HomeIndiaViral Video |‌ ಕುಡಿದ ಅಮಲಿನಲ್ಲಿ ಚಲಿಸುವ ಕಾರಿನ ಮೇಲೆ ಪುಷ್ ಅಪ್; ಯುವಕ ಅರೆಸ್ಟ್

Viral Video |‌ ಕುಡಿದ ಅಮಲಿನಲ್ಲಿ ಚಲಿಸುವ ಕಾರಿನ ಮೇಲೆ ಪುಷ್ ಅಪ್; ಯುವಕ ಅರೆಸ್ಟ್

ಕುಡಿದ ಅಮಲಿನಲ್ಲಿ ಯುವಕನೊಬ್ಬ ಚಲಿಸುತ್ತಿರುವ ಕಾರಿನ ಮೇಲೆ ಪುಷ್ ಅಪ್ ಮಾಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಆರೋಪಿಯನ್ನು ಬಂಧಿಸಿರುವ ಪೊಲೀಸರು ಕಾರಿನ ಮಾಲೀಕನಿಗೆ ದಂಡದ ಬಿಸಿ ಮುಟ್ಟಿಸಿದ್ದಾರೆ.

ಇಂತಹದೊಂದು ಘಟನೆ ಗುರುಗ್ರಾಮದಲ್ಲಿ ನಡೆದಿದ್ದು, ಕಾರಿನಲ್ಲಿ ಮದ್ಯಪಾನ ಮಾಡಿಕೊಂಡು ಹೋಗುತ್ತಿದ್ದ ಯುವಕರು ಕಿಟಕಿಯಿಂದ ದೇಹವನ್ನು ಹೊರ ಹಾಕಿದ್ದರು. ಒಬ್ಬನಂತೂ ಇನ್ನಷ್ಟು ಹುಚ್ಛಾಟ ಮೆರೆದಿದ್ದು, ಕಾರಿನ ಮೇಲೆ ಪುಷ್ ಅಪ್ ಮಾಡಿದ್ದ. ಪಕ್ಕದಲ್ಲಿಯೇ ಹೋಗುತ್ತಿದ್ದ ಮತ್ತೊಂದು ಕಾರಿನವರು ಇದರ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವಿಡಿಯೋದ ಮಾಹಿತಿ ಪೊಲೀಸರಿಗೆ ತಿಳಿಯುತ್ತಿದ್ದಂತೆ ಕಾರಿನ ಮಾಲೀಕನಿಗೆ 6,000 ರೂಪಾಯಿಗಳ ದಂಡದ ಚಲನ್ ನೀಡಲಾಗಿದ್ದು, ಇನ್ನು ಪುಷ್ ಅಪ್ ಮಾಡಿದ್ದ ಯುವಕ ಲೋಕೇಶ್ ನನ್ನು ಬಂಧಿಸಲಾಗಿದೆ. ಅಲ್ಲದೆ ಇಂತಹ ಕೃತ್ಯಗಳಲ್ಲಿ ತೊಡಗಿಕೊಂಡವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular