HomeLatest NewsBREAKING: ನಟ ವಿಜಯ್ ರ್ಯಾಲಿಯಲ್ಲಿ ಕಾಲ್ತುಳಿತ ದುರಂತ: ಮೃತಪಟ್ಟಿರುವ 40 ಜನರಲ್ಲಿ 35 ಜನರ ಗುರುತು...

BREAKING: ನಟ ವಿಜಯ್ ರ್ಯಾಲಿಯಲ್ಲಿ ಕಾಲ್ತುಳಿತ ದುರಂತ: ಮೃತಪಟ್ಟಿರುವ 40 ಜನರಲ್ಲಿ 35 ಜನರ ಗುರುತು ಪತ್ತೆ

ಚೆನ್ನೈ: ನಟ ವಿಜಯ್ ಅವರ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಕರೂರಿನಲ್ಲಿ ಸಂಭವಿಸಿದ್ದ ಭೀಕರ ಕಾಲ್ತುಳಿತ ದುರಂತದಲ್ಲಿ ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಮೃತಪಟ್ಟವರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ. ನೂರಾರು ಜನರು ಗಾಯಗೊಂಡಿದ್ದಾರೆ.

ಕಾಲ್ತುಳಿತ ದುರಂತದಲ್ಲಿ ಸಾವನ್ನಪ್ಪಿರುವವರ ಗುರುತು ಪತ್ತೆ ಹಚ್ಚಲಾಗುತ್ತಿದೆ. ಮೃತಪಟ್ಟಿರುವ 40 ಜನರಲ್ಲಿ 35 ಜನರ ಗುರುತು ಪತ್ತೆಯಾಗಿದೆ. ಈರೋಡ್, ತಿರುಪುರ, ಧಾರಾಪುರಂ ಜಿಲ್ಲೆಯ ತಲಾ ಇಬ್ಬರು ಮೃತಪಟ್ಟಿದ್ದಾರೆ. ಕರೂರು ಜಿಲ್ಲೆಯವರೇ ಆದ 28 ಜನರು ಸಾವನ್ನಪ್ಪಿದ್ದಾರೆ. ಹಾಗೂ ಸೇಲಂ ನ ಓರ್ವ ಸಾವನ್ನಪ್ಪಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಲ್ತುಳಿತದ ದುರಂತದಲ್ಲಿ ಮೃತಪಟ್ಟವರಲ್ಲಿ ಕರೂರು ಜಿಲ್ಲೆಯವರೇ ಹೆಚ್ಚಿದ್ದಾರೆ. ಉಳಿದವರ ಗುರುತು ಪತ್ತೆಕಾರ್ಯ ನಡೆಸಲಾಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

Most Popular