
ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಸ್ಫೂರ್ತಿದಾಯಕ, ಶೈಕ್ಷಣಿಕ ಮತ್ತು ಮನರಂಜನೆಯಿಂದ ಹಿಡಿದು ತಮಾಷೆಯವರೆಗಿನ ವಿವಿಧ ವಿಡಿಯೋಗಳಿಂದ ತುಂಬಿಹೋಗಿದೆ. ಇವುಗಳ ಪೈಕಿ ಕೆಲವೊಂದು ವೈರಲ್ ಆಗುತ್ತವೆ. ಕೆಲವರು ವಿಭಿನ್ನ ರೀತಿಯ ಪೋಸ್ಟ್ಗಳನ್ನು ಮಾಡಿ ಜನರ ಗಮನ ಸೆಳೆಯಲು ಬಯಸುತ್ತಾರೆ. ಅಂಥದ್ದೇ ಒಂದು ಕುತೂಹಲದ ವಿಡಿಯೋ ಈಗ ವೈರಲ್ ಆಗಿದೆ.
ಇದು ಚಿಕ್ಕ ಹುಡುಗಿಯ ವಿಡಿಯೋ. ಸುಮಾರು 12-13 ವರ್ಷ ವಯಸ್ಸಿನ ಬಾಲಕಿಯೊಬ್ಬಳು ನೆಲದ ಮೇಲೆ ಇರಿಸಲಾದ ಪಟಾಕಿಗೆ ಬೆಂಕಿ ಹಚ್ಚಿ ತಕ್ಷಣವೇ ಲೋಹದ ಪಾತ್ರೆಯನ್ನು ಅದರ ಮೇಲೆ ಇರಿಸಿ ಓಡಿಹೋಗುವುದನ್ನು ವಿಡಿಯೋದಲ್ಲಿ ನೋಡಬಹುದು. ಕ್ಷಣಾರ್ಧದಲ್ಲಿ ಪಟಾಕಿ ಸ್ಫೋಟಿಸುತ್ತದೆ. ಪಾತ್ರೆಯು ಗಾಳಿಯಲ್ಲಿ ಎತ್ತರಕ್ಕೆ ಹಾರುತ್ತದೆ. ಮೇಲೆ ಹಾರಿರುವುದು ಕ್ಯಾಮೆರಾದ ಕಣ್ಣಿಗೆ ಕಾಣಿಸಿಲ್ಲ.
ಈ ಪಾತ್ರ ಓವರ್ಹೆಡ್ ಹೈ-ವೋಲ್ಟೇಜ್ ವಿದ್ಯುತ್ ಕೇಬಲ್ಗೆ ಸಿಲುಕಿಕೊಳ್ಳುತ್ತದೆ. ಇದು ನೋಡಲು ಕುತೂಹಲ ಎನಿಸಿದರೂ ಅಷ್ಟೇ ಡೇಂಜರ್ ಕೂಡ. ಆ ಕ್ಷಣಾರ್ಧದಲ್ಲಿ ಓಡಿಹೋಗದಿದ್ದರೆ ಅಪಾಯ ಸಂಭವಿಸುವ ಸಾಧ್ಯತೆ ಇದೆ, ಇಂಥ ಅಪಾಯಕಾರಿ ಆಟಗಳನ್ನು ಆಡಬೇಡಿ ಎಂದು ಹಲವರು ಕಮೆಂಟ್ ಮೂಲಕ ತಿಳಿಸಿದ್ದಾರೆ. ಇನ್ನು ಕೆಲವರು ಹೈ ವೋಲ್ಟೇಜ್ ವೈಯರ್ಗೆ ತಗುಲಿರುವುದು ಕೂಡ ಅಪಾಯಕಾರಿಯೆ. ಇಂಥ ಆಟಗಳನ್ನು ಬಯಲು ಪ್ರದೇಶಗಳಲ್ಲಿ ಆಡಿದರೆ ಉತ್ತಮ ಎಂದಿದ್ದಾರೆ. ಇನ್ನು ಕೆಲವರು ಹುಡುಗಿ ಆಟವನ್ನು ಮೆಚ್ಚಿಕೊಂಡಿದ್ದಾರೆ.
https://youtu.be/8ehOtswEf54

 
		 
		 
		 
		 Loading ...
 Loading ... 
		 
		 
		