HomeIndiaವಿಡಿಯೋ: ದೆಹಲಿ ಮೆಟ್ರೋ ರೈಲಿನಲ್ಲೇ ಕೂದಲು ನೇರ ಮಾಡುವ ಯಂತ್ರ ಬಳಸಿದ ಮಹಿಳೆ

ವಿಡಿಯೋ: ದೆಹಲಿ ಮೆಟ್ರೋ ರೈಲಿನಲ್ಲೇ ಕೂದಲು ನೇರ ಮಾಡುವ ಯಂತ್ರ ಬಳಸಿದ ಮಹಿಳೆ

ದಿನಕ್ಕೊಂದು ಚಿತ್ರವಿಚಿತ್ರ ಕಾರಣಗಳಿಗೆ ದೆಹಲಿ ಮೆಟ್ರೋ ಸುದ್ದಿಯಾಗುತ್ತಿದೆ. ಯುವ ಪ್ರಣಯಿಗಳ ಚುಂಬನ, ಟೂಪೀಸ್ ಧಾರಿ ಹೆಂಗಸು, ರೀಲ್ಸ್‌ ಸೃಷ್ಟಿಕರ್ತರ ಅವಾಂತರಗಳಂಥ ಕಾರಣಗಳಿಂದ ಈಗೀಗ ದೆಹಲಿ ಮೆಟ್ರೋ ಎಂದರೆ ಏನಾದರೊಂದು ವಿಚಿತ್ರವೇ ನೆನಪಾಗುವ ಹಾಗೆ ಆಗಿದೆ.

ಇದೇ ದೆಹಲಿ ಮೆಟ್ರೋದ ರೈಲೊಂದು ಪವರ್‌ ಸಾಕೆಟ್‌ನಲ್ಲಿ ಕೂದಲು ನೆಟ್ಟಗಾಗಿಸುವ ಯಂತ್ರವೊಂದನ್ನು ಸಿಕ್ಕಿಸಿಕೊಂಡು ಕೂದಲು ನೇರವಾಗಿಸಿಕೊಳ್ಳುತ್ತಿರುವ ಯುವತಿಯೊಬ್ಬಳ ವಿಡಿಯೋ ಸುದ್ದಿ ಮಾಡುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ನಾಳೆ ಯಾರಾದರೂ ವಾಷಿಂಗ್ ಮಶೀನ್ ಅಥವಾ ಐರನ್ ಬಾಕ್ಸನ್ನು ಯಾರಾದರೂ ಪ್ಲಗ್ ಇನ್ ಮಾಡಬಹುದು,” ಎಂದು ನೆಟ್ಟಿಗರೊಬ್ಬರು ವ್ಯಂಗ್ಯವಾಗಿ ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಭಾರೀ ವೈರಲ್ ಆಗಿರುವ ವಿಡಿಯೋಗೆ ಅದಾಗಲೇ ಐದು ಲಕ್ಷಕ್ಕೂ ಅಧಿಕ ವೀಕ್ಷಣೆಗಳು ಸಿಕ್ಕಿವೆ.

https://twitter.com/HasnaZarooriHai/status/1670119257215238145?ref_src=twsrc%5Etfw%7Ctwcamp%5Etweetembed%7Ctwter

For Latest News Updates, Join Our Whatsapp Community🚩
RELATED ARTICLES

Most Popular