HomeLive NewsBREAKING: ಹಾಡಹಗಲೇ ಕಂಟ್ರಿ ಪಿಸ್ತೂಲ್ ತೋರಿಸಿ ಚಿನ್ನದಂಗಡಿ ದರೋಡೆ: ಓರ್ವನ ಕಾಲಿಗೆ ಗುಂಡೇಟು ಹೊಡೆದು ಕಳ್ಳರ...

BREAKING: ಹಾಡಹಗಲೇ ಕಂಟ್ರಿ ಪಿಸ್ತೂಲ್ ತೋರಿಸಿ ಚಿನ್ನದಂಗಡಿ ದರೋಡೆ: ಓರ್ವನ ಕಾಲಿಗೆ ಗುಂಡೇಟು ಹೊಡೆದು ಕಳ್ಳರ ಗ್ಯಾಂಗ್ ಎಸ್ಕೇಪ್

ವಿಜಯಪುರ: ಹಾಡಹಗಲೇ ಮೈಸೂರಿನ ಹುಣಸೂರಿನಲ್ಲಿ ಚಿನ್ನದಂಗಡಿ ದರೋಡೆ ಮಾಡಿದ್ದ ಪ್ರಕರಣ ಮಾಸುವ ಮುನ್ನವೇ ಇದೀಗ ಅಂತದ್ದೇ ಮತ್ತೊಂದು ಘಟನೆ ವಿಜಯಪುರದಲ್ಲಿ ನಡೆದಿದೆ. ಹಾಡಹಗಲೇ ಚಿನ್ನದಂಗಡಿಗೆ ನುಗ್ಗಿದ ದರೋಡೆಕೋರರ ಗ್ಯಾಂಗ್ ಕಂಟ್ರಿ ಪಿಸ್ತೂಲ್ ತೋರಿಸಿ, ಗಾಳಿಯಲ್ಲಿ ಗುಂಡು ಹಾರಿಸಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ಮಹಾರುದ್ರ ಕಂಚಗಾರ ಎಂಬುವವರ ಚಿನ್ನದಂಗಡಿಯಲ್ಲಿ ಈ ಘಟನೆ ನಡೆದಿದೆ. ಇಂದು ಮಧ್ಯಾಹ್ನ ಚಿನ್ನದಂಗಡಿಗೆ ಹೆಲ್ಮೆಟ್ ಧರಿಸಿ ಬಂದಿರುವ ಇಬ್ಬರು ದರೋಡೆಕೋರರು ಏಕಾಏಕಿ ಪಿಸ್ತೂಲ್ ತೆಗೆದು, ಚಿನ್ನದಂಗಡಿಗೆ ಬಂದಿದ್ದ ವೃದ್ಧೆಯನ್ನು ಬೆದರಿಸಿದ್ದಾರೆ. ಇದೇ ವೇಳೆ ಎರಡು ಸುತ್ತಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಚಿನ್ನದಂಗಡಿಯಲ್ಲಿದ್ದ ಓರ್ವ ಯುವಕನ ಕಾಲಿಗೆ ಗುಂಡೇಟು ತಗುಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಕ್ಷಣ ಚಿನ್ನದಂಗಡಿಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿ ಕಳ್ಳರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಹಲಸಂಗಿಯಿಂದ ಮಹಾರಾಷ್ಟ್ರದತ್ತ ದರೋಡೆಕೋರರು ಸಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ದರೋಡೆಕೋರರು ಹಾರಿಸಿದ ಗುಂಡು ಆತ್ಮಲಿಂಗ ಎಂಬಾತನ ಕಾಲಿಗೆ ತಗುಲಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಡಿವೈ ಎಸ್ ಪಿ ಕಟ್ಟಿಮನಿ, ಇನ್ಸ್ ಪೆಕ್ಟರ್ ಪರಶುರಾಮ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದರೋಡೆಕೊರರ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular