ರಸ್ತೆಗಳಲ್ಲಿ ಇತರ ವಾಹನಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಜನ ತಮ್ಮ ವಾಹನಗಳನ್ನು ಅಜಾಗರೂಕತೆಯಿಂದ ಹಿಗ್ಗಾಮುಗ್ಗಾ ಚಲಾಯಿಸುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇಂತಹ ಪ್ರಕರಣಗಳ ಸರಣಿಯಲ್ಲಿ ನೋಯ್ಡಾ- ಗ್ರೇಟರ್ ನೋಯ್ಡಾ ಎಕ್ಸ್ ಪ್ರೆಸ್ವೇಯಲ್ಲಿ ಕಾರ್ ಡ್ರೈವರ್ ತನ್ನ ಕಾರನ್ನು ಅಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ.
ಈ ವೀಡಿಯೊದಲ್ಲಿ ಡ್ರೈವರ್ ತನ್ನ ಕೆಂಪು ಹ್ಯುಂಡೈ ಐ20 ಕಾರ್ ಅನ್ನು ರಸ್ತೆಯಲ್ಲಿ ಓಡಿಸುತ್ತಿದ್ದಾನೆ. ಕಾರು ರಸ್ತೆಯ ಎಡಭಾಗದಿಂದ ಪ್ರಾರಂಭವಾಗಿ ಅರ್ಧ ಸುತ್ತು ಹಾಕಿ ರಸ್ತೆಯ ಬಲಭಾಗಕ್ಕೆ ಹೋಗಿ ಮತ್ತೆ ಎಡಭಾಗಕ್ಕೆ ಬರುತ್ತಿರುವುದನ್ನು ತೋರಿಸುತ್ತದೆ. ಇದೇ ವೇಳೆ ಹಿಂದೆ ಸಾಕಷ್ಟು ವಾಹನಗಳು ಬರುತ್ತಿದ್ದು ಅಪಘಾತ ಸಂಭವಿಸುವ ಸಾಧ್ಯತೆ ಇತ್ತು.
ನೋಯ್ಡಾ- ಗ್ರೇಟರ್ ನೋಯ್ಡಾ ಎಕ್ಸ್ ಪ್ರೆಸ್ವೇಯಲ್ಲಿ ನಡೆಸಿರುವ ಈ ಅಜಾಗರೂಕತೆ ಚಾಲನೆಯ ದೃಶ್ಯ ರೆಕಾರ್ಡ್ ಮಾಡಲಾಗಿದ್ದು ಕಾರ್ ನಂಬರ್ ಪ್ಲೇಟ್ ಹೊಂದಿಲ್ಲ.
A video capturing a reckless stunt performance with a car on the Noida-Greater Noida Expressway has gone viral.
The footage raises serious concerns about public safety.#viralvideo #Noidaexpresswaystunt #CarstuntinNoidaexpressway #viralcarstuntvideo #Noidaviralvideo… pic.twitter.com/b4nklBEMfA
— Republic (@republic) May 30, 2024

