ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: 15,000 ಸ್ಕಾಲರ್ ಶಿಪ್ ಗಾಗಿ ಅರ್ಜಿ ಸಲ್ಲಿಕೆ ಆರಂಭ

ಬೆಂಗಳೂರು: ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ವಿದ್ಯಾಸಿರಿ ಯೋಜನೆಯದಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಕೆಗೆ ಆಹ್ವಾನಿಸಲಾಗಿದೆ. ಎಸ್.ಎಸ್.ಎಲ್.ಸಿ ಬಳಿಕ ಉನ್ನತ ಶಿಕ್ಷಣ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಬಹುದು.

ಎಸ್.ಎಸ್.ಎಲ್.ಸಿ ಅಥವಾ ಮೆಟ್ರಿಕ್ ಮುಗಿಸಿ ಉನ್ನತ ಶಿಕ್ಷಣಕ್ಕೆ ಸೇರಿಕೊಂಡು, ಹಾಸ್ಟೆಲ್ ಸೌಲಭ್ಯ ಸಿಗದ ವಿದ್ಯಾರ್ಥಿಗಳಿಗೆ ಈ ಸ್ಕಾಲರ್ ಸಿಪ್ ಆರ್ಥಿಕ ಸಹಾಯವಾಗಲಿದೆ.

ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 1,500 ರೂಪಾಯಿಯಂತೆ 10 ತಿಂಗಳ ಶೈಕ್ಷಣಿಕ ವರ್ಷದ ಅವಧಿಗೆ 15,000 ರೂಪಾಯಿಗಳ ಸ್ಕಾಲರ್ ಶಿಪ್ ನೀದಲಾಗುತ್ತದೆ. SC/ST ಅಥವಾ OBC ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಈ ಅನುಕೂಲ ದೊರೆಯಲಿದೆ. ಕ್ಯಾಸ್ಟ್ ಸರ್ಟಿಫಿಕೇಟ್ ಇರಬೇಕು. 2A, 3A ಅಥವಾ 3B OBC ವಿದ್ಯಾರ್ಥಿ ಆದರೆ ಅವರ ಕುಟುಂಬದ ವಾರ್ಷಿಕ ಆದಾಯ 1 ಲಕ್ಷದ ಒಳಗಿರಬೇಕು. ಪ್ರವರ್ಗ 1 ಕ್ಕೆ ಸೇರಿದ ವಿದ್ಯಾರ್ಥಿ ಆದರೆ, ಅವರ ಕುಟುಂಬದ ವಾರ್ಷಿಕ ಆದಾಯ 2.50 ಲಕ್ಷದ ಒಳಗಿರಬೇಕು. ಸುಮಾರು 7 ವರ್ಷಗಳಿಂದ ನಮ್ಮ ರಾಜ್ಯದಲ್ಲಿ ಓದಿದ್ದು, 75% ಗಿಂತ ಹೆಚ್ಚು ಮಾರ್ಕ್ಸ್ ಪಡೆದಿರಬೇಕು.

ವಿದ್ಯಾರ್ಥಿಗಳು ರಾಜ್ಯದ ಯುನಿವರ್ಸಿಟಿ ಅಡಿಯಲ್ಲಿ ಬರುವ ಸರ್ಕಾರಿ, ಪ್ರೈವೇಟ್ ಅಥವಾ ಅನುದಾನಿತ ಕಾಲೇಜು ಅಥವಾ ಸಂಸ್ಥೆಯಲ್ಲಿ ಓದುತ್ತಿರಬೇಕು. ಹಾಸ್ಟೆಲ್ ಅಡ್ಮಿಷನ್, ಊಟ ವಸತಿ ಯೋಜನೆಯಲ್ಲಿ ಒಂದು ಸೌಲಭ್ಯ ಪಡೆಯಬಹುದು.

ಅಗತ್ಯ ದಾಖಲೆಗಳು :

ಎಸ್.ಎಸ್.ಎಲ್ ಸಿ ತರಗತಿ ಮಾರ್ಕ್ಸ್ ಕಾರ್ಡ್
ಪಿಯುಸಿ ಮಾರ್ಕ್ಸ್ ಕಾರ್ಡ್
ಆಧಾರ್ ಕಾರ್ಡ್
ಬ್ಯಾಂಕ್ ಪಾಸ್ ಬುಕ್
ಕ್ಯಾಸ್ಟ್ ಸರ್ಟಿಫಿಕೇಟ್
ಇನ್ಕಮ್ ಸರ್ಟಿಫಿಕೇಟ್
ಪಾಸ್ ಪೋರ್ಟ್ ಸೈಜ್ ಫೋಟೋ
ಅಡ್ಮಿಷನ್ ಫೀಸ್ ರೆಸಿಪ್ಟ್
ವಾಸಸ್ಥಳ ದೃಢೀಕರಣ ಪತ್ರ

SSP ಪೋರ್ಟಲ್ ಮೂಲಕ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಬಹುದು

ವಿದ್ಯಾರ್ಥಿಗಳು https://ssp.postmatric.karnataka.gov.in ಲಿಂಕ್ ಓಪನ್ ಮಾಡಿ, ಹೋಮ್ ಪೇಜ್ ನಲ್ಲಿ ಅಕೌಂಟ್ ಓಪನ್ ಮಾಡುವ ಆಪ್ಶನ್ ಸೆಲೆಕ್ಟ್ ಮಾಡಿ. ಆಧಾರ್ ಕಾರ್ಡ್ ನಲ್ಲಿ ಇರುವ ಹಾಗೆ ನಿಮ್ಮ ಹೆಸರನ್ನು ಹಾಕಿ ಅರ್ಜಿ ತುಂಬಿ. ಓಟಿಪಿ ಆಪ್ಶನ್ ಸೆಲೆಕ್ಟ್ ಮಾಡಿ, ಕ್ಯಾಪ್ಚ ಕೋಡ್ ಹಾಕಿ, ಅಪ್ಲಿಕೇಶನ್ ಗೆ ಮುಂದುವರಿಯಿರಿ. ಅರ್ಜಿ ವಿವರ ತುಂಬಿ ಸಬ್ ಮಿಟ್ಮಾಡಿದರೆ ನಿಮ್ಮ ಫೋನ್ ಗೆ OTP ಬರುತ್ತದೆ. OTP ಹಾಕಿದ ನಂತರ ನಿಮ್ಮ ID password ಲಾಗಿನ್ ಮಾಡುವುದಕ್ಕೆ ಸಿಗುತ್ತದೆ. ಈ ಐಡಿ ಪಾಸ್ವರ್ಡ್ ಬಳಸಿ, SSP ಪೋರ್ಟಲ್ ಲಾಗಿನ್ ಮಾಡಬೇಕು. ಬಳಿಕ ಎಲ್ಲಾ ವಿವರಗಳನ್ನು ತುಂಬಿ ಭರ್ತಿ ಮಾಡಿ. ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಿ. ಅಪ್ಲಿಕೇಶನ್ ಸ್ಟೇಟಸ್ ಕೂಡ ವೆಬ್ ಸೈಟ್ ನಲ್ಲಿ ನೋದಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read