HomeIndiaಸೀರೆಯಲ್ಲಿ ಜಿಮ್​ ವರ್ಕೌಟ್​: ನೆಟ್ಟಿಗರು ನಿಬ್ಬೆರಗಾಗುವ ವಿಡಿಯೋ ವೈರಲ್​

ಸೀರೆಯಲ್ಲಿ ಜಿಮ್​ ವರ್ಕೌಟ್​: ನೆಟ್ಟಿಗರು ನಿಬ್ಬೆರಗಾಗುವ ವಿಡಿಯೋ ವೈರಲ್​

ಮಹಿಳೆಯೊಬ್ಬರು ಸೀರೆಯಲ್ಲಿ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇಂಟರ್ನೆಟ್ ಬಳಕೆದಾರರನ್ನು ಆಕರ್ಷಿಸುತ್ತಿದೆ.

ಫಿಟ್‌ನೆಸ್ ಫ್ರೀಕ್ ಆಗಿರುವ ರೀನಾ ಸಿಂಗ್ ಎಂಬ ಬಳಕೆದಾರರಿಂದ ಈ ಕಿರು ವಿಡಿಯೋ ವೈರಲ್​ ಆಗಿದೆ. ಇವರು ತಮ್ಮ ಖಾತೆಯಲ್ಲಿ ವ್ಯಾಯಾಮಕ್ಕೆ ಸಂಬಂಧಿಸಿದ ವಿಷಯವನ್ನು ಪೋಸ್ಟ್ ಮಾಡುತ್ತಾರೆ. ಈಗ ಪೋಸ್ಟ್​ ಮಾಡಿರುವ ವಿಡಿಯೋ 10 ಲಕ್ಷಕ್ಕೂ ಅಧಿಕ ಲೈಕ್ಸ್​, 33 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವೀಡಿಯೊದಲ್ಲಿ, ರೀನಾ ಸಿಂಗ್ ಅವರ ಅತ್ಯಂತ ಕಠಿಣ ವ್ಯಾಯಾಮಗಳನ್ನು ನೋಡಬಹುದು. ಸ್ಕ್ವಾಟ್‌ಗಳನ್ನು ನಿರ್ವಹಿಸುವಾಗ ಅವರು ಜಿಗಿಯುವುದು ಮತ್ತು ಬೃಹತ್ ಟೈರ್ ಎತ್ತುವುದನ್ನು ಸಹ ಕಾಣಬಹುದು. ಎಲ್ಲರೂ ಜಿಮ್​ಗೆ ನಿಗದಿತ ಬಟ್ಟೆ ಧರಿಸುವಾಗ ಯಾವುದಕ್ಕೂ ಕಮ್ಮಿ ಇಲ್ಲ ಎಂದು ಸೀರೆಯಲ್ಲಿ ಮಾಡುವ ಈ ಕಸರತ್ತು ನೆಟ್ಟಿಗರ ಹೃದಯ ಗೆದ್ದಿದೆ.

For Latest News Updates, Join Our Whatsapp Community🚩
RELATED ARTICLES

Most Popular