HomeEntertainment'ಲಾಫಿಂಗ್ ಬುದ್ಧ' ಚಿತ್ರದ ವಿಡಿಯೋ ಸಾಂಗ್ ರಿಲೀಸ್

‘ಲಾಫಿಂಗ್ ಬುದ್ಧ’ ಚಿತ್ರದ ವಿಡಿಯೋ ಸಾಂಗ್ ರಿಲೀಸ್

ಎಂ ಭರತ್ ರಾಜ್ ನಿರ್ದೇಶನದ ‘ಲಾಫಿಂಗ್ ಬುದ್ಧ’ ಚಿತ್ರದ ವಿಡಿಯೋ ಹಾಡನ್ನು ಇಂದು ರಿಷಬ್ ಶೆಟ್ಟಿ ಫಿಲಂಸ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ‘ಎಂಥಾ ಚಂದಾನೆ ಇವಳು’ ಎಂಬ ಈ ಹಾಡಿಗೆ ಕಪಿಲನ್ ಮತ್ತು ವಿಷ್ಣು ವಿಜಯ್ ಧ್ವನಿಯಾಗಿದ್ದು, ಕೆ ಕಲ್ಯಾಣ್ ಅವರ ಸಾಹಿತ್ಯವಿದೆ.

ಈ ಚಿತ್ರವನ್ನು ರಿಶಬ್ ಶೆಟ್ಟಿ ತಮ್ಮ ರಿಶಬ್ ಶೆಟ್ಟಿ ಫಿಲಂಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದು, ಪ್ರಮೋದ್ ಶೆಟ್ಟಿ ತೇಜು ಬೆಳವಾಡಿ ಸೇರಿದಂತೆ ಸುಂದರ್ ರಾಜ್, ದಿಗಂತ್ ಮಂಚಾಲೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆ ಎಂ ಪ್ರಕಾಶ್ ಸಂಕಲನ, ಎಸ್ ಚಂದ್ರಶೇಖರನ್  ಛಾಯಾಗ್ರಹಣ, ಆಕ್ಷನ್ ಮೂರ್ತಿ ಮತ್ತು ಗೌತಮ್ ರಾಜ್ ಸಾಹಸ ನಿರ್ದೇಶನ, ಅನಿರುದ್ಧ್ ಮಹೇಶ್, ಎಂ. ರಾಜ್, ಮತ್ತು ರಘು ನಿಡುವಳ್ಳಿ ಸಂಭಾಷಣೆ,  ಕುಲಭೂಷಣ್ ಅವರ ನೃತ್ಯ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular