ಮುಂಬೈ: ಮುಂಬೈನಲ್ಲಿ ವ್ಯಕ್ತಿಯೊಬ್ಬ ಹೆಲ್ಮೆಟ್ ಇಲ್ಲದೇ 7 ಮಕ್ಕಳೊಂದಿಗೆ ಸ್ಕೂಟರ್ ಸವಾರಿ ಮಾಡಿದ ವಿಡಿಯೋ ವೈರಲ್ ಆಗಿದೆ.
ಮುಂಬೈ ಸೆಂಟ್ರಲ್ ಬ್ರಿಡ್ಜ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಲಾಗಿದೆ. ಜೂನ್ 20 ರಂದು ಟ್ವಿಟರ್ ಬಳಕೆದಾರರು ಪೋಸ್ಟ್ ಮಾಡಿದ್ದಾರೆ, ಆ ವ್ಯಕ್ತಿ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಐದು ದಿನಗಳ ನಂತರ, ಮುಂಬೈ ಟ್ರಾಫಿಕ್ ಪೊಲೀಸರು ವ್ಯಕ್ತಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಆತನ ವಿರುದ್ಧ ವಿವಿಧ ಸೆಕ್ಷನ್ ಗಳಡಿ ಕೇಸ್ ದಾಖಲಿಸಿದ್ದಾರೆ.
ಹೆಲ್ಮೆಟ್ ಇಲ್ಲದೇ 7 ಮಕ್ಕಳನ್ನು ಸ್ಕೂಟಿಯಲ್ಲಿ ಕರೆದೊಯ್ದು ತನ್ನ ಪ್ರಾಣಕ್ಕೆ ಮಾತ್ರವಲ್ಲದೇ, ಮಕ್ಕಳ ಪ್ರಾಣವನ್ನೂ ಅಪಾಯಕ್ಕೊಡ್ಡಿದ ವ್ಯಕ್ತಿ ವಿರುದ್ಧ ಕ್ರಮಕೈಗೊಳ್ಳಬೇಕೆಂದು ವಿಡಿಯೋ ಪೋಸ್ಟ್ ಮಾಡಿ ಬಳಕೆದಾರ ಒತ್ತಾಯಿಸಿದ್ದರು.
OMG look at this.without helmet he was driving, he was not risking his own life but small kids life was also under a threat .He was riding with seven children’s. After the Video has gone viral. Tardeo police of mumbai arrested the driver #mumbai #mumbaipolice #roadsaftey #road pic.twitter.com/RYYzTgneVS
— Preeti Sompura (@sompura_preeti) June 26, 2023


