HomeKarnatakaನಾಲ್ವರು ಮಕ್ಕಳನ್ನು ಕಾಲುವೆಗೆ ಎಸೆದು ಆತ್ಮಹತ್ಯೆ ಪ್ರಕರಣ: ಇಂದು ಇಬ್ಬರು ಮಕ್ಕಳಿಗಾಗಿ ಶೋಧ ಕಾರ್ಯಾಚರಣೆ

ನಾಲ್ವರು ಮಕ್ಕಳನ್ನು ಕಾಲುವೆಗೆ ಎಸೆದು ಆತ್ಮಹತ್ಯೆ ಪ್ರಕರಣ: ಇಂದು ಇಬ್ಬರು ಮಕ್ಕಳಿಗಾಗಿ ಶೋಧ ಕಾರ್ಯಾಚರಣೆ

ವಿಜಯಪುರ: ನಾಲ್ಕು ಮಕ್ಕಳ ಜೊತೆಗೆ ಕಾಲುವೆಗೆ ಹಾರಿ ತಾಯಿ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ 7 ಗಂಟೆಯಿಂದ ಶೋಧ ಕಾರ್ಯಾಚರಣೆ ಪುನಃ ಆರಂಭಿಸಲಾಗುತ್ತದೆ.

ಅವಳಿ ಮಕ್ಕಳಾದ ಹಸನ್ ಮತ್ತು ಹುಸೇನ್ ಭಜಂತ್ರಿ ಶವಗಳಿಗಾಗಿ ಆಲಮಟ್ಟಿ ಎಡ ದಂಡೆ ಕಾಲುವೆಯಲ್ಲಿ ಇಂದು ಕೂಡ ಶೋಧ ಕಾರ್ಯಾಚರಣೆ ನಡೆಸಲಾಗುವುದು. ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಬಳಿ ಶೋಧ ಕಾರ್ಯಾಚರಣೆ ನಡೆಯಲಿದೆ.

ನಿನ್ನೆ ತೆಲಗಿ ಗ್ರಾಮದಲ್ಲಿ ತನು ಭಜಂತ್ರಿ(5), ರಕ್ಷಾ ಭಜಂತ್ರಿ(3) ಶವ ಪತ್ತೆಯಾಗಿತ್ತು. ಇಂದು ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು, ಮುಳುಗುತಜ್ಞರು ಹುಡುಕಾಟ ನಡೆಸಲಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ತಾಯಿ ಭಾಗ್ಯರನ್ನು ಸ್ಥಳೀಯರು ನಿನ್ನೆ ರಕ್ಷಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಿನ್ನೆ ಕತ್ತಲಾಗಿದ್ದರಿಂದ ಶೋಧ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ನನ್ನ ಪತಿಯೇ ಮಕ್ಕಳು ಮತ್ತು ನನ್ನನ್ನು ನೀರಿಗೆ ತಳ್ಳಿದ್ದಾಗಿ ಭಾಗ್ಯಶ್ರೀ ಆಸ್ಪತ್ರೆಯಲ್ಲಿ ಹೇಳಿಕೆ ನೀಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular