HomeEntertainmentಜೂನ್ 14ಕ್ಕೆ ವಿಷ್ಣು ಮಂಚು ಅಭಿನಯದ 'ಕಣ್ಣಪ್ಪ' ಟೀಸರ್

ಜೂನ್ 14ಕ್ಕೆ ವಿಷ್ಣು ಮಂಚು ಅಭಿನಯದ ‘ಕಣ್ಣಪ್ಪ’ ಟೀಸರ್

ಮುಕೇಶ್ ಕುಮಾರ್ ಸಿಂಗ್ ನಿರ್ದೇಶನದ ವಿಷ್ಣು ಮಂಚು ಅಭಿನಯದ ಬಹುನಿರೀಕ್ಷಿತ ‘ಕಣ್ಣಪ್ಪ’ ಚಿತ್ರದ ಟೀಸರ್ ಇದೇ 14ಕ್ಕೆ ಯೂಟ್ಯೂಬ್ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ. ದೊಡ್ಡ ದೊಡ್ಡ ಸ್ಟಾರ್ ಸ್ಟಾರ್ಗಳನ್ನ ಒಳಗೊಂಡ ಈ ಸಿನಿಮಾ ಬಗ್ಗೆ ಈಗಾಗಲೇ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿದೆ

ಎ ವಿ ಎ ಎಂಟರ್ಟೈನ್ಮೆಂಟ್ ಮತ್ತು 24 ಪ್ರೇಮ್ಸ್ ಫ್ಯಾಕ್ಟರಿ ಬ್ಯಾನರ್ ನಲ್ಲಿ ಮೋಹನ್ ಬಾಬು ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ವಿಷ್ಣು ಮಂಚೂ ಸೇರಿದಂತೆ ಪ್ರೀತಿ ಮುಖುಂದನ್, ಆರ್.ಶರತ್ಕುಮಾರ್, ಬ್ರಹ್ಮಾನಂದಂ, ದೇವರಾಜ್, ಐಶ್ವರ್ಯಾ, ಮುಖೇಶ್ ರಿಷಿ, ರಾಹುಲ್ ಮಾಧವ್, ಕೌಶಲ್ ಮಂದಾ, ರಘು ಬಾಬು, ಅರ್ಪಿತ್ ರಂಕಾ, ಸಪ್ತಗಿರಿ,  ಬಣ್ಣ ಹಚ್ಚಿದ್ದಾರೆ, ಇನ್ನುಳಿದಂತೆ ಮೋಹನ್ ಲಾಲ್, ಅಕ್ಷಯ್ ಕುಮಾರ್, ಪ್ರಭಾಸ್, ಮತ್ತು ಕಾಜಲ್ ಅಗರ್ವಾಲ್ ಅತಿಥಿ ಪಾತ್ರ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ನೈಜ ಘಟನಾಧಾರಿತ ಈ ಸಿನಿಮಾ ಸುಮಾರು 5 ಭಾಷೆಗಳಲ್ಲಿ ತೆರೆ ಕಾಣಲಿದೆ.

Image

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular