HomeInternationalಬ್ರೆಡ್​ ಸ್ಯಾಂಡ್​ವಿಚ್​ ಮಾಡಿ ತಿನ್ನುವ ಪುಟ್ಟ ಬಾಲಕ: ಕ್ಯೂಟ್​ ವಿಡಿಯೋ ವೈರಲ್​

ಬ್ರೆಡ್​ ಸ್ಯಾಂಡ್​ವಿಚ್​ ಮಾಡಿ ತಿನ್ನುವ ಪುಟ್ಟ ಬಾಲಕ: ಕ್ಯೂಟ್​ ವಿಡಿಯೋ ವೈರಲ್​

ಈಗಿನ ಮಕ್ಕಳು ಅಡುಗೆ ಮನೆ ಕಡೆ ಬರುವುದೇ ಇಲ್ಲ ಎನ್ನುವ ಮಾತಿದೆ. ಆದರೆ ಇಲ್ಲೊಂದು ವಿಡಿಯೋ ನೋಡಿದರೆ ನೀವು ಖಂಡಿತವಾಗಿಯೂ ಹುಬ್ಬೇರಿಸುತ್ತೀರಾ. ಪುಟ್ಟ ಬಾಲಕನೊಬ್ಬ ತಿಂಡಿ ಮಾಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.

ಪುಟಾಣಿ ಬಾಣಸಿಗ ಸ್ಯಾಂಡ್‌ವಿಚ್ ಮಾಡುವ ವಿಡಿಯೋ ಇದೀಗ ವೈರಲ್​ ಆಗಿದ್ದು, ನೋಡುಗರನ್ನು ಖುಷಿಯಲ್ಲಿ ತೇಲಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವಿಡಿಯೋವನ್ನು ಫಿಗೆನ್ ಎನ್ನುವವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಪುಟಾಣಿ ಬಾಲಕನೊಬ್ಬ ಒಲೆ ಮುಂದೆ ಕುಳಿತುಕೊಂಡಿದ್ದಾನೆ. ರೋಸ್ಟ್ ಮಾಡಲು ತಟ್ಟೆಯಲ್ಲಿ ಬ್ರೆಡ್ ತುಂಡು ಹಾಕುತ್ತಾನೆ. ಅದನ್ನು ಫ್ರೈ ಮಾಡುತ್ತಾನೆ. ಇನ್ನೊಂದು ಕಡೆ ಮೊಟ್ಟೆ ಒಡೆದು ಹಾಕುತ್ತಾನೆ. ನಂತರ ಮೊಟ್ಟೆ ಆಮ್ಲೇಟ್​ ಆದ ಮೇಲೆ ಬ್ರೆಡ್​ ಎರಡು ಭಾಗ ಮಾಡಿ ಅದರೊಳಗೆ ಹಾಕಿ ತಿನ್ನುತ್ತಾನೆ.

ವೀಡಿಯೊ ಈಗಾಗಲೇ 223k ವೀಕ್ಷಣೆಗಳನ್ನು ಮತ್ತು ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ಮಗುವಿನ ಕೌಶಲಕ್ಕೆ ನೆಟ್ಟಿಗರು ತಲೆಬಾಗಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular