HomeUncategorizedಹೈದರಾಬಾದ್‌ನಲ್ಲಿ 'ರಣಬಾಲಿ' ಹಂಗಾಮಾ: ಮಧ್ಯಾಹ್ನ ಪ್ರೆಸ್ ಮೀಟ್, ಸಂಜೆಗೆ ಬಿಡುಗಡೆಯಾಗಲಿದೆ ಬಿಗ್ ಬಜೆಟ್ ಸಿನಿಮಾದ ಟ್ರೇಲರ್

ಹೈದರಾಬಾದ್‌ನಲ್ಲಿ ‘ರಣಬಾಲಿ’ ಹಂಗಾಮಾ: ಮಧ್ಯಾಹ್ನ ಪ್ರೆಸ್ ಮೀಟ್, ಸಂಜೆಗೆ ಬಿಡುಗಡೆಯಾಗಲಿದೆ ಬಿಗ್ ಬಜೆಟ್ ಸಿನಿಮಾದ ಟ್ರೇಲರ್

ಚಿತ್ರಪ್ರೇಮಿಗಳಲ್ಲಿ ತೀವ್ರ ಕುತೂಹಲ ಮೂಡಿಸಿರುವ ‘ಶ್ಯಾಮ್ ಸಿಂಘ ರಾಯ್’ ಖ್ಯಾತಿಯ ನಿರ್ದೇಶಕ ರಾಹುಲ್ ಸಂಕೃತ್ಯನ್ ಹಾಗೂ ನಟ ವಿಜಯ ದೇವರಕೊಂಡ ಕಾಂಬಿನೇಷನ್‌ನ ಬಹುನಿರೀಕ್ಷಿತ ‘ರಣಬಾಲಿ’ ಸಿನಿಮಾದ ಟ್ರೇಲರ್ ಇಂದು ಅನಾವರಣಗೊಳ್ಳುತ್ತಿದೆ. ನಟಿ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಪೀರಿಯಡ್ ಆಕ್ಷನ್ ಡ್ರಾಮಾ ಇದೇ ಅಕ್ಟೋಬರ್ 16 ರಂದು ಬಹುಭಾಷೆಗಳಲ್ಲಿ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಜ್ಜಾಗಿದೆ.

ಚಿತ್ರದ ಪ್ರಚಾರ ಕಾರ್ಯಗಳಿಗೆ ವೇಗ ನೀಡಿರುವ ನಿರ್ಮಾಪಕರು ಇಂದು ಅದ್ದೂರಿ ಟ್ರೇಲರ್ ಬಿಡುಗಡೆ ಸಮಾರಂಭವನ್ನು ಆಯೋಜಿಸಿದ್ದಾರೆ. ಮಧ್ಯಾಹ್ನ 2 ಗಂಟೆಯ ನಂತರ ಹೈದರಾಬಾದ್‌ನ ದಾಸಪಲ್ಲಾ ಹೋಟೆಲ್‌ನಲ್ಲಿ ಮಾಧ್ಯಮ ಗೋಷ್ಠಿ ನಡೆಯಲಿದ್ದು, ಚಿತ್ರತಂಡದ ಪ್ರಮುಖರು ಮತ್ತು ತಾಂತ್ರಿಕ ವರ್ಗದವರು ಇದರಲ್ಲಿ ಭಾಗವಹಿಸಲಿದ್ದಾರೆ. ಇನ್ನು ಬ್ಲಾಕ್‌ಬಸ್ಟರ್ ಸುಳಿವು ನೀಡಲಿರುವ 3 ನಿಮಿಷ 47 ಸೆಕೆಂಡ್‌ಗಳ ಸುದೀರ್ಘ ಟ್ರೇಲರ್ ಅನ್ನು ಸಂಜೆ 6:03 ಕ್ಕೆ ಡಿಜಿಟಲ್ ಮಾಧ್ಯಮಗಳಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು.

ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯು ಅತ್ಯಂತ ದುಬಾರಿ ವೆಚ್ಚದಲ್ಲಿ ನಿರ್ಮಿಸಿರುವ ಈ ಚಿತ್ರಕ್ಕೆ ಪ್ರಸಿದ್ಧ ಸಂಗೀತ ನಿರ್ದೇಶಕ ಜೋಡಿ ಅಜಯ್-ಅತುಲ್ ಅವರ ಸಂಗೀತವಿದೆ. ಬಿಡುಗಡೆಯ ದಿನಾಂಕ ಹತ್ತಿರವಾಗುತ್ತಿರುವಂತೆಯೇ ಚಿತ್ರದ ಮೇಲಿನ ನಿರೀಕ್ಷೆಗಳು ಹೆಚ್ಚಾಗಿದ್ದು, ಇಂದು ಹೊರಬರಲಿರುವ ಟ್ರೇಲರ್ ಸಿನಿಮಾದ ಅಸಲಿ ಮೆರುಗನ್ನು ಪ್ರೇಕ್ಷಕರ ಮುಂದಿಡಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular