HomeIndiaBIG NEWS : ಫೋಕ್ಸ್‌ವ್ಯಾಗನ್ ಉದ್ಯೋಗಿಗಳಿಗೆ ಬಿಗ್ ಶಾಕ್; 1 ಲಕ್ಷ ನೌಕರರನ್ನು ವಜಾಗೊಳಿಸಲು ಕಂಪನಿ...

BIG NEWS : ಫೋಕ್ಸ್‌ವ್ಯಾಗನ್ ಉದ್ಯೋಗಿಗಳಿಗೆ ಬಿಗ್ ಶಾಕ್; 1 ಲಕ್ಷ ನೌಕರರನ್ನು ವಜಾಗೊಳಿಸಲು ಕಂಪನಿ ನಿರ್ಧಾರ!

ಜರ್ಮನಿಯ ಪ್ರಮುಖ ಕಾರು ತಯಾರಿಕಾ ಸಂಸ್ಥೆ ಫೋಕ್ಸ್‌ವ್ಯಾಗನ್ ಭಾರೀ ಪ್ರಮಾಣದ ಪುನರ್‌ರಚನೆಗೆ ಮುಂದಾಗಿದೆ. ಇದರ ಭಾಗವಾಗಿ ವಿಶ್ವಾದ್ಯಂತ ಸುಮಾರು 1 ಲಕ್ಷ ಉದ್ಯೋಗಿಗಳನ್ನು ವಜಾಗೊಳಿಸಲು ಸಂಸ್ಥೆ ನಿರ್ಧರಿಸಿದೆ.

ಈ ಕುರಿತು ಸಂಸ್ಥೆಯ ಮೇಲ್ವಿಚಾರಣಾ ಮಂಡಳಿ ಗುರುವಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇತ್ತೀಚೆಗಷ್ಟೇ 50 ಸಾವಿರ ಉದ್ಯೋಗಿಗಳನ್ನು ಕಡಿತಗೊಳಿಸಲು ನಿರ್ಧರಿಸಿದ್ದ ಫೋಕ್ಸ್‌ವ್ಯಾಗನ್, ಇದೀಗ ಹೆಚ್ಚುವರಿಯಾಗಿ ಮತ್ತೊಂದು 50 ಸಾವಿರ ಉದ್ಯೋಗಿಗಳ ಕಡಿತಕ್ಕೆ ಮಂಡಳಿ ಅನುಮೋದನೆ ನೀಡಿದೆ. ಕಾರ್ಮಿಕ ಸಂಘಟನೆಗಳೊಂದಿಗೆ ದೀರ್ಘಕಾಲದ ಚರ್ಚೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಂಡಳಿ ತಿಳಿಸಿದೆ.

ಸುಂಕದ ಹೊರೆ, ಏಷ್ಯಾದ ಕಂಪನಿಗಳಿಂದ ಎದುರಾಗುತ್ತಿರುವ ತೀವ್ರ ಸ್ಪರ್ಧೆ ಹಾಗೂ ಅಗತ್ಯಕ್ಕಿಂತ ಹೆಚ್ಚಿನ ಉತ್ಪಾದನಾ ಸಾಮರ್ಥ್ಯ ಇರುವ ಹಿನ್ನೆಲೆಯಲ್ಲಿ ಸಂಸ್ಥೆ ಪುನರ್‌ರಚನೆಗೆ ಮುಂದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಫೋಕ್ಸ್‌ವ್ಯಾಗನ್‌ನ ಆಡಳಿತ ಮಂಡಳಿ ರೂಪಿಸಿರುವ ಪುನರ್‌ರಚನಾ ಯೋಜನೆಗೆ ಮೇಲ್ವಿಚಾರಣಾ ಮಂಡಳಿ ಅನುಮೋದನೆ ನೀಡಿದೆ. ಜಾಗತಿಕ ಮಟ್ಟದಲ್ಲಿ ಸಂಸ್ಥೆಯ ಉದ್ಯೋಗಿ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆಗಳ ಅಗತ್ಯವಿದೆ ಎಂದು ಫೋಕ್ಸ್‌ವ್ಯಾಗನ್ ಹೇಳಿದೆ.

ಆದರೆ, 1 ಲಕ್ಷ ಉದ್ಯೋಗಿಗಳ ಕಡಿತ ಯಾವಾಗ ನಡೆಯಲಿದೆ, ಯಾವ ದೇಶಗಳು ಅಥವಾ ಯಾವ ವಿಭಾಗಗಳಲ್ಲಿ ಉದ್ಯೋಗ ಕಡಿತವಾಗಲಿದೆ ಎಂಬ ಬಗ್ಗೆ ಸಂಸ್ಥೆ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ.

ಈ ಯೋಜನೆಗೆ ಸಂಬಂಧಿಸಿದಂತೆ ಫೋಕ್ಸ್‌ವ್ಯಾಗನ್ ಮಂಡಳಿ, ಸಂಸ್ಥೆಯ ಬಹುಪಾಲು ಷೇರುದಾರರಾದ ಪೋರ್ಷೆ ಎಸ್‌ಇ ಹಾಗೂ ಕಾರ್ಮಿಕ ಸಂಘಟನೆಗಳ ನಡುವೆ ಸುದೀರ್ಘ ಚರ್ಚೆಗಳು ನಡೆದಿವೆ. ಪುನರ್‌ರಚನಾ ಯೋಜನೆಗೆ ಅನುಮೋದನೆ ಪಡೆಯಲು ಸಂಸ್ಥೆ ಸಾಮಾನ್ಯ ಸಭೆ ನಡೆಸಲು ಸಿದ್ಧವಾಗಿತ್ತು ಎಂಬ ವರದಿಗಳೂ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು.

ಚೀನಾ ಕಂಪನಿಗಳಿಂದ ಹೆಚ್ಚಿದ ಸ್ಪರ್ಧೆ

2025ರ ವೇಳೆಗೆ ಫೋಕ್ಸ್‌ವ್ಯಾಗನ್ ಸಂಸ್ಥೆಯಲ್ಲಿ ವಿಶ್ವಾದ್ಯಂತ ಸುಮಾರು 6.6 ಲಕ್ಷ ಉದ್ಯೋಗಿಗಳು ಇದ್ದರು. ಬೆಂಟ್ಲಿ, ಲ್ಯಾಂಬೋರ್ಗಿನಿ ಸೇರಿದಂತೆ ಹಲವು ಪ್ರಮುಖ ಕಾರು ಬ್ರ್ಯಾಂಡ್‌ಗಳನ್ನು ಸಂಸ್ಥೆ ತಯಾರಿಸುತ್ತದೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ಸಂಸ್ಥೆಯ ಲಾಭದಲ್ಲಿ ಇಳಿಕೆ ಕಂಡುಬಂದಿದೆ. ವಿಶೇಷವಾಗಿ ಚೀನಾದ ಕಾರು ತಯಾರಿಕಾ ಕಂಪನಿಗಳಿಂದ ಹೆಚ್ಚುತ್ತಿರುವ ಸ್ಪರ್ಧೆ ಫೋಕ್ಸ್‌ವ್ಯಾಗನ್ ಮೇಲೆ ಪರಿಣಾಮ ಬೀರಿದೆ.

ಅಮೆರಿಕದಲ್ಲಿ ಟ್ರಂಪ್ ಆಡಳಿತದ ಸುಂಕ ನೀತಿಯಿಂದಾಗಿ ಫೋಕ್ಸ್‌ವ್ಯಾಗನ್ ಕಾರುಗಳ ಮಾರಾಟವೂ ಕುಸಿದಿದೆ. ಮತ್ತೊಂದೆಡೆ, ಹೊಸ ತಂತ್ರಜ್ಞಾನಗಳನ್ನು ವೇಗವಾಗಿ ಅಳವಡಿಸಿಕೊಳ್ಳುತ್ತಿರುವ ಚೀನಾದ ಕಂಪನಿಗಳಿಗೆ ಕಡಿಮೆ ಉತ್ಪಾದನಾ ವೆಚ್ಚವೂ ಅನುಕೂಲವಾಗುತ್ತಿದೆ ಎಂದು ಆಟೋಮೊಬೈಲ್ ಕ್ಷೇತ್ರದ ತಜ್ಞರು ಹೇಳಿದ್ದಾರೆ.

ಚೀನಾದ ಬಿವೈಡಿ (BYD) ಕಂಪನಿಯ ಕಾರುಗಳ ಮಾರಾಟವು ಬ್ರಿಟನ್, ಯುರೋಪ್ ಹಾಗೂ ಆಗ್ನೇಯ ಏಷ್ಯಾದ ಹಲವು ದೇಶಗಳಲ್ಲಿ ಗಮನಾರ್ಹವಾಗಿ ಏರಿಕೆಯಾಗಿದೆ. ಇದು ಜಾಗತಿಕ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular