HomeKarnatakaಸದನದಲ್ಲಿ ಅಹೋರಾತ್ರಿ ಧರಣಿ: ಸರ್ಕಾರದ ವಿರುದ್ಧ ತಾಳ ಹಿಡಿದು ಭಜನೆ ಮಾಡಿದ ವಿಪಕ್ಷ ಸದಸ್ಯರು; ವಿಧಾನಸೌಧದಲ್ಲೇ...

ಸದನದಲ್ಲಿ ಅಹೋರಾತ್ರಿ ಧರಣಿ: ಸರ್ಕಾರದ ವಿರುದ್ಧ ತಾಳ ಹಿಡಿದು ಭಜನೆ ಮಾಡಿದ ವಿಪಕ್ಷ ಸದಸ್ಯರು; ವಿಧಾನಸೌಧದಲ್ಲೇ ವಾಕಿಂಗ್, ಯೋಗ

ಬೆಂಗಳೂರು: ಮುಡಾ ಅಕ್ರಮ ಪ್ರಕರಣದ ಚರ್ಚೆಗೆ ಅವಕಾಶ ನೀಡದಿರುವುದನ್ನು ಖಂಡಿಸಿ ಬಿಜೆಪಿ ಹಗೂ ಜೆಡಿಎಸ್ ಸದಸ್ಯರು ಸದನದಲ್ಲಿಯೇ ಅಹೋರಾತ್ರಿ ಧರಣಿ ನಡೆಸಿದ್ದಾರೆ.

ವಿಪಕ್ಷ ನಾಯಕ ಆರ್.ಅಶೋಕ್, ಬಿ.ವೈ.ವಿಜಯೇಂದ್ರ, ಅಶ್ವತ್ಥನಾರಾಯಣ, ಶರವಣ, ಪ್ರಭು ಚೌವ್ಹಾಣ್, ಸಿ.ಟಿ.ರವಿ, ರವಿ ಕುಮಾರ್ ಸೇರಿದಂತೆ ಬಿಜೆಪಿ ಶಾಸಕರು, ಸದಸ್ಯರು ಸದನದಲ್ಲಿ ತಾಳ ಹಿಡಿದು ಭಜನೆ, ಹಾಡು ಹಾಡುತ್ತಾ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರಾತ್ರಿ ವಿಧಾನಸೌಧದ ಒಳಗೆ ಮಲಗಿದ ಬಿಜೆಪಿ-ಜೆಡಿಎಸ್ ಸದಸ್ಯರು ಬೆಳಿಗ್ಗೆ ಎದ್ದು ವಿಧಾನಸೌಧದ ಆವರಣದಲ್ಲಿ ವಾಕಿಂಗ್, ಯೋಗಾಸನ ಮಾಡಿ ಗಮನ ಸೆಳೆದರು. ಮುಡಾ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular