರೆರಹಿತ ಚ್ಯೂಯಿಂಗ್ ಗಮ್ ಅಥವಾ ಗಟ್ಟಿ ಮಿಠಾಯಿ ಸೇವಿಸಿ.
  • ಬಾದಾಮಿ, ವಾಲ್‌ನಟ್‌ಗಳಂತಹ ಡ್ರೈಫ್ರೂಟ್ಸ್ ಅಥವಾ ಕ್ಯಾರೆಟ್ ತುಂಡುಗಳನ್ನು ಅಗಿಯಿರಿ. ಇದರಿಂದ ಗಮನ ಧೂಮಪಾನದಿಂದ ಬೇರೆಡೆಗೆ ತಿರುಗುತ್ತದೆ.

4. ವ್ಯಾಯಾಮ ಮತ್ತು ಯೋಗಕ್ಕೆ ಆದ್ಯತೆ ನೀಡಿ

ಒತ್ತಡ ಕಡಿಮೆ ಮಾಡಲು ಅನೇಕರು ಧೂಮಪಾನ ಮಾಡುತ್ತಾರೆ. ಆದರೆ ನಿಯಮಿತ ವ್ಯಾಯಾಮ ಮತ್ತು ಯೋಗ ಮಾಡುವುದರಿಂದ ದೇಹದಲ್ಲಿ ಎಂಡಾರ್ಫಿನ್‌ಗಳು ಬಿಡುಗಡೆಯಾಗುತ್ತವೆ. ಇವು ಸಹಜವಾಗಿಯೇ ಒತ್ತಡವನ್ನು ಕಡಿಮೆ ಮಾಡಿ ಧೂಮಪಾನದ ಆಸೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.

5. ಕುಟುಂಬ ಮತ್ತು ಸ್ನೇಹಿತರ ಬೆಂಬಲ ಪಡೆಯಿರಿ

ಧೂಮಪಾನ ಬಿಡುವ ನಿರ್ಧಾರವನ್ನು ನಿಮ್ಮ ಕುಟುಂಬದವರಿಗೂ, ಆತ್ಮೀಯ ಸ್ನೇಹಿತರಿಗೆ ತಿಳಿಸಿ. ನೀವು ಮತ್ತೆ ಚಟದತ್ತ ಹೋಗುವ ಸಾಧ್ಯತೆ ಕಂಡರೆ ಅವರು ನಿಮ್ಮನ್ನು ಎಚ್ಚರಿಸಿ, ಮಾನಸಿಕವಾಗಿ ಪ್ರೋತ್ಸಾಹಿಸುತ್ತಾರೆ.

6. ಹೊಸ ಹವ್ಯಾಸಗಳನ್ನು ಬೆಳೆಸಿಕೊಳ್ಳಿ

ಖಾಲಿ ಸಮಯ ಸಿಕ್ಕಾಗಲೇ ಧೂಮಪಾನದ ಆಲೋಚನೆ ಹೆಚ್ಚಾಗುತ್ತದೆ. ಆದ್ದರಿಂದ ಚಿತ್ರ ಬಿಡಿಸುವುದು, ಕೈಚಳಕದ ಕೆಲಸಗಳು, ತೋಟಗಾರಿಕೆ ಅಥವಾ ಹೊಸ ಕೌಶಲ್ಯಗಳನ್ನು ಕಲಿಯುವಂತಹ ಹವ್ಯಾಸಗಳನ್ನು ರೂಢಿಸಿಕೊಳ್ಳಿ. ಇದರಿಂದ ಮನಸ್ಸು ಬೇರೆಡೆ ತೊಡಗಿಸಿಕೊಂಡು ಧೂಮಪಾನ ತೊರೆಯುವುದು ಸುಲಭವಾಗುತ್ತದೆ.

ನೆನಪಿರಲಿ…

ಸಿಗರೇಟ್ ಸೇದುವ ಅಭ್ಯಾಸದಿಂದ ಕಳೆದುಕೊಳ್ಳುವುದು ಕೇವಲ ನಿಮ್ಮ ಆರೋಗ್ಯವಲ್ಲ, ನಿಮ್ಮ ಕುಟುಂಬದ ಸಂತೋಷವೂ ಹೌದು. ಒಂದು ಕ್ಷಣ ಯೋಚಿಸಿ. ಇಂದೇ ಧೂಮಪಾನಕ್ಕೆ ಗುಡ್‌ಬೈ ಹೇಳುವ ದೃಢ ನಿರ್ಧಾರ ಮಾಡಿ. ಆರೋಗ್ಯಕರ ಮತ್ತು ಸಂತೋಷಕರ ಜೀವನದತ್ತ ಮೊದಲ ಹೆಜ್ಜೆ ಇಡಿ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular