ಖ್ಯಾತ ಬಾಣಸಿಗ ಸಂಜೀವ್ ಕಪೂರ್ ಅಡುಗೆ ಮಾಡುವುದರಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಆದರೆ ಇವರಿಗೇ ಕೆಟ್ಟ ಅಡುಗೆಯ ರುಚಿ ವಿಮಾನದಲ್ಲಿ ಆಗಿದ್ದು ಅದರ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್ಮಾಡಿಕೊಂಡಿದ್ದಾರೆ.
ಏರ್ ಇಂಡಿಯಾ ವಿಮಾನದಲ್ಲಿ ನೀಡಿದ ಆಹಾರದ ಕುರಿತು ಅವರು ಅಸಮಾಧಾನ ಹೊರಹಾಕಿದ್ದಾರೆ. ಏರ್ ಇಂಡಿಯಾ ಸರ್ವ್ ಮಾಡಿದ ಆಹಾರದ ಫೋಟೋವನ್ನು ಸಂಜೀವ್ ಕಪೂರ್ ಹಂಚಿಕೊಂಡಿದ್ದಾರೆ. ನಾಗ್ಪುರ -ಮುಂಬೈ 0740 ವಿಮಾನದಲ್ಲಿ ಹೋಗುವಾಗ ಆಗಿರುವ ಅನುಭವವನ್ನು ಶೇರ್ ಮಾಡಿಕೊಂಡಿದ್ದಾರೆ.
ಕಲ್ಲಂಗಡಿ, ಸೌತೆಕಾಯಿ, ಟೊಮೇಟೊ ಮತ್ತು ತಣ್ಣಗಾದ ಚಿಕನ್ ಟಿಕ್ಕಾ ಕೊಡಲಾಗಿದೆ. ಮೇಯೊ ಜೊತೆ ಎಲೆಕೋಸಿನ ಸಣ್ಣ ತುಂಡುಗಳನ್ನು ತುಂಬಿದ ಸ್ಯಾಂಡ್ವಿಚ್ ನೀಡಲಾಗಿದೆ. ಸ್ಪಂಜಿನ ಬಣ್ಣದ ಸ್ವೀಟ್ ಕ್ರೀಮ್ ಮತ್ತು ಹಳದಿ ಗೇಜ್ ಶುಗರ್ ಸಿರಪ್ ನೀಡಲಾಗಿದೆ. ಇದನ್ನು ಸಾಮಾನ್ಯವಾಗಿ ಜನರು ತಿನ್ನುತ್ತಾರೆಯೇ ಎನ್ನುವುದು ಅವರ ಪ್ರಶ್ನೆ. ‘ಏರ್ ಇಂಡಿಯಾವನ್ನು ಎಚ್ಚರಗೊಳಿಸಿ’ ಎಂದಿದ್ದಾರೆ. ಈ ಟ್ವೀಟ್ ನೋಡಿದ ಏರ್ ಇಂಡಿಯಾ ಕ್ಷಮೆ ಕೋರಿದೆ.
Wake Up @airindiain.
Nagpur-Mumbai 0740 flight.
Cold Chicken Tikka with watermelon, cucumber, tomato & sev
Sandwich with minuscule filling of chopped cabbage with mayo
Sugar syrup Sponge painted with sweetened cream & yellow glaze. pic.twitter.com/2RZIWY9lhO
— Sanjeev Kapoor (@SanjeevKapoor) February 27, 2023
Really !!! Is this what Indians should eat for breakfast??
@airindiain— Sanjeev Kapoor (@SanjeevKapoor) February 27, 2023

