HomeEntertainmentಚಿತ್ರಮಂದಿರದಲ್ಲಿ ಮಗಳ ಕಾಪಾಡಿದ ರಿಯಲ್ ಧುರಂಧರ್': ಕಿರುಕುಳ ನೀಡಿದ ಯುವಕನಿಗೆ ತಂದೆಯಿಂದ ಸಾರ್ವಜನಿಕ ಶಿಕ್ಷೆ

ಚಿತ್ರಮಂದಿರದಲ್ಲಿ ಮಗಳ ಕಾಪಾಡಿದ ರಿಯಲ್ ಧುರಂಧರ್’: ಕಿರುಕುಳ ನೀಡಿದ ಯುವಕನಿಗೆ ತಂದೆಯಿಂದ ಸಾರ್ವಜನಿಕ ಶಿಕ್ಷೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಮಗಳ ರಕ್ಷಣೆಗೆ ನಿಂತ ತಂದೆಯೊಬ್ಬರ ಸಾಹಸ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ‘ಧುರಂಧರ್ 2’ ಸಿನಿಮಾ ಪ್ರದರ್ಶನದ ವೇಳೆ ಯುವತಿಯೊಬ್ಬಳಿಗೆ ಕಿರುಕುಳ ನೀಡಿದ ಯುವಕನಿಗೆ ಸಾರ್ವಜನಿಕವಾಗಿ ಧರ್ಮದೇಟು ಬಿದ್ದಿದೆ. ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ತಂದೆಯೇ ‘ರಿಯಲ್ ಧುರಂಧರ್’ ಎಂದು ಶ್ಲಾಘಿಸುತ್ತಿದ್ದಾರೆ.

ಘಟನೆಯ ವಿವರ: ಕಾನ್ಪುರದ ರಾವತ್‌ಪುರ ಪ್ರದೇಶದ ಗುರುದೇವ್ ಪ್ಯಾಲೇಸ್ ಟಾಕೀಸ್‌ನಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಆರೋಪಿ ಯುವಕ ಯುವತಿಯ ಪಕ್ಕದ ಸೀಟಿನಲ್ಲೇ ಕುಳಿತಿದ್ದ ಎನ್ನಲಾಗಿದೆ. ಥಿಯೇಟರ್‌ನ ಕತ್ತಲೆಯನ್ನು ದುರುಪಯೋಗಪಡಿಸಿಕೊಂಡು ಆಕೆಗೂ ಅಸಭ್ಯವಾಗಿ ವರ್ತಿಸಲು ಪ್ರಯತ್ನಿಸಿದ್ದಾನೆ. ಯುವತಿ ತಕ್ಷಣವೇ ಪ್ರತಿರೋಧ ತೋರಿ ಜೋರಾಗಿ ಕಿರುಚಿಕೊಂಡಾಗ ಸುತ್ತಮುತ್ತಲಿದ್ದ ಪ್ರೇಕ್ಷಕರು ಎಚ್ಚೆತ್ತಿದ್ದಾರೆ.

ಸಾರ್ವಜನಿಕರಿಂದ ಗೂಸಾ, ಪೊಲೀಸರ ವಶಕ್ಕೆ ಆರೋಪಿ: ಯುವತಿಯ ಕಿರುಚಾಟ ಕೇಳಿ ಆಕ್ರೋಶಗೊಂಡ ಪ್ರೇಕ್ಷಕರು ಆರೋಪಿಯನ್ನು ಹಿಡಿದು ಸರಿಯಾಗಿ ಥಳಿಸಿದ್ದಾರೆ. ಇದರಿಂದ ಚಿತ್ರಮಂದಿರದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಚಿತ್ರಮಂದಿರದ ಹೊರಗೆ ಬಂದ ಯುವತಿಯ ತಂದೆ ಕೂಡ ಆರೋಪಿಗೆ ಕಪಾಳಮೋಕ್ಷ ಮಾಡಿ ಬುದ್ಧಿ ಕಲಿಸಿದ್ದಾರೆ. ನಂತರ ಸ್ಥಳೀಯ ಪೊಲೀಸರಿಗೆ ಆತನನ್ನು ಒಪ್ಪಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೊಲೀಸರ ಮುಂದಿನ ನಡೆ: ಘಟನೆಗೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಕಾನ್ಪುರ ನಗರ ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ಸದ್ಯ ತನಿಖೆ ನಡೆಯುತ್ತಿದ್ದು, ಸಂತ್ರಸ್ತ ಕುಟುಂಬದಿಂದ ಅಧಿಕೃತ ದೂರು ಬಂದ ತಕ್ಷಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಸಿಸಿಟಿವಿ ಮತ್ತು ಹೆಚ್ಚಿನ ಭದ್ರತೆಯ ಅಗತ್ಯವಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular