HomeIndiaರಕ್ಷಕನನ್ನು ಗಟ್ಟಿಯಾಗಿ ಹಿಡಿದುಕೊಂಡ ಕೋತಿ ಮರಿ: ಕ್ಯೂಟ್​ ವಿಡಿಯೋ ವೈರಲ್​

ರಕ್ಷಕನನ್ನು ಗಟ್ಟಿಯಾಗಿ ಹಿಡಿದುಕೊಂಡ ಕೋತಿ ಮರಿ: ಕ್ಯೂಟ್​ ವಿಡಿಯೋ ವೈರಲ್​

ಕೋತಿ ಮತ್ತು ಮನುಷ್ಯರಿಗೆ ಅದೇನೋ ಅವಿನಾಭಾವ ಸಂಬಂಧ. ಮಂಗನಿಂದ ಮಾನವ ಎನ್ನುವ ಮಾತು ನಿಜವೇ ಎನ್ನುವಷ್ಟರ ಮಟ್ಟಿಗೆ ಕೆಲವೊಂದು ಘಟನೆಗಳು ನಡೆಯುತ್ತವೆ. ಅಂಥದ್ದೇ ಒಂದು ಕ್ಯೂಟ್​ ವಿಡಿಯೋ ಇದೀಗ ವೈರಲ್​ ಆಗಿದೆ.

ಮರದಿಂದ ಕೆಳಕ್ಕೆ ಬಿದ್ದ ಮರಿಯೊಂದನ್ನು ದಾರಿಹೋಕ ರಕ್ಷಿಸಿದ ಬಳಿಕ ಈ ವಿಡಿಯೋ ಮಾಡಲಾಗಿದೆ. ಮರಿಯನ್ನು ರಕ್ಷಿಸಿದಾತ ಅದನ್ನು ಮರದ ಮೇಲೆ ಬಿಡಲು ನೋಡುತ್ತಾನೆ. ಆದರೆ ಮರಿ ರಕ್ಷಕನನ್ನು ಬಿಟ್ಟು ಹೋಗುವ ಮನಸ್ಸು ಮಾಡುವುದಿಲ್ಲ. ಚಿಕ್ಕ ಮಕ್ಕಳು ಅಪ್ಪನ ಮೈಮೇಲೆ ಇದ್ದಾಗ ಬೇರೆ ಕಡೆ ಹೋಗಲು ಹೇಗೆ ಮಾಡುತ್ತಾರೋ ಹಾಗೇ ಈ ಕೋತಿಮರಿಯೂ ಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಂತರ ರಕ್ಷಕ ಅದನ್ನು ಕಷ್ಟಪಟ್ಟು ಮರದ ಮೇಲೆ ಇಡುತ್ತಾನೆ. ಮರವೇರಿದ ಬಳಿಕ ಅದು ಸರಸರನೆ ಮರದ ತುದಿಗೆ ಹೋಗುತ್ತದೆ. ಈ ಕ್ಯೂಟ್​ ವಿಡಿಯೋ ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ಈ ವೀಡಿಯೊವನ್ನು ನಾಗಾ ಹಿಲ್ಸ್‌ನ ಟ್ವಿಟರ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ, ಇದು ನಾಗಾಲ್ಯಾಂಡ್‌ನ ಖೋನೋಮಾ ಗ್ರಾಮದ ಅರಣ್ಯದಲ್ಲಿ ಘಟನೆ ನಡೆದಿದೆ ಎಂದು ಟ್ವಿಟರ್​ನಲ್ಲಿ ಹೇಳಲಾಗಿದೆ.

https://twitter.com/mhonshann/status/1635492281104089090?ref_src=twsrc%5Etfw%7Ctwcamp%5Etweetembed%7Ctwt

For Latest News Updates, Join Our Whatsapp Community🚩
RELATED ARTICLES

Most Popular