HomeKarnatakaನೋಡನೋಡುತ್ತಿದ್ದಂತೆ ಭಾರೀ ಗಾಳಿಮಳೆಗೆ ಕುಸಿದುಬಿದ್ದ ವಿಷ್ಣುವರ್ಧನ್ ಕಟ್‌ಔಟ್: 2 ಆಟೊಗಳು ನಜ್ಜುಗುಜ್ಜು; ವಿಡಿಯೊ

ನೋಡನೋಡುತ್ತಿದ್ದಂತೆ ಭಾರೀ ಗಾಳಿಮಳೆಗೆ ಕುಸಿದುಬಿದ್ದ ವಿಷ್ಣುವರ್ಧನ್ ಕಟ್‌ಔಟ್: 2 ಆಟೊಗಳು ನಜ್ಜುಗುಜ್ಜು; ವಿಡಿಯೊ

ನಿನ್ನೆ ( ಏಪ್ರಿಲ್ 29 ) ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆ ಅನೇಕ ಕಡೆ ಅವಾಂತರಗಳನ್ನು ಸೃಷ್ಟಿಸಿದೆ. ಮಳೆ ಜತೆ ಜೋರಾದ ಗಾಳಿ ಬೀಸಿದ್ದ ಕಾರಣ ಬಿರುಬೇಸಿಗೆಗೆ ಒಣಗಿ ನಿಂತಿದ್ದ ಅನೇಕ ಮರಗಳು ನೆಲಕ್ಕುರುಳಿ ವಾಹನಗಳಿಗೆ ಹಾನಿಯುಂಟಾಗಿದೆ.

ಈ ಮಹಾ ಮಳೆಗೆ ನಗರದಾದ್ಯಂತ ಒಟ್ಟು 170 ಮರಗಳು ನೆಲಕ್ಕುರುಳಿದರೆ, 68 ಪ್ರದೇಶಗಳು ಜಲಾವೃತವಾಗಿವೆ. ಇನ್ನು ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದ ಕಾರಣ ಏಳು ಮಂದಿ ಸಾವನ್ನಪ್ಪಿದ್ದು, ಸಂಜೆ ಸುರಿದ ಒಂದು ಮಳೆ ಭಾರೀ ಪರಿಣಾಮ ಬೀರಿದೆ.

ಇನ್ನು ನಗರದ ಮಾಗಡಿ ರಸ್ತೆಯಲ್ಲಿರುವ ಪ್ರಸನ್ನ ಚಿತ್ರಮಂದಿರದಲ್ಲಿ ಹಾಕಲಾಗಿದ್ದ ನಟ ವಿಷ್ಣುವರ್ಧನ್‌ರವರ ಕಟ್‌ಔಟ್ ಮರದ ತುಂಡುಗಳ ಸಮೇತ ನೆಲಕ್ಕೆ ಉರುಳಿದ್ದು, ಅಲ್ಲಿಯೇ ನಿಂತಿದ್ದ ಎರಡು ಆಟೊಗಳು ಜಖಂಗೊಂಡಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇತ್ತೀಚೆಗಷ್ಟೆ ಈ ಚಿತ್ರಮಂದಿರದಲ್ಲಿ ಕೋಟಿಗೊಬ್ಬ ಚಿತ್ರದ ಮರುಬಿಡುಗಡೆಯಾಗಿತ್ತು. ಈ ಸಲುವಾಗಿ ನೂರು ಅಡಿ ಎತ್ತರದ ಕಟ್‌ಔಟ್ ನಿಲ್ಲಿಸಲಾಗಿತ್ತು. ಆದರೆ ಭಾರೀ ಗಾಳಿಯ ಆರ್ಭಟಕ್ಕೆ ಈ ಕಟ್‌ಔಟ್ ನೆಲಕ್ಕೆ ಬಿದ್ದಿದೆ. ಕಟ್‌ಔಟ್ ಮರಗಳ ಸಮೇತ ನೆಲಕ್ಕೆ ಬಿದ್ದು ಆಟೊಗಳು ಜಖಂಗೊಂಡ ವಿಡಿಯೊವನ್ನು ಸೆರೆಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular