Shocking Video: ಪ್ರೀತಿಸುವಂತೆ ಪೀಡಿಸುತ್ತಿದ್ದ ಯುವಕ; ಬೇಸತ್ತು ಕತ್ತಿಯಿಂದ ಚುಚ್ಚಿಕೊಂಡ ವಿದ್ಯಾರ್ಥಿನಿ

ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ವಿದ್ಯಾರ್ಥಿನಿಯೊಬ್ಬಳು  ಚಮ್ಮಾರನ ಸೂಜಿಯಿಂದ ತನ್ನ ಕತ್ತಿಗೆ ಚುಚ್ಚಿಕೊಂಡಿದ್ದಾಳೆ. ವಿದ್ಯಾರ್ಥಿನಿ ಸ್ಥಿತಿ ಚಿಂತಾಜನಕವಾಗಿದೆ. ಆಕೆಯನ್ನು ಸಂಜಯ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದೆ. ವಿದ್ಯಾರ್ಥಿನಿ ಬದುಕುಳಿಯುವುದು ಕಷ್ಟ ಎಂದು ವೈದ್ಯರು ಹೇಳಿದ್ದಾರೆ.

ವಿದ್ಯಾರ್ಥಿನಿ ಈ ಕೃತ್ಯಕ್ಕೆ ಯುವಕನೊಬ್ಬ ಕಾರಣ ಎನ್ನಲಾಗ್ತಿದೆ. ವಿದ್ಯಾರ್ಥಿನಿಗೆ ಯಾರೋ ಕಿರುಕುಳ ನೀಡ್ತಿದ್ದರು. ಪ್ರತಿ ದಿನ ಹಿಂಬಾಲಿಸುತ್ತಿದ್ದರು. ಇದ್ರಿಂದ ಬೇಸತ್ತು ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎನ್ನಲಾಗಿದೆ. ಪೊಲೀಸರು ತನಿಖೆ ಶುರು ಮಾಡಿದ್ದು, ಘಟನೆಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ಸಿಧಿ ಜಿಲ್ಲೆಯ ಸೆಮಾರಿಯಾ ತೆಹಸಿಲ್‌ನ ಸರ್ಕಾರಿ ಶಾಲೆಯಲ್ಲಿ 9 ನೇ ತರಗತಿಯಲ್ಲಿ ವಿದ್ಯಾರ್ಥಿನಿ ಓದುತ್ತಿದ್ದಾಳೆ. ಮಾಹಿತಿಯ ಪ್ರಕಾರ, ಘಟನೆ ನಡೆದ ದಿನ ಕೂಡ ವಿದ್ಯಾರ್ಥಿನಿ ಕೆಲ ತರಗತಿಗಳಿಗೆ ಹಾಜರಾಗಿದ್ದಳು. ಊಟದ ನಂತರ ಶಾಲೆಯಿಂದ ಬಂದಿದ್ದಾಳೆ. ರಸ್ತೆಬದಿಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಘಟನೆ ಸೆರೆಯಾಗಿದೆ.

ಆಕೆ ಸ್ನೇಹಿತೆ ಆಕೆಯನ್ನು ತಡೆಯುವ ಪ್ರಯತ್ನ ನಡೆಸೋದನ್ನು ನೋಡಬಹುದು. ನಂತ್ರ ಮತ್ತೆರಡು ವಿದ್ಯಾರ್ಥಿನಿಯರು ಅಲ್ಲಿಗೆ ಬರ್ತಾರೆ. ಗಂಟಲಿಗೆ ಸೂಜಿ ಚುಚ್ಚಿಕೊಳ್ಳುವ ವಿದ್ಯಾರ್ಥಿನಿ ಪ್ರಜ್ಞೆತಪ್ಪಿ ಬೀಳ್ತಾಳೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸಿರಾಜ್‌ ಅಹ್ಮದ್‌ ಎಂಬಾತ ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

https://twitter.com/hindupost/status/1824860175154487768?ref_src=twsrc%5Etfw%7Ctwcamp%5Etweetembed%7Ctwterm%5E1824860175154487768%7Ctwgr%5E02cf1dddf9e3d35dcb634de340c2aab485375c9d%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fjagranenglish-epaper-dhdd5aef76aeaf417e84227eb376ebedeb%2Fmpshockerdisturbingvideoshowssidhischoolgirltormentedbystalkersharassmentstabbingherselfinpublic-newsid-n627043957

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read