ದಿನವಿಡೀ ಉತ್ಸಾಹ ಮತ್ತು ಸಕಾರಾತ್ಮಕತೆಯಿಂದ ಇರಲು ಬೆಳಗಿನ ಹತ್ತು ಆರೋಗ್ಯಕರ ಹವ್ಯಾಸಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ. ಬೇಗ ಏಳುವುದು, ಸಾಕಷ್ಟು ನೀರು ಕುಡಿಯುವುದು ಮತ್ತು ಪೌಷ್ಟಿಕಯುಕ್ತ ಆಹಾರ ಸೇವನೆಯಂತಹ ಸಣ್ಣ ಬದಲಾವಣೆಗಳು ಶಾರೀರಿಕ ಎನರ್ಜಿ ಹೆಚ್ಚಿಸುವುದಲ್ಲದೆ ಮಾನಸಿಕ ಪ್ರಶಾಂತತೆಗೂ ದಾರಿ ಮಾಡಿಕೊಡುತ್ತವೆ. ವಿಶೇಷವಾಗಿ ಎದ್ದ ತಕ್ಷಣ ಮೊಬೈಲ್ ಬಳಕೆಯಿಂದ ದೂರವಿರುವುದು ಮತ್ತು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ದಿನದ ಆರಂಭವನ್ನು ಹೆಚ್ಚು ಪಾಸಿಟಿವ್ ಆಗಿರಲು ಸಹಾಯ ಮಾಡುತ್ತದೆ.
ನಮ್ಮ ಬೆಳಗಿನ ಸಮಯ ಹೇಗೆ ಆರಂಭವಾಗುತ್ತದೆಯೋ, ನಮ್ಮ ಇಡೀ ದಿನವೂ ಹೆಚ್ಚು ಕಡಿಮೆ ಅದೇ ರೀತಿ ಇರುತ್ತದೆ. ಆದರೆ ಅನೇಕರು ಬೆಳಿಗ್ಗೆ ಏಳಲು ಕಷ್ಟಪಡುತ್ತಾರೆ ಅಥವಾ ಎದ್ದ ನಂತರವೂ ಸುಸ್ತು ಮತ್ತು ನಿರಾಸಕ್ತಿಯಿಂದ ಇರುತ್ತಾರೆ. ನಿಮ್ಮ ದಿನವಿಡೀ ಎನರ್ಜಿಟಿಕ್ ಆಗಿರಲು ಈ ಕೆಳಗಿನ ಅಭ್ಯಾಸಗಳನ್ನು ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳಿ
ದಿನವಿಡೀ ಎನರ್ಜಿ ನೀಡುವ 10 ಸೂತ್ರಗಳು:
- ಬೇಗ ಏಳುವ ಅಭ್ಯಾಸ: ತಡವಾಗಿ ಏಳುವುದರಿಂದ ‘ಬ್ರೈನ್ ಫಾಗ್’ ಉಂಟಾಗುತ್ತದೆ ಮತ್ತು ದಿನವಿಡೀ ತುಂಬಾ ಬ್ಯುಸಿಯಾಗಿರುವಂತೆ ಭಾಸವಾಗುತ್ತದೆ. ಬೆಳಿಗ್ಗೆ ಬೇಗ ಏಳುವುದರಿಂದ ದೇಹ ಮತ್ತು ಮನಸ್ಸಿಗೆ ಪ್ರಶಾಂತವಾದ ಆರಂಭ ಸಿಗುತ್ತದೆ.
- ನೀರು ಕುಡಿಯುವುದು: ರಾತ್ರಿಯಿಡೀ ದೇಹವು ನಿರ್ಜಲೀಕರಣಗೊಂಡಿರುತ್ತದೆ (Dehydrate). ಬೆಳಿಗ್ಗೆ ಎದ್ದ ತಕ್ಷಣ ಒಂದು ಅಥವಾ ಎರಡು ಲೋಟ ನೀರು ಕುಡಿಯುವುದು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ದೇಹವನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ.
- ಮೊಬೈಲ್ನಿಂದ ದೂರವಿರಿ: ಎದ್ದ ತಕ್ಷಣ ಮೊಬೈಲ್ ನೋಡುವುದರಿಂದ ಮೆದುಳಿನ ಮೇಲೆ ಒತ್ತಡ ಹೆಚ್ಚಾಗಿ ಆತಂಕ ಉಂಟಾಗುತ್ತದೆ. ಎದ್ದ ನಂತರ ಕನಿಷ್ಠ 30 ನಿಮಿಷಗಳ ಕಾಲ ಮೊಬೈಲ್ ಬಳಸದಿರುವುದು ಒಳ್ಳೆಯದು.
- ಸರಳ ವ್ಯಾಯಾಮ: ವಾಕಿಂಗ್, ಯೋಗ ಅಥವಾ ಸ್ಟ್ರೆಚಿಂಗ್ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ದೇಹಕ್ಕೆ ನೈಸರ್ಗಿಕವಾಗಿ ಶಕ್ತಿ ದೊರೆಯುತ್ತದೆ.
- ಸೂರ್ಯನ ಬೆಳಕು: ಬೆಳಗಿನ ಸೂರ್ಯನ ಬೆಳಕು ದೇಹಕ್ಕೆ ವಿಟಮಿನ್ ಡಿ ಒದಗಿಸುತ್ತದೆ. ಇದು ಮೂಡ್ ಸುಧಾರಿಸಲು ಮತ್ತು ಸುಸ್ತನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿದಿನ 10 ನಿಮಿಷ ಬಿಸಿಲಿನಲ್ಲಿರಿ.
- ಪೌಷ್ಟಿಕ ಉಪಹಾರ: ಉಪಹಾರವನ್ನು ಎಂದಿಗೂ ಸ್ಕಿಪ್ ಮಾಡಬೇಡಿ. ಮೊಟ್ಟೆ, ನಟ್ಸ್, ಬೇಳೆಕಾಳುಗಳು ಮತ್ತು ಮೊಸರಿನಂತಹ ಪ್ರೊಟೀನ್ ಯುಕ್ತ ಆಹಾರಗಳು ದೀರ್ಘಕಾಲದವರೆಗೆ ಶಕ್ತಿಯನ್ನು ನೀಡುತ್ತವೆ.
- ಧ್ಯಾನ ಅಥವಾ ಪ್ರಾಣಾಯಾಮ: ವ್ಯಾಯಾಮಕ್ಕೆ ಸಮಯವಿಲ್ಲದಿದ್ದರೆ ಕನಿಷ್ಠ ಕೆಲವು ನಿಮಿಷಗಳ ಕಾಲ ಧ್ಯಾನ ಅಥವಾ ದೀರ್ಘ ಉಸಿರಾಟದ (Deep Breathing) ಅಭ್ಯಾಸ ಮಾಡಿ. ಇದು ಮಾನಸಿಕ ಶಾಂತಿಯನ್ನು ಹೆಚ್ಚಿಸಿ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ.
- ದಿನದ ಯೋಜನೆ (Day Plan): ಅಂದು ಮಾಡಬೇಕಾದ ಕೆಲಸಗಳ ಬಗ್ಗೆ ಮೊದಲೇ ಪ್ಲಾನ್ ಮಾಡಿಕೊಳ್ಳಿ. ಇದರಿಂದ ಗೊಂದಲ ಮತ್ತು ಒತ್ತಡ ಕಡಿಮೆಯಾಗುತ್ತದೆ.
- ಚಹಾ ಅಥವಾ ಕಾಫಿ ಮಿತವಾಗಿರಲಿ: ಬೆಳಿಗ್ಗೆ ಚಹಾ ಅಥವಾ ಕಾಫಿ ಕುಡಿಯುವವರು ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಬೇಕು. ಎನರ್ಜಿ ಡ್ರಿಂಕ್ಸ್ಗಳಿಂದ ದೂರವಿರಿ, ಏಕೆಂದರೆ ಅವು ತಾತ್ಕಾಲಿಕವಾಗಿ ಚೈತನ್ಯ ನೀಡಿದರೂ ನಂತರ ಸುಸ್ತನ್ನು ಹೆಚ್ಚಿಸುತ್ತವೆ.
- ಸಕಾರಾತ್ಮಕ ಆಲೋಚನೆ: ದಿನವನ್ನು ಒಳ್ಳೆಯ ಆಲೋಚನೆಗಳೊಂದಿಗೆ ಪ್ರಾರಂಭಿಸಿ. ನಕಾರಾತ್ಮಕ ವಿಷಯಗಳ ಬಗ್ಗೆ ಯೋಚಿಸದೆ, ನಿಮಗೆ ಯಾವುದು ಸಂತೋಷ ನೀಡುತ್ತದೆಯೋ ಅದರೊಂದಿಗೆ ದಿನವನ್ನು ಆರಂಭಿಸಿ.

