HomeKarnatakaಮತದಾನ ಮಾಡಿದ ಫೋಟೋ ವಾಟ್ಸಾಪ್ ನಲ್ಲಿ ಹಾಕಿದ ಯುವಕನ ವಿರುದ್ಧ ಕೇಸ್ ದಾಖಲು

ಮತದಾನ ಮಾಡಿದ ಫೋಟೋ ವಾಟ್ಸಾಪ್ ನಲ್ಲಿ ಹಾಕಿದ ಯುವಕನ ವಿರುದ್ಧ ಕೇಸ್ ದಾಖಲು

ಮಂಗಳೂರು: ಪುತ್ತೂರಿನ ಮತಗಟ್ಟೆಯಲ್ಲಿ ಯುವಕನೊಬ್ಬ ಮತದಾನ ಮಾಡಿದ ಫೋಟೋ ವಾಟ್ಸಾಪ್ ನಲ್ಲಿ ಹಾಕಿದ್ದು, ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.

ಮತಗಟ್ಟೆಯೊಳಗೆ ಮೊಬೈಲ್ ಬಳಕೆಗೆ ಚುನಾವಣಾ ಆಯೋಗ ನಿರ್ಬಂಧ ವಿಧಿಸಿದೆ. ಆದರೂ ಅದನ್ನು ಉಲ್ಲಂಘಿಸಿ ಮತದಾನ ಮಾಡುವ ಫೋಟೋ ಮೊಬೈಲ್ ನಲ್ಲಿ ತೆಗೆದು ವಾಟ್ಸಾಪ್ ನಲ್ಲಿ ಹರಿಬಿಟ್ಟ ಯುವ ಕಾಂಗ್ರೆಸ್ ಮುಖಂಡ ರಂಜಿತ್ ಬಂಗೇರ ಅವರ ವಿರುದ್ಧ ಕೇಸ್ ದಾಖಲಾಗಿದೆ.

ಆರ್ಯಾಪು ನಿವಾಸಿಯಾಗಿರುವ ರಂಜಿತ್ ತಮ್ಮ ಬೆರಳು ಮತ್ತು ಮತಯಂತ್ರದ ಕಾಣುವಂತೆ ಮತ ಚಲಾವಣೆ ಮಾಡಿದ ಫೋಟೋ ತೆಗೆದು ವಾಟ್ಸಾಪ್ ಗ್ರೂಪ್ ನಲ್ಲಿ ಹರಿಬಿಟ್ಟಿದ್ದಾರೆ.ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular