HomeLatest NewsBIG NEWS: ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮ್ ಸಿಂಘೆ ಅರೆಸ್ಟ್

BIG NEWS: ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮ್ ಸಿಂಘೆ ಅರೆಸ್ಟ್

ಕೊಲಂಬೊ: ಸರ್ಕಾರದ ಹಣ ದುರುಪಯೋಗ ಆರೋಪದಲ್ಲಿ ಶ್ರೀಲಂಕಾ ಮಾಜಿ ಅಧ್ಯಕ್ಷ ರಾನಿಲ್ ವಿಕ್ರಮ್ ಸಿಂಘೆ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.

2023ರಲ್ಲಿ ವಿಕ್ರಮ್ ಸಿಂಘೆ ಇಂಗ್ಲೆಂಡ್ ಗೆ ಪ್ರಯಾಣಿಸಲು ಸಾರ್ವಜನಿಕ ನಿಧಿ ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಂಗ್ಲೆಂಡ್ ಗೆ ಪ್ರಯಾಣಿಸಲು ಸಾರ್ವಜನಿಕರಿಗೆ ಮೀಸಲಿಟ್ಟ ಸರ್ಕಾರದ ಹಣ ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳಿ ವಿಕ್ರಮ್ ಸಿಂಘೆ ಅವರನ್ನು ಬಂಧಿಸಿದ್ದಾರೆ. ವಿಕ್ರಮ್ ಸಿಂಘೆ 2022ರ ಜುಲೈ ನಿಂದ 2024ರ ಸೆಪ್ಟೆಂಬರ್ ವರೆಗೆ ಶ್ರೀಲಂಕಾ ಅಧ್ಯಕ್ಷರಾಗಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular