ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬಳು ತನ್ನ ಸಂಪತ್ತನ್ನು ಪ್ರದರ್ಶಿಸುತ್ತಿರುವ ವಿಡಿಯೊ ಇತ್ತೀಚೆಗೆ ವೈರಲ್ ಆಗಿದೆ. ಪ್ಲಾಸ್ಟಿಕ್ ಚೀಲವೊಂದರಿಂದ 500 ರೂಪಾಯಿ ಮುಖಬೆಲೆಯ ನೋಟುಗಳ ಕಂತೆಗಳನ್ನು ತೆಗೆದು ತೋರಿಸುತ್ತಿರುವ ಈ ವಿಡಿಯೊಗೆ ಕೋಟ್ಯಂತರ ವೀಕ್ಷಣೆಗಳು ಬಂದಿವೆ.
ಸಾಮಾಜಿಕ ಮಾಧ್ಯಮವು ಇಂದು ಪ್ರದರ್ಶನದ ವೇದಿಕೆಯಾಗಿ ಮಾರ್ಪಟ್ಟಿದೆ. ಇಲ್ಲಿ ಜನರು ತಮ್ಮ ಐಶ್ವರ್ಯವನ್ನು ವಿಚಿತ್ರವಾಗಿ ತೋರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ವೈರಲ್ ಆಗಿರುವ ಈ ವಿಡಿಯೊದಲ್ಲಿ ಯುವತಿಯೊಬ್ಬಳು ಹಾಸಿಗೆಯ ಮೇಲೆ ಕುಳಿತು ಪ್ಲಾಸ್ಟಿಕ್ ಚೀಲವನ್ನು ತಿರುಗಿಸುತ್ತಿದ್ದಾಳೆ. ಕೂಡಲೇ ಚೀಲದಿಂದ 500 ರೂಪಾಯಿ ಮುಖಬೆಲೆಯ ನೋಟುಗಳ ಕಂತೆಗಳು ಹೊರಬೀಳುತ್ತವೆ. ಇದನ್ನು ನೋಡಿದ ಜನರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಆದರೆ, ಈ ಪ್ರದರ್ಶನದ ಭರದಲ್ಲಿ ಯುವತಿ ಒಂದು ಸಣ್ಣ ತಪ್ಪು ಮಾಡಿದ್ದಾಳೆ. ಆಕೆ ಪ್ಲ್ಯಾಸ್ಟರ್ ಮಾಡದ ಗೋಡೆಯ ಮುಂದೆ ಈ ವಿಡಿಯೊವನ್ನು ಚಿತ್ರೀಕರಿಸಿದ್ದಾಳೆ. ಇದನ್ನು ಗಮನಿಸಿದ ನೆಟ್ಟಿಗರು, ‘ಇಷ್ಟೊಂದು ಹಣವಿದ್ದರೂ ಗೋಡೆಗೆ ಪ್ಲ್ಯಾಸ್ಟರ್ ಮಾಡಿಸಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಕೆಲವರು ಈ ನೋಟುಗಳು ನಕಲಿಯಾಗಿರಬಹುದು ಎಂದೂ ಅನುಮಾನ ವ್ಯಕ್ತಪಡಿಸಿದ್ದಾರೆ.
@raja.mitra.98 ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಈ ಸುದ್ದಿ ಬರೆಯುವ ಹೊತ್ತಿಗೆ ಲಕ್ಷಾಂತರ ಜನರು ಇದನ್ನು ಲೈಕ್ ಮಾಡಿದ್ದು, ಕೋಟ್ಯಂತರ ಜನರು ವೀಕ್ಷಿಸಿದ್ದಾರೆ. ಅನೇಕರು ತಮಾಷೆಯ ಕಾಮೆಂಟ್ಗಳನ್ನು ಸಹ ಮಾಡಿದ್ದಾರೆ. ಒಬ್ಬ ಬಳಕೆದಾರರು, ‘ದೀದಿ ರಸ್ತೆ ಬದಿಯ ಜಾಗ ಮಾರಿದಂತಿದೆ’ ಎಂದು ಕಾಮೆಂಟ್ ಮಾಡಿದರೆ, ಇನ್ನೊಬ್ಬರು ‘ಇವು ನಕಲಿ ನೋಟುಗಳಿರಬೇಕು, ಅದಕ್ಕಾಗಿಯೇ ಇಷ್ಟು ಪ್ರದರ್ಶನ’ ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರಂತೂ ‘ಇಂಥವರ ಮನೆ ಮೇಲೆ ದಾಳಿ ಆಗುತ್ತೆ’ ಎಂದು ಎಚ್ಚರಿಸಿದ್ದಾರೆ.
