ಡಿಜಿಟಲ್ ಡೆಸ್ಕ್ : ವಿಜಯಪುರ-ಮಂಗಳೂರು ಸೆಂಟ್ರಲ್-ವಿಜಯಪುರ (07377/07378) ವಿಶೇಷ ಎಕ್ಸ್ಪ್ರೆಸ್ ರೈಲುಗಳ ಸಂಚಾರ ಅವಧಿಯನ್ನು 2025 ರ ಡಿಸೆಂಬರ್ವರೆಗೆ ವಿಸ್ತರಿಸಿ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.
ಈ ರೈಲುಗಳು ಈಗಿರುವ ಮಾರ್ಗ, ನಿಲುಗಡೆಗಳು ಹಾಗೂ ಬೋಗಿಗಳ ಸಂಯೋಜನೆಯೊಂದಿಗೆ ಮುಂದುವರಿಯಲಿವೆ. ಇದಲ್ಲದೆ, ಜುಲೈ 1, 2025 ರಿಂದ ಜಾರಿಗೆ ಬರುವಂತೆ 07378 ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್ಪ್ರೆಸ್ನ ವೇಳಾಪಟ್ಟಿಯಲ್ಲಿ ಪರಿಷ್ಕರಣೆ ಮಾಡಲಾಗಿದೆ.
ಈ ಹಿಂದೆ ಜೂನ್ 30, 2025 ರವರೆಗೆ ಸಂಚರಿಸಲಿದೆ ಎಂದು ಸೂಚಿಸಲಾಗಿದ್ದ 07377 ವಿಜಯಪುರ-ಮಂಗಳೂರು ಸೆಂಟ್ರಲ್ ವಿಶೇಷ ಎಕ್ಸ್ಪ್ರೆಸ್ ರೈಲು ಈಗ ಜುಲೈ 1 ರಿಂದ ಡಿಸೆಂಬರ್ 31, 2025 ರವರೆಗೆ ವಿಸ್ತರಿಸಲ್ಪಟ್ಟಿದೆ. ಅದೇ ರೀತಿ, ಜುಲೈ 1, 2025 ರವರೆಗೆ ಸಂಚರಿಸಲಿದೆ ಎಂದು ಸೂಚಿಸಲಾಗಿದ್ದ 07378 ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್ಪ್ರೆಸ್ ರೈಲು ಈಗ ಜುಲೈ 2, 2025 ರಿಂದ ಜನವರಿ 1, 2026 ರವರೆಗೆ ವಿಸ್ತರಿಸಲಾಗಿದೆ.
ಜುಲೈ 1, 2025 ರಿಂದ ಜಾರಿಗೆ ಬರುವಂತೆ 07378 ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್ಪ್ರೆಸ್ ರೈಲಿನ ಪರಿಷ್ಕೃತ ವೇಳಾಪಟ್ಟಿ ಇಂತಿದೆ.

