HomeIndiaಹುಚ್ಚು ಸಾಹಸ ಮಾಡಲು ಹೋಗಿ ಅಪಾಯ ತಂದುಕೊಂಡ ಯುವತಿ

ಹುಚ್ಚು ಸಾಹಸ ಮಾಡಲು ಹೋಗಿ ಅಪಾಯ ತಂದುಕೊಂಡ ಯುವತಿ

ಎರಡು ಕುರ್ಚಿಗಳ ಮೇಲೆ ಸರ್ಕಸ್​ ಮಾಡಿ ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್​ ಮಾಡಲು ಹೋದ ಹುಡುಗಿಯೊಬ್ಬಳಿಗೆ ಅಪಾಯ ಆಗಿರುವ ಭಯಾನಕ ಘಟನೆಯ ವಿಡಿಯೋ ವೈರಲ್​ ಆಗಿದೆ.

ಹುಡುಗಿ ಮೊದಲ ಕುರ್ಚಿಯನ್ನು ಏರುತ್ತಾಳೆ ಮತ್ತು ಕುರ್ಚಿಯ ಹಿಂಭಾಗದ ಮೇಲ್ಭಾಗದಲ್ಲಿ ತನ್ನ ಪಾದವನ್ನು ಹಾಕುತ್ತಾಳೆ. ಅವಳು ಮೊದಲು ಸಮತೋಲನದಲ್ಲಿಯೇ ಇರುತ್ತಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬ್ಯಾಲೆನ್ಸ್​ ಮಾಡುತ್ತಾ ಮುಂದಿನ ಕುರ್ಚಿಯ ಆಸನದ ಮೇಲೆ ಇಳಿಯುತ್ತಾಳೆ. ಇದು ಎಲ್ಲಾ ಚೆನ್ನಾಗಿಯೇ ಕಾಣುತ್ತದೆ. ಈಗ ಆಕೆಯ ಸರ್ಕಸ್​ ಮುಂದುವರೆಯುತ್ತದೆ. ಎರಡನೇ ಕುರ್ಚಿಯಿಂದ ನೆಲದ ಮೇಲೆ ಪರಿಪೂರ್ಣವಾದ ಲ್ಯಾಂಡಿಂಗ್ ಮಾಡಲು ಹೋಗುತ್ತಾಳೆ.

ಎಡವಟ್ಟು ಆಗುವುದು ಅಲ್ಲಿಯೇ. ಆಕೆ ಸಮತೋಲನ ಕಳೆದುಕೊಂಡು ಕುರ್ಚಿಯ ಹಿಂಭಾಗದಿಂದ ಜಾರಿ ಬೀಳುತ್ತಾಳೆ. ಅಲ್ಲಿರುವ ಪೀಠೋಪಕರಣಗಳ ಮೇಲೆ ಬೀಳುತ್ತಾಳೆ. ಇದರ ವಿಡಿಯೋ ವೈರಲ್​ ಆಗಿದ್ದು, ಹುಚ್ಚುಹುಚ್ಚಾಗಿ ಸಾಹಸ ಮಾಡಲು ಹೋಗಿ ಜೀವ ಕಳೆದುಕೊಳ್ಳಬೇಡಿ ಎಂದು ಹಲವು ಬಳಕೆದಾರರು ಹೇಳಿದ್ದಾರೆ.

https://youtu.be/SKrnenZdwcE

For Latest News Updates, Join Our Whatsapp Community🚩
RELATED ARTICLES

Most Popular