HomeIndiaViral Video | ದಕ್ಷಿಣ ಭಾರತದ ಇಡ್ಲಿ - ಸಾಂಬಾರ್ ರುಚಿಗೆ ಮಾರುಹೋದ ರಷ್ಯಾ ಯುವತಿ;...

Viral Video | ದಕ್ಷಿಣ ಭಾರತದ ಇಡ್ಲಿ – ಸಾಂಬಾರ್ ರುಚಿಗೆ ಮಾರುಹೋದ ರಷ್ಯಾ ಯುವತಿ; ರಸ್ತೆ ಬದಿ ಸ್ಟಾಲಿನಲ್ಲಿ ಚಪ್ಪರಿಸಿ ತಿಂದ Insta ‘ಇನ್ಫ್ಲುಯೆನ್ಸರ್’

ರಷ್ಯಾ ಮೂಲದ ಸಾಮಾಜಿಕ ಜಾಲತಾಣ ಪ್ರಭಾವಿ ಯುವತಿಯೊಬ್ಬರು ದಕ್ಷಿಣ ಭಾರತದ ಪ್ರಖ್ಯಾತ ತಿನಿಸು ಇಡ್ಲಿ – ಸಾಂಬಾರ್ ರುಚಿಗೆ ಮಾರು ಹೋಗಿದ್ದಾರೆ. ಮುಂಬೈಗೆ ಆಗಮಿಸಿದ್ದ ಅವರು ರಸ್ತೆ ಬದಿಯಲ್ಲಿ ಮಹಿಳೆಯೊಬ್ಬರು ನಡೆಸುತ್ತಿದ್ದ ಸ್ಟಾಲ್ ಗೆ ಭೇಟಿ ನೀಡಿ ಇಡ್ಲಿ ಸಾಂಬಾರ್ ಚಪ್ಪರಿಸಿ ತಿಂದಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಷ್ಯಾದ ಮರಿಯಾ ಜೋಗುರ್ವಾ ಪ್ರಸ್ತುತ ಗೋವಾದಲ್ಲಿ ನೆಲೆಸಿದ್ದು, ಕಾರ್ಯನಿಮಿತ್ತ ಮುಂಬೈಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು ರಸ್ತೆ ಬದಿಯಲ್ಲಿ ಮಹಿಳೆಯೊಬ್ಬರು ಹಾಕಿಕೊಂಡಿದ್ದ ತಿನಿಸುಗಳ ಸ್ಟಾಲ್ ಗೆ ಭೇಟಿ ನೀಡಿದ್ದಾರೆ. ಇಡ್ಲಿ – ಸಾಂಬಾರ್ ಆರ್ಡರ್ ಮಾಡಿದ ಮರಿಯಾ ಅದರ ರುಚಿಗೆ ಮಾರು ಹೋಗಿದ್ದಾರೆ. ಅಲ್ಲದೆ ಈ ವಿಡಿಯೋವನ್ನು ತಮ್ಮ instagram ಅಕೌಂಟ್ ನಲ್ಲಿ ಹಾಕಿಕೊಂಡಿದ್ದಾರೆ.

ಅಲ್ಲದೆ ಇಡ್ಲಿ – ಸಾಂಬಾರ್ ರುಚಿಯ ವರ್ಣನೆಯನ್ನು ಮಾಡಿರುವ ಅವರು, ಮೊದಲಿಗೆ ನಾನು ಈ ತಿನಿಸನ್ನು ಅಷ್ಟಾಗಿ ಇಷ್ಟಪಟ್ಟಿರಲಿಲ್ಲ. ಆದರೆ ಹಬೆಯಲ್ಲಿ ಬೆಂದಿದ್ದ ಈ ಆರೋಗ್ಯಕರ ಆಹಾರದ ರುಚಿಗೆ ಫಿದಾ ಆಗಿದ್ದೇನೆ ಎಂದು ಹೇಳಿರುವ ಅವರು, ನೀವು ಸಹ ಇಡ್ಲಿ – ಸಾಂಬಾರ್ ಸೇವಿಸಿ ಎಂದು ತಮ್ಮ ಅನುಯಾಯಿಗಳಿಗೆ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಶುಚಿ-ರುಚಿಯಿಂದ ಕೂಡಿರುವ ಮುಂಬೈನ ಈ ಮಹಿಳೆಯ ತಿನಿಸುಗಳ ಸ್ಟಾಲ್ ಗೆ ಒಮ್ಮೆ ಭೇಟಿ ಕೊಡಿ ಎಂದು ಮನವಿ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

https://www.youtube.com/shorts/3O5NHN_w88w?feature=share

For Latest News Updates, Join Our Whatsapp Community🚩
RELATED ARTICLES

Most Popular