HomeIndiaBIG NEWS: ತಮಿಳುನಾಡಿನಲ್ಲಿ ಚರಿತ್ರೆ ಸೃಷ್ಟಿಸಿದ ದಳಪತಿ ವಿಜಯ್: ದ್ರಾವಿಡರ ನಾಡಿನಲ್ಲಿ ಟಿವಿಕೆ ಪಕ್ಷದ ಗೆಲುವಿಗೆ...

BIG NEWS: ತಮಿಳುನಾಡಿನಲ್ಲಿ ಚರಿತ್ರೆ ಸೃಷ್ಟಿಸಿದ ದಳಪತಿ ವಿಜಯ್: ದ್ರಾವಿಡರ ನಾಡಿನಲ್ಲಿ ಟಿವಿಕೆ ಪಕ್ಷದ ಗೆಲುವಿಗೆ ಕಾರಣವಾದ ಅಂಶಗಳೇನು?

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಹೊಸ ಚರಿತ್ರೆ ಸೃಷ್ಟಿಸಿದೆ. ಯುವ ನಾಯಕನ ಹೊಸ ರಾಜಕೀಯ ಪಕ್ಷದ ಲೆಕ್ಕಾಚಾರಕ್ಕೆ ಹಳೆ ಪಕ್ಷಗಳ ಲೆಕ್ಕಚಾರಗಳು ತಲೆಕೆಳಗಾಗಿವೆ. ವಿಧಾನಸಭಾ ಚುನಾವಣೆಗೂ ಕೆಲವೇ ಸಮಯಗಳ ಮೊದಲು ನೂತನ ಪಕ್ಷ ಸ್ಥಾಪಿಸಿ ರಾಜಕೀಯ ರಂಗಕ್ಕೆ ಧುಮುಕಿದ್ದ ನಟ ವಿಜಯ್, ಚಿತ್ರರಂಗದಲ್ಲಿ ಮಾತ್ರವಲ್ಲ, ಇಡೀ ತಮಿಳು ಮಕ್ಕಳ ಹೃದಯ ಗೆದ್ದಿದ್ದಾರೆ.

ನೂತನ ಪಕ್ಷ ಟಿವಿಕೆಯ ಅಬ್ಬರದ ಅಲೆಗೆ ಆಡಳಿತಾರೂಢ ಡಿಎಂಕೆ, ಎಐಎಡಿಎಂಕೆ ಪಕ್ಷಗಳು ಧೂಳಿಪಟವಾಗಿವೆ. ಸ್ವತಃ ಸಿಎಂ ಎಂ.ಕೆ.ಸ್ಟಾಲಿನ್ ತಮ್ಮದೇ ಕ್ಷೇತ್ರ ಕೊಳತ್ತೂರಿನಲ್ಲಿ ಟಿವಿಕೆ ಎದುರು ಮಂಡಿಯೂರಿದ್ದು, ಸೋಲನುಭವಿಸಿದ್ದಾರೆ. ಹೊಸ ಪಕ್ಷದ ಮೂಲಕ ರಾಜಕೀಯ ರಂಗಕ್ಕೆ ಧುಮುಕಿ ಮೊದಲ ಪ್ರಯತ್ನದಲ್ಲಿಯೇ ತಮಿಳುನಾಡಿನಲ್ಲಿ ವಿಜಯ ಪತಾಕೆ ಹಾರಿಸಿರುವ ದಳಪತಿ ವಿಜಯ್ ಅವರ ಅಚ್ಚರಿ ಗೆಲುವಿಗೆ ಕಾರಣವಾದ ಅಂಶಗಳಾದರೂ ಏನು? ಈ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಳಪತಿ ವಿಜಯ್ ತಾವು ರಾಜಕೀಯ ಕ್ಷೇತ್ರಕ್ಕೆ ಬರಲು ಹತ್ತು ವರ್ಷಗಳಿಂದ ಸಿದ್ಧತೆ ನಡೆಸಿದ್ದರು. ಅಲ್ಲದೇ ಹೊಸ ಪಕ್ಷದೊಂದಿಗೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆಗೆ ಇಳಿಯುವುದಾಗಿ ಘೋಷಿಸುತ್ತಿದ್ದಂತೆಯೇ ತಮಿಳುನಾಡಿನ ಯುವ ಜನತೆಯ ಮನಸ್ಸು ಗೆಲ್ಲುವಂತೆ ಹೊಸ ಭರವಸೆಗಳನ್ನು ನೀಡಿದ್ದರು. ಐಟಿ ಉದ್ಯೋಗಿಗಳನ್ನು, ವಿದ್ಯಾರ್ಥಿಗಳನ್ನು, ಮಹಿಳೆಯರು, ರೈತರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಪ್ರಮುಖವಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ವಿಜಯ್ ಅವರ ಟಿವಿಕೆ ಪಕ್ಷ ಘೋಷಿಸಿದ್ದ ಹಲವಾರು ಭರವಸೆಗಳು ಗೆಲುವಿಗೆ ಪ್ರಮುಖ ಕಾರಣವಗಿದೆ.

ಟಿವಿಕೆ ಪ್ರಣಾಳಿಕೆಯಲ್ಲಿನ ಪ್ರಮುಖ ಅಂಶಗಳು:

  • ಮನೆಯ ಯಜಮಾನಿಗೆಗೆ ತಿಂಗಳಿಗೆ 2,500 ರೂ ಸಹಾಯಧನ
  • ಅನ್ನಪೂರ್ಣಿ ಸೂಪರ್ ಸಿಕ್ಸ್ ಸ್ಕೀಮ್ ಮೂಲಕ ಪ್ರತೀ ಕುಟುಂಬಕ್ಕೆ ವರ್ಷಕ್ಕೆ 6 ಉಚಿತ ಎಲ್​ಪಿಜಿ ಸಿಲಿಂಡರ್
  • ವಾರ್ಷಿಕ 5 ಲಕ್ಷ ರೂಗಿಂತ ಕಡಿಮೆ ಆದಾಯವಿರುವ ಕುಟುಂಬದ ಹೆಣ್ಣುಮಗಳ ಮದುವೆಗೆ 8 ಗ್ರಾಂ ಚಿನ್ನ ಮತ್ತು ರೇಷ್ಮೆ ಸೀರೆ
  • ಮಹಿಳಾ ಸ್ವಸಹಾಯ ಸಂಘಗಳಿಗೆ 5 ಲಕ್ಷ ರೂವರೆಗೆ ಬಡ್ಡಿರಹಿತ ಸಾಲ.
  • ವೆಟ್ರಿ ಪ್ರಯಾಣಂ ಸ್ಕೀಮ್ ಮೂಲಕ ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ.
  • ಕಾಮರಾಜರ್ ಕಲಿವಿ ಉರುದಿ ತಿಟ್ಟಂ ಸ್ಕೀಮ್ ಮೂಲಕ ಮಕ್ಕಳಿಗೆ ಶಿಕ್ಷಣ ಮುಂದುವರಿಸಲು ನೆರವಾಗಲು ಪೋಷಕರಿಗೆ ವರ್ಷಕ್ಕೆ 15,000 ರೂ ಸಹಾಯಧನ.
  • ಪ್ರತೀ ನವಜಾತ ಶಿಶುವಿಗೆ ಚಿನ್ನದ ಉಂಗುರ ಮತ್ತು ವೆಲ್ಕಮ್ ಕಿಟ್.
  • ರೇಷನ್ ಅಂಗಡಿಗಳು, ಶಾಲೆ ಮತ್ತು ಕಾಲೇಜುಗಳಲ್ಲಿ ಉಚಿತ ಸ್ಯಾನಿಟರಿ ಪ್ಯಾಡ್ ವಿತರಣೆಯ ವ್ಯವಸ್ಥೆ.
  • ಪ್ರತೀ ಮನೆಗೆ 200 ಯುನಿಟ್​ಗಳಷ್ಟು ಉಚಿತ ವಿದ್ಯುತ್
  • ಎಲ್ಲಾ ಮನೆಗಳಿಗೂ ಉಚಿತ ಕುಡಿಯುವ ನೀರಿನ ಸಂಪರ್ಕ.
  • ಕೃಷಿ ಮತ್ತು ರೈತರಿಗೆ ಬೆಂಬಲ
  • ಕೃಷಿ ಸಹಕಾರಿ ಬೆಳೆ ಸಾಲಗಳು ಶೇ. 50ರಷ್ಟು ಮನ್ನಾ
  • ಹೆಚ್ಚಿನ ಕನಿಷ್ಠ ಬೆಂಬಲ ಬೆಲೆ, ಬೆಳೆ ವಿಮೆ ಮತ್ತು ಕೃಷಿ ಬೆಂಬಲ.
  • ಯುವಜನರು, ವಿದ್ಯಾರ್ಥಿಗಳಿಗೆ ನೆರವು
  • ನಿರುದ್ಯೋಗಿಗಳಿಗೆ ಧನಸಹಾಯ ನೀಡಲಾಗುತ್ತದೆ. ಪದವೀಧರರಿಗೆ ತಿಂಗಳಿಗೆ 4,000 ರೂ, ಹಾಗು ಡಿಪ್ಲೊಮಾ ಆದವರಿಗೆ ತಿಂಗಳಿಗೆ 2,000-2,500 ರೂ ನೆರವು.
  • 5 ಲಕ್ಷ ಯುವಕರಿಗೆ ಸ್ಟೈಪೆಂಡ್ ಜೊತೆಗೆ ಇಂಟರ್ನ್​ಶಿಪ್.
  • 5 ಲಕ್ಷ ಹೊಸ ಸರ್ಕಾರಿ ನೌಕರಿಗಳು
  • 20 ಲಕ್ಷ ರೂವರೆಗೆ ಅಡಮಾನರಹಿತ ಶಿಕ್ಷಣ ಸಾಲ
  • ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತವಾದ ಎಐ ಶಕ್ತ ಕೋಚಿಂಗ್ ಸೌಲಭ್ಯ
  • ನೂರು ಕಾಮರಾಜರ್ ಶಾಲೆಗಳು
  • ವೃದ್ಧರಿಗೆ ಮತ್ತು ವಿಶೇಷ ಚೇತನರಿಗೆ ಮಾಸಿಕ 3,000 ರೂ ಪಿಂಚಣಿ
  • ಪ್ರತೀ ಕುಟುಂಬಕ್ಕೆ 25 ಲಕ್ಷ ರೂ ಹೆಲ್ತ್ ಇನ್ಷೂರೆನ್ಸ್ ಪಾಲಿಸಿ. ಆಧುನಿಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸೌಲಭ್ಯ, ಉಚಿತ ಆರೋಗ್ಯ ತಪಾಸಣೆ ಇತ್ಯಾದಿ ಸೌಲಭ್ಯ.
  • ತಮಿಳುನಾಡನ್ನು ಮಾದಕವಸ್ತು ಮುಕ್ತ ಮಾಡಲು ವಿವಿಧ ಕ್ರಮಗಳು
  • ಮೀನುಗಾರಿಕೆ ಕಡಿಮೆ ಇರುವ ಸೀಸನ್​ನಲ್ಲಿ ಮೀನುಗಾರರಿಗೆ 27,000 ರೂ ಸಹಾಯಧನ
  • ಮೀನುಗಾರಿಕೆ ದೋಣಿಗೆ ಬಳಸುವ ಡೀಸಲ್​ಗೆ ಸಬ್ಸಿಡಿ, 25 ಲಕ್ಷ ರೂ ಅಪಘಾತ ವಿಮೆ
  • ಮೀನುಗಾರರಿಗೆ ಖಾಯಂ ವಸತಿ

ತಮಿಳುನಾಡಿನಲ್ಲಿ ವಿದ್ಯಾರ್ಥಿಗಳು, ಯುವಜನತೆ, ರೈತರು, ಮಹಿಳೆಯರು, ಉದ್ಯೋಗಿಗಳು ಹೀಗೆ ಎಲ್ಲರ ಮನಸ್ಸನ್ನು ಗೆಲ್ಲುವ ಯತ್ನದೊಂದಿಗೆ ಘೋಷಿಸಿದ್ದ ಚುನಾವಣಾ ಪ್ರಣಾಳಿಕೆ ವಿಜಯ್ ಗೆಲುವುಗೆ ಪ್ರಮುಖ ಕಾರಣವಾಗಿದೆ. ಅಲ್ಲದೇ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ, ಅಭಿಮಾನಿಗಳು ಪಕ್ಷದ ಕಾರ್ಯಕರ್ತರಾಗಿ ಶ್ರಮಿಸಿದ್ದು, ದಶಕಗಳಿಂದಲೀ ಎಐಎಡಿಎಂಕೆ, ಡಿಎಂಕೆ ಪಕ್ಷಗಳ ನಡುವೆಯೇ ಅಧಿಕಾರ ಹಂಚಿಕೆಯಿಂದ ಬೇಸತ್ತಿದ್ದ ತಮಿಳುನಾಡಿನ ಜನರು ಬದಲಾವಣೆ ಬಯಸಿದ್ದು ಇದೇ ಸಂದರ್ಭದಲ್ಲಿ ನಟ ವಿಜಯ್ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದು ದಳಪತಿ ವಿಜಯ್ ಗೆಲುವಿನ ಬಾವುಟ ಹಾರಿಸಲು ಸಾಧ್ಯವಾಗಿದೆ ಎಂದು ಹೇಳಲಾಗುತ್ತಿದೆ ತಮಿಳುನಾಡಿನಲ್ಲಿ ಡಿಎಂಕೆ 68 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಟಿವಿಕೆ 105 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಎಐಎಡಿಎಂಕೆ 59 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular