HomeLatest Newsಮಣಿರತ್ನಂ ಸಿನಿಮಾದಲ್ಲಿ ವಿಜಯ್ ಸೇತುಪತಿಗೆ ಕ್ಲೀನ್ ಶೇವ್ ಲುಕ್: ವೈರಲ್ ಆದ ಅಭಿನೇತ್ರಿ ಸಾಯಿ ಪಲ್ಲವಿ...

ಮಣಿರತ್ನಂ ಸಿನಿಮಾದಲ್ಲಿ ವಿಜಯ್ ಸೇತುಪತಿಗೆ ಕ್ಲೀನ್ ಶೇವ್ ಲುಕ್: ವೈರಲ್ ಆದ ಅಭಿನೇತ್ರಿ ಸಾಯಿ ಪಲ್ಲವಿ ಜೊತೆಗಿನ ಶೂಟಿಂಗ್ ಜಲಕ್!

ದಿಗ್ಗಜ ನಿರ್ದೇಶಕ ಮಣಿರತ್ನಂ ಅವರ ಮುಂಬರುವ ನೂತನ ಸಿನಿಮಾದ ಚಿತ್ರೀಕರಣ ಸದ್ಯ ಕೋಲ್ಕತ್ತಾದಲ್ಲಿ ಭರದಿಂದ ಸಾಗುತ್ತಿದೆ. ಭಾನುವಾರ ಈ ಸಿನಿಮಾದ ಶೂಟಿಂಗ್ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹಲ್ ಚಲ್ ಎಬ್ಬಿಸಿದ್ದು, ಕೋಲ್ಕತ್ತಾದ ಐತಿಹಾಸಿಕ ಹೌರಾ ಸೇತುವೆ ಮೇಲೆ ನಟ ವಿಜಯ್ ಸೇತುಪತಿ ಹಾಗೂ ನಟಿ ಸಾಯಿ ಪಲ್ಲವಿ ಜೊತೆಯಾಗಿ ಭಾಗವಹಿಸಿದ್ದ ದೃಶ್ಯಗಳು ವೈರಲ್ ಆಗಿವೆ.

ವೈರಲ್ ಆಗಿರುವ ಚಿತ್ರಗಳಲ್ಲಿ ವಿಜಯ್ ಸೇತುಪತಿ ಕ್ಲೀನ್ ಶೇವ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರೆ, ಸಾಯಿ ಪಲ್ಲವಿ ಸರಳ ಉಡುಪಿನಲ್ಲಿ ಮಿಂಚಿದ್ದಾರೆ. ನಿರ್ದೇಶಕ ಮಣಿರತ್ನಂ ಅವರು ದೃಶ್ಯದ ಬಗ್ಗೆ ವಿವರಣೆ ನೀಡುತ್ತಿರುವಾಗ ಇಬ್ಬರೂ ನಗುತ್ತಾ ಮಾತುಕತೆ ನಡೆಸುತ್ತಿರುವುದು ಹಾಗೂ ಸೇತುವೆ ಮೇಲೆ ಪರಸ್ಪರ ಕೈ ಹಿಡಿದು ನಡೆಯುತ್ತಿರುವ ದೃಶ್ಯಗಳು ಅಭಿಮಾನಿಗಳ ಗಮನ ಸೆಳೆದಿವೆ. ತಾತ್ಕಾಲಿಕವಾಗಿ ‘ಪ್ರೊಡಕ್ಷನ್ ನಂಬರ್ 23’ ಎಂದು ಹೆಸರಿಡಲಾಗಿರುವ ಈ ಚಿತ್ರದ ಮೂಲಕ ಸಾಯಿ ಪಲ್ಲವಿ ಮೊದಲ ಬಾರಿಗೆ ಮಣಿರತ್ನಂ ನಿರ್ದೇಶನದಲ್ಲಿ ನಟಿಸುತ್ತಿದ್ದಾರೆ.

ಈ ಹಿಂದೆ ಮಣಿರತ್ನಂ ಜೊತೆ ‘ಚೆಕ್ಕ ಚಿವಂತ ವಾನಮ್’ ಚಿತ್ರದಲ್ಲಿ ಕೆಲಸ ಮಾಡಿದ್ದ ವಿಜಯ್ ಸೇತುಪತಿಗೆ ಇದು ಎರಡನೇ ಸಿನಿಮಾವಾಗಿದೆ. ಇನ್ನು ಈ ಬಿಗ್ ಪ್ರಾಜೆಕ್ಟ್‌ಗೆ ಎಆರ್ ರೆಹಮಾನ್ ಸಂಗೀತ ಸಂಯೋಜಿಸುತ್ತಿದ್ದು, ಸೋನಿ ಮ್ಯೂಸಿಕ್ ಸೌತ್ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ. ಮಣಿರತ್ನಂ ಮತ್ತು ರೆಹಮಾನ್ ಕಾಂಬಿನೇಷನ್ ಮತ್ತೆ ಒಂದಾಗಿರುವುದರಿಂದ ಪ್ರೇಕ್ಷಕರಲ್ಲಿ ಹಾಡುಗಳ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇತ್ತೀಚೆಗೆ ‘ತಾಂಡೇಲ್’ ಚಿತ್ರದಲ್ಲಿ ನಟಿಸಿದ್ದ ಸಾಯಿ ಪಲ್ಲವಿ, ಪ್ರಸ್ತುತ ಬಹುನಿರೀಕ್ಷಿತ ‘ರಾಮಾಯಣ’ ಸರಣಿ ಚಿತ್ರಗಳಲ್ಲಿಯೂ ಸೀತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನೊಂದೆಡೆ ‘ಗಾಂಧಿ ಟಾಕ್ಸ್’ ಬಳಿಕ ವಿಜಯ್ ಸೇತುಪತಿ ಕೈಯಲ್ಲೂ ಹಲವು ಕುತೂಹಲಕಾರಿ ಸಿನಿಮಾಗಳಿವೆ. ಮಣಿರತ್ನಂ ಅವರ ಕಳೆದ ಸಿನಿಮಾ ‘ಥಗ್ ಲೈಫ್’ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣದಿದ್ದರೂ, ಹೊಸ ತಾರಾಗಣದೊಂದಿಗೆ ಮೂಡಿಬರುತ್ತಿರುವ ಈ ನೂತನ ಪ್ರೇಮಕಥೆಯ ಮೇಲೆ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿದೆ.

What are you cooking #ManiRatnam ? pic.twitter.com/fWLc5rQtV9

— Freudenfreude Mazhai Kuruvi (@AthamleVargeesu) July 26, 2026

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular